ನಟ ಸೋನು ಸೂದ್​ಗೆ ಚುನಾವಣಾ ಆಯೋಗ ನೀಡಿತೊಂದು ವಿಶೇಷ ಜವಾಬ್ದಾರಿ

78179880
Published on

ಮುಂಬೈ: ಲಾಕ್​ಡೌನ್​ ಅವಧಿಯಲ್ಲಿ ಸಾಕಷ್ಟು ಜನೋಪಕಾರಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಬಾಲಿವುಡ್ ನಟ ಸೂದ್​ಗೆ ಇದೀಗ ಭಾರತೀಯ ಚುನಾವಣಾ ಆಯೋಗ ವಿಶೇಷ ಜವಾಬ್ದಾರಿಯೊಂದನ್ನು ವಹಿಸಿದೆ.

ಪಂಜಾಬ್​ನಲ್ಲಿ ವಿಧಾನಸಭಾ ಕ್ಷೇತ್ರದ ಚುನಾವಣೆಗಳು ಆರಂಭವಾಗಲಿದ್ದು, ಆ ಚುನಾವಣೆಯ ಸ್ಟೇಟ್​ ಐಕಾನ್​ ಆಗಿ ಸೋನು ಅವರನ್ನು ಭಾರತೀಯ ಚುನಾವಣಾ ಆಯೋಗ ನಿಯೋಜಿಸಿದೆ. ಅಂದಹಾಗೆ, ಪಂಜಾಬ್​ನಲ್ಲಿ 2022ರಲ್ಲಿ ಚುನಾವಣೆ ನಡೆಯಲಿದೆ.

ಚುನಾವಣಾ ಆಯೋಗದ ಈ ವಿಶೇಷ ಜವಾಬ್ದಾರಿ ನೀಡುತ್ತಿದ್ದಂತೆ ಪ್ರತಿಕ್ರಿಯಿಸುವ ಸೋನು, ‘ಈ ಜವಾಬ್ದಾರಿ ನೀಡಿದ್ದಕ್ಕೆ ರಾಜ್ಯ ಸರ್ಕಾರಕ್ಕೆ ನಾನು ಕೃತಜ್ಱನಾಗಿದ್ದೇನೆ. ಪಂಜಾಬ್​ನಲ್ಲಿ ಹುಟ್ಟಿದ ನನಗೆ ಚುನಾವಣೆ ಸಂದರ್ಭದಲ್ಲಿ ಸ್ಟೇಟ್ ಐಕಾನ್​ ಎಂಬ ಜವಾಬ್ದಾರಿ ನೀಡಿದ್ದಕ್ಕೆ ನಾನು ಧನ್ಯ. ನನ್ನ ರಾಜ್ಯ ಮೆಚ್ಚುವಂಥ ಕೆಲಸ ಮಾಡುವೆ’ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net