

ಬೆಂಗಳೂರು: ರಾಷ್ಟ್ರದಲ್ಲಿಯೇ ದೊಡ್ಡ ಸದ್ದು ಮಾಡಿದ್ದ ‘ಚುನಾವಣಾ ಬಾಂಡ್’ ಸಂಬಂಧ ಕೇಂದ್ರ ಹಣಕಾಸು ಸಚಿವೆ ಸೇರಿ ಐವರ ವಿರುದ್ಧ ಎ್ಐಆರ್ ದಾಖಲಾಗಿದೆ. ಎಲೆಕ್ಟ್ರಾಲ್ ಬಾಂಡ್ ನೆಪದಲ್ಲಿ ಖಾಸಗಿ ಕಂಪನಿಗಳಿಂದ ಅಂದಾಜು 8 ಸಾವಿರ ಕೋಟಿ ರೂ. ಸಂಗ್ರಹ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದ್ದು, ಆರೋಪ-ಪ್ರತ್ಯಾರೋಪಕ್ಕೂ ಕಾರಣವಾಗಿದೆ.
ಜನಾಧಿಕಾರ ಸಂಘರ್ಷ ಪರಿಷತ್ (ಜೆಎಸ್‌ಪಿ) ಸಹ ಅಧ್ಯಕ್ಷ ಆದರ್ಶ ಅಯ್ಯರ್, 42ನೇ ಎಸಿಎಂಎಂ, ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಎ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶಿಸಿತ್ತು. ಇದರ ಮೇರೆಗೆ ತಿಲಕನಗರ ಪೊಲೀಸರು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಇಡಿ ಅಧಿಕಾರಿಗಳು, ಕೇಂದ್ರ ಬಿಜೆಪಿ ಪದಾಧಿಕಾರಿಗಳು, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ರಾಜ್ಯ ಬಿಜೆಪಿ ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 384 (ಸುಲಿಗೆ), 120ಚಿ (ಅಪರಾಧಿಕ ಒಳಸಂಚು), 34 (ಸಮಾನ ಉದ್ದೇಶ) ಆರೋಪದಡಿ ಎ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ನಿರ್ಮಲಾ ಸೀತಾರಾಮನ್ ಮತ್ತು ಇಡಿ ಅಧಿಕಾರಿಗಳು ಸಾಂವಿಧಾನಿಕ ಹುದ್ದೆ ಹೊಂದಿದ್ದರು. ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳು ಮತ್ತು ರಾಜಾಧ್ಯಕ್ಷರಾಗಿದ್ದ ನಳೀನ್‌ಕುಮಾರ್ ಕಟೀಲ್ ಸೇರಿ ಇತರರು ಚುನಾವಣಾ ಬಾಂಡ್ ವಸೂಲಿಗೆ ಸಂಚು ರೂಪಿಸಿದ್ದರು. ಅದಕ್ಕಾಗಿ ಎಂಎನ್‌ಸಿ ಮತ್ತು ಟಿಎನ್‌ಸಿ ಕಾರ್ಪೋರೇಟ್ ಕಂಪನಿಗಳ ಸಿಇಒ ಮತ್ತು ಎಂಡಿ ಅವರಿಂದ 8 ಸಾವಿರ ಕೋಟಿ ರೂ.ಗೂ ಹೆಚ್ಚು ಹಣವನ್ನು ವಸೂಲಿ ಮಾಡಿದ್ದಾರೆ.
ನಿರ್ಮಲಾ ಸೀತಾರಾಮನ್ ಮತ್ತು ಇಡಿ ಅಧಿಕಾರಿಗಳ ಸಹಾಯದಿಂದ ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿರುವ ಬಿಜೆಪಿ ಪದಾಧಿಕಾರಿಗಳು ಲಾಭಕ್ಕಾಗಿ ರಹಸ್ಯ ಮಾರ್ಗವಾಗಿ ಸಾವಿರಾರು ಕೋಟಿ ಸಂಗ್ರಹಿಸಿದ್ದಾರೆ.
ಇಡಿ ಅಧಿಕಾರಿಗಳನ್ನು ಬಳಸಿಕೊಂಡು ಹಲವಾರು ಕಾರ್ಪೋರೇಟ್ ಕಂಪನಿಗಳ ಮೇಲೆ ದಾಳಿ ಮತ್ತು ಜಪ್ತಿ ಮಾಡುವುದರ ಮೂಲಕ ಅಲ್ಲಿನ ಸಿಇಒ ಮತ್ತು ಎಂಡಿಗಳನ್ನು ಬಂಧಿಸಿದ್ದರು. ಇದರಿಂದ ಹೆದರಿದ ಕಂಪನಿಗಳು ಕೋಟ್ಯಂತರ ರೂ.ಮೌಲ್ಯದ ಎಲೆಕ್ಟ್ರಾಲ್ ಬಾಂಡ್‌ಗಳನ್ನು ಖರೀದಿಸಿದ್ದವು.
ಕಾರ್ಪೋರೇಟ್ ಅಲ್ಯೂಮಿನಿಯಂ ಮತ್ತು ಕಾರ್ ಜೈಂಟ್, ಎಂ/ಎಸ್ ಸ್ಟೋರ್ ಲೈಟ್, ವೇದಾಂತ ಕಂಪನಿಗಳಿಂದ 2019ನೇ ಸಾಲಿನಲ್ಲಿ ಏಪ್ರಿಲ್‌ನಿಂದ 2022ನೇ ಆಗಸ್ಟ್ ಮತ್ತು 2023ರ ನವೆಂಬರ್‌ವರೆಗೆ 230.15 ಕೋಟಿ ರೂ. ಪಡೆದಿದ್ದಾರೆ.
ಅರವಿಂದ ಾರ್ಮಾ ಹೆಸರಿನ ಕಂಪನಿಯಿಂದ 2022ರ ಜುಲೈ 2, ನವೆಂಬರ್ 15 ಮತ್ತು 2023ರ ಜನವರಿ 5, ನವೆಂಬರ್ 8ರಂದು ಒಟ್ಟು 49.5 ಕೋಟಿ ರೂಪಾಯಿಯನ್ನು ಆರೋಪಿಗಳು ರಹಸ್ಯವಾಗಿ ವಸೂಲಿ ಮಾಡಿದ್ದಾರೆ.
ಇದೇ ರೀತಿ ಹಲವಾರು ಕಾರ್ಪೋರೇಟ್ ಕಂಪನಿಗಳಿಗೆ ನಿರ್ಮಲಾ ಸೀತಾರಾಮನ್ ಮತ್ತು ಇಡಿ ಅಧಿಕಾರಿಗಳ ಸಹಾಯ ಪಡೆದು ಇತರ ಆರೋಪಿಗಳು ಲಾಭ ಮಾಡಿಕೊಂಡಿದ್ದಾರೆ ಎಂದು ಖಾಸಗಿ ದೂರಿನಲ್ಲಿ ಅಯ್ಯರ್ ಆರೋಪಿಸಿದ್ದಾರೆ.