More

    ‘ಏಕ್​ ಲವ್​ ಯಾ’ ಕುರಿತು ಹೊಸ ಅಪ್​ಡೇಟ್​ ಕೊಟ್ಟ ಪ್ರೇಮ್​ …

    ಬೆಂಗಳೂರು: ‘ಏಕ್​ ಲವ್ ಯಾ’ ಚಿತ್ರದ ಚಿತ್ರೀಕರಣವನ್ನು ಪ್ರೇಮ್​ ಮುಗಿಸಿದ್ದು ಗೊತ್ತೇ ಇದೆ. ಲಾಕ್​ಡೌನ್​ಗೂ ಮುಂಚೆಯೇ ಚಿತ್ರದ ಬಹಳಷ್ಟು ಚಿತ್ರೀಕರಣವನ್ನು ಮುಗಿಸಿದ್ದರು ಪ್ರೇಮ್​. ಒಂದೆರೆಡು ಹಾಡು ಮತ್ತು ಕೆಲವು ದೃಶ್ಯಗಳ ಚಿತ್ರೀಕರಣ ಮುಗಿಸಿದ್ದರು. ಲಾಕ್​ಡೌನ್​ ಮುಗಿದ ಮೇಲೆ ಬೆಂಗಳೂರು, ಊಟಿ, ಕಾಶ್ಮೀರ, ರಾಜಾಸ್ತಾನ ಮತ್ತು ಗುಜರಾತ್​ನಲ್ಲಿ ಬಾಕಿ ಇದ್ದ ಭಾಗದ ಚಿತ್ರೀಕರಣವನ್ನು ಸಹ ಮುಗಿಸಿದ್ದಾರೆ.

    ಇದನ್ನೂ ಓದಿ: ವರುಣ್​ ಧವನ್ ಅಭಿಮಾನಿಗಳಿಗೆ ಗುಡ್​ ನ್ಯೂಸ್​! ಶುಭ ಸುದ್ದಿ ಕೊಟ್ಟ ಜೋಡಿ

    ಈ ಮಧ್ಯೆ, ಸಂಕ್ರಾಂತಿ ಹಬ್ಬದಂದು ಚಿತ್ರದ ಕುರಿತಾಗಿ ಒಂದು ಮಹತ್ವದ ವಿಚಾರವನ್ನು ಹಂಚಿಕೊಳ್ಳುವುದಾಗಿ ಹೇಳಿದ್ದರು. ಏನದು ಸುದ್ದಿ? ಅದನ್ನು ಪ್ರೇಮ್​, ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ವಿಷಯವೇನೆಂದರೆ, ‘ಏಕ್​ ಲವ್​ ಯಾ’ ನಾಲ್ಕು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

    ಹೌದು, ‘ಏಕ್​ ಲವ್​ ಯಾ’ ಚಿತ್ರವನ್ನು ಕನ್ನಡದಲ್ಲಿ ಚಿತ್ರೀಕರಿಸಿರುವ ಪ್ರೇಮ್​, ಅದನ್ನು ತೆಲುಗು, ತಮಿಳು ಮತ್ತು ಮಲಯಾಳಂಗೆ ಡಬ್​ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ. ಮೊದಲ ಹಂತವಾಗಿ, ಚಿತ್ರದ ಮೊದಲ ಹಾಡನ್ನು ಅವರು ಫೆಬ್ರವರಿ 14ರಂದು ಬಿಡುಗಡೆ ಮಾಡಲಿದ್ದಾರೆ. ಈ ಹಾಡು ನಾಲ್ಕೂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

    ‘ಏಕ್​ ಲವ್​ ಯಾ’ ಚಿತ್ರವನ್ನು ರಕ್ಷಿತಾ ಪ್ರೇಮ್​ ನಿರ್ಮಿಸಿದ್ದು, ಪ್ರೇಮ್​ ಕಥೆ ಮತ್ತು ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಕ್ಷಿತಾ ಅವರ ಸಹೋದರ ರಾಣಾ ನಾಯಕನಾಗಿ ನಟಿಸಿದ್ದು, ಅವರಿಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ‘ಶಿಷ್ಯ’ ದೀಪಕ್​, ರಚಿತಾ ರಾಮ್​ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಇದನ್ನೂ ಓದಿ: ರೈತರ ಕೆಂಗಣ್ಣಿಗೆ ಜಾಹ್ನವಿ ಕಪೂರ್​ ಗುರಿಯಾಗಿದ್ದು ಯಾಕೆ?

    ಈ ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತ ಸಂಯೋಜಿಸಿದ್ದು, ಮಹೇಂದ್ರ ಸಿಂಹ ಛಾಯಾಗ್ರಹಣ ಮಾಡುತ್ತಿದ್ದಾರೆ. ಚಿತ್ರವು ಸದ್ಯ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗಿದ್ದು, ಏಪ್ರಿಲ್​ನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

    ರಿಷಭ್​ ಶೆಟ್ಟಿ ಅಭಿನಯದ ‘ಹೀರೋ’ ಟ್ರೇಲರ್​ ನೋಡಿದ್ರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts