ವರುಣ್​ ಧವನ್ ಅಭಿಮಾನಿಗಳಿಗೆ ಗುಡ್​ ನ್ಯೂಸ್​! ಶುಭ ಸುದ್ದಿ ಕೊಟ್ಟ ಜೋಡಿ

varubn
Published on

ಮುಂಬೈ: ಬಾಲಿವುಡ್​ನ ಸ್ಟಾರ್​ ವರುಣ್​ ಧವನ್​ ತಮ್ಮ ಬಾಲ್ಯದ ಗೆಳತಿ ನತಾಶಾ ಜತೆ ಮದುವೆಯಾಗಲಿದ್ದಾರೆ ಎನ್ನುವುದು ಹಳೆಯ ಸುದ್ದಿ. ಸಾಕಷ್ಟು ದಿನಗಳಿಂದ ಇವರ ಮದುವೆಗಾಗಿ ಕಾದಿದ್ದ ಅಭಿಮಾನಿಗಳಿಗೆ ಇದೀಗ ಶುಭ ಸುದ್ದಿ ಸಿಕ್ಕಿದೆ. ವರುಣ್​-ನತಾಶಾ ಮದುವೆ ದಿನ ನಿಶ್ಚಯವಾಗಿದೆ.

ನಟ ವರುಣ್​ ಮತ್ತು ನತಾಶಾ ಅವರ ಮದುವೆ ಜನವರಿ 24 ರಂದು ಮುಂಬೈನಿಂದ 90 ಕಿ.ಮೀ ದೂರದಲ್ಲಿರುವ ಆಲಿಗಡ್​ನಲ್ಲಿ ನೆರವೇರಲಿದೆ. 22ನೇ ತಾರೀಖಿನಿಂದಲೇ ಮದುವೆ ಆಚರಣೆಗಳು ಆರಂಭವಾಗಲಿದೆ. 22ಕ್ಕೆ ಸಂಗೀತ್​, 23ಕ್ಕೆ ಮೆಹಂದಿ ಕಾರ್ಯಕ್ರಮ ನಡೆಯಲಿದೆ. 22ರಿಂದ 25ರವರೆಗೆ ನಮಗಾಗಿ ಬಿಡುವು ಮಾಡಿಕೊಳ್ಳಿ ಎಂದು ಇ-ಆಮಂತ್ರಣ ಪತ್ರಿಕೆಯನ್ನು ಈಗಾಗಲೇ ಸಂಬಂಧಿಕರು ಮತ್ತು ಸ್ನೇಹವೃಂದಕ್ಕೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಲಾಗಿದೆ.

ಮದುವೆ ಪಂಜಾಬಿ ಸಂಪ್ರದಾಯದ ಪ್ರಕಾರ ನಡೆಯಲಿದೆ. ನತಾಶಾ ತನ್ನ ಸ್ವಂತ ಬಟ್ಟೆ ಬ್ರ್ಯಾಂಡ್​ ಹೊಂದಿದ್ದಾರೆ. ಸಾಕಷ್ಟು ಸೆಲೆಬ್ರಿಟಿಗಳ ಮದುವೆಗೆ ಮದುವೆ ಬಟ್ಟೆ ಡಿಸೈನ್​ ಮಾಡುವ ಲೇಬಲ್​ ಅವರದ್ದಾಗಿದೆ. ಹಾಗಾಗಿ ಅವರ ಮದುವೆಗೆ ತಮ್ಮದೇ ಲೇಬಲ್​ನ ಉಡುಗೆಯನ್ನು ಹಾಕಲಿದ್ದಾರೆ ಎನ್ನಲಾಗಿದೆ.

ವರುಣ್​ ಧವನ್​ ಮದುವೆಯನ್ನು ಡಿಸೆಂಬರ್​ಗೇ ನಿಶ್ಚಯಿಸಲಾಗಿತ್ತು. ಆದರೆ ಕರೊನಾ ಕಾರಣದಿಂದಾಗಿ ಮದುವೆ ಮುಂದೂಡಿರುವುದಾಗಿ ತಿಳಿಸಲಾಗಿತ್ತು. ಮದುವೆ ಆಗುವ ನಿರ್ಧಾರ ಮಾಡಿದ್ದು ಇನ್ನು ಕೆಲವೇ ತಿಂಗಳಲ್ಲಿ ಮದುವೆಯಾಗುವುದಾಗಿ ವರುಣ್​ ಫಿಲ್ಮ್​ ಫೇರ್​ ಅವಾರ್ಡ್​ ಫಂಕ್ಷನ್​ನಲ್ಲಿ ತಿಳಿಸಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net