ಶ್ರೇಯಸ್​ಗೂ ನನಗೂ​ ಈಗಾಗಲೇ.... ಶಾಕಿಂಗ್ ಸಂಗತಿ ಬಿಚ್ಚಿಟ್ಟ ಬಿಗ್ ಬಾಸ್ ಹಾಟ್​ಬ್ಯೂಟಿ | Edin Rose

ವಿಜಯವಾಣಿ (43)
Published on

Edin Rose: ಹಿಂದಿ ಬಿಗ್ ಬಾಸ್ 18ರಲ್ಲಿ ಭಾಗವಹಿಸಿದ್ದ ನಟಿ ಎಡಿನ್ ರೋಸ್ ಇದೀಗ ಅಚ್ಚರಿ ಹಾಗೂ ಆಘಾತಕಾರಿ ಹೇಳಿಕೆಯನ್ನು ನೀಡಿದ್ದು, ಬಾಲಿವುಡ್​ ಮತ್ತು ಕ್ರಿಕೆಟ್​ ಅಭಿಮಾನಿಗಳು ಅಕ್ಷರಶಃ ದಂಗಾಗಿಸಿದ್ದಾರೆ.

ಆಕೆಯ ಈ ಹೇಳಿಕೆಗಳು ಸದ್ಯ ಹುಬ್ಬೇರುವಂತೆ ಮಾಡಿದೆ. ಇತ್ತೀಚೆಗೆ 'ಫಿಲ್ಮಿಗ್ಯಾನ್​'ಗೆ ನೀಡಿದ ಸಂದರ್ಶನದಲ್ಲಿ ನಟಿ ಆಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಭಾರತೀಯ ಕ್ರಿಕೆಟ್​ ತಂಡದ ಸ್ಟಾರ್​ ಬ್ಯಾಟರ್​ ಹಾಗೂ ಐಪಿಎಲ್​ನ ಪಂಜಾಬ್ ಕಿಂಗ್ಸ್ ಕ್ಯಾಪ್ಟನ್​ ಶ್ರೇಯಸ್ ಅಯ್ಯರ್ ಕುರಿತು ಮಾತನಾಡಿರುವ ಹಾಟ್​ ಬ್ಯೂಟಿ ರೋಸ್​, "ನನಗೆ ಈಗಾಗಲೇ ಶ್ರೇಯಸ್​ ಅಯ್ಯರ್​ ಜೊತೆ ಮನಸ್ಸಿನಲ್ಲೇ ಮದುವೆಯಾಗಿದೆ. ನಾನು ಅವರ ಮಕ್ಕಳಿಗೂ ತಾಯಿಯಾಗಿದ್ದೇನೆ" ಎಂದು ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.

"ನನ್ನ ಮನಸ್ಸಿನಲ್ಲಿ, ನಾನು ಈಗಾಗಲೇ ಶ್ರೇಯಸ್ ಅಯ್ಯರ್​ರನ್ನು ಮದುವೆಯಾಗಿದ್ದೇನೆ. ನಾನು ಅವರ ಮಕ್ಕಳ ತಾಯಿ ಎಂದು ನಂಬಿದ್ದೇನೆ. ನಾನು ಅವರನ್ನು ಇಷ್ಟಪಡಲು ಒಂದಷ್ಟು ಬಲವಾದ ಕಾರಣಗಳಿವೆ. ಶ್ರೇಯಸ್​ಗೆ ಒಳ್ಳೆಯ ಎತ್ತರ ಮತ್ತು ಉತ್ತಮ ಮೈಬಣ್ಣವಿದೆ. ಅವರು ಯಾವಾಗಲೂ ಗಡ್ಡ ಬಿಡ್ತಾರೆ ಮತ್ತು ಉತ್ತಮ ಸ್ನಾಯುಗಳನ್ನು ಹೊಂದಿದ್ದಾರೆ. ಈ ಕ್ವಾಲಿಟಿಗಳು ನಾನು ಇಷ್ಟಪಡುವುದು. ಇದೆಲ್ಲವೂ ಅವರಲ್ಲಿದೆ. ಜೊತೆಗೆ ಅವರು ಭಾರತ ತಂಡವನ್ನು ಪ್ರತಿನಿಧಿಸುತ್ತಾರೆ. ಇನ್ನೇನು ಬೇಕು? ಶ್ರೇಯಸ್ ಕೂಡ ನನ್ನ ತಂದೆಯಂತೆ ದಕ್ಷಿಣ ಭಾರತೀಯ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ನಟಿಯ ಈ ಹೇಳಿಕೆಗಳು ಸದ್ಯ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ

ಮಾಡೆಲ್ ಆಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಬ್ಯೂಟಿ ಎಡಿನ್ ರೋಸ್, ಬಾಲಿವುಡ್​ ಅಂಗಳದಲ್ಲಿ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಅದಾದ ಬಳಿಕ ತೆಲುಗ ನಟ ರವಿತೇಜ ಅಭಿನಯದ 'ರಾವಣಾಸುರ'ದಲ್ಲಿ ವಿಶೇಷ ಹಾಡಿನಲ್ಲಿ ಮಿಂಚಿದ್ದಾರೆ. ಪ್ರಸ್ತುತ, ಲೇಡಿ ಡಾನ್ ನಯನತಾರಾ ಅವರ ಹೊಸ ಚಿತ್ರ LIK (ಲವ್ ಇನ್ಶುರೆನ್ಸ್ ಕಂಪನಿ) ನಲ್ಲಿ ಪ್ರಮುಖ ಪಾತ್ರದಲ್ಲಿ ಎಡಿನ್ ರೋಸ್ ಕಾಣಿಸಿಕೊಂಡಿದ್ದಾರೆ. .(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net