

ಮೈಸೂರು: ನಿತಿನ್ಸ್ ನಾದಾಮೃತ ಸಂಗೀತ ವಿದ್ಯಾಲಯದ ವತಿಯಿಂದ ನಾಡಿನ ಹೆಸರಾಂತ ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ ನಿಧನಕ್ಕೆ ಭಾವ ನಮನ ಸಲ್ಲಿಸಲಾಯಿತು.
ನಗರದ ಸುರುಚಿ ರಂಗಮನೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾವಗೀತೆಯ ಮೂಲಕ ಎಚ್‌ಎಸ್‌ವಿ ಅವರಿಗೆ ನಮನ ಸಲ್ಲಿಸಲಾಯಿತು. ಖ್ಯಾತ ಗಾಯಕರಾದ ಇಂದ್ರಾಣಿ ಅನಂತರಾಮ್, ಶುಭಾ ರಾಘವೇಂದ್ರ, ಸಿ.ವಿಶ್ವನಾಥ್, ಡಾ.ಸ್ನೇಹಶ್ರೀ, ದಿವ್ಯಾ ಸಚ್ಚಿದಾನಂದ, ಹಂಸಿನಿ, ಋತ್ವಿಕ್ ರಾಜ್, ಅಮೂಲ್ಯ, ತನುಶ್ರೀ, ಪುರುಷೋತ್ತಮ ಕಿರಗಸೂರು, ಪ್ರಿಯಾ, ಪೂರ್ವಿ, ಸಾನ್ವಿ, ತಿಲಕ್ ಶ್ಯಾಮ, ಅಮೃತಾ ನಿತಿನ್, ನಿತಿನ್ ರಾಜಾರಾಂ ಶಾಸ್ತ್ರೀ ಹಾಡಿನ ಮೂಲಕ ಭಾವ ನಮನ ಸಲ್ಲಿಸಿದರು.
ನಿತಿನ್(ಹಾರ್ಮೋನಿಯಂ), ಪುರುಷೋತ್ತಮ(ಕೀಬೋರ್ಡ್), ಪರಮೇಶ್ವರ ಹೆಗಡೆ(ತಬಲಾ) ಸಾಥ್ ನೀಡಿದರು. ಇಂದುಶೇಖರ್, ಆತ್ಮಾರಾಂ ನಾಯಕ್, ರಘುನಾಥ್, ಭೀಮಾಶಂಕರ ಬಿದನೂರು ಎಲ್ಲರೂ ಸಹಕರಿಸಿ ಹಾಡುಗಳ ಇಂಪು ಹೆಚ್ಚಿಸಿದರು. ಜತೆಗೆ ‘ಉರಿಯ ಉಯ್ಯಲೆ’ ನಾಟಕದ ತುಣುಕೊಂದನ್ನು ರಂಗಯಾನ ತಂಡದ ಶ್ರೀಮತಿ ಅರುಣ್ ಕುಮಾರ್, ವಿಕಾಸ್, ಅರ್ಚನಾ ಹೆಗಡೆ, ವಿಶ್ರುತಾ ಪ್ರಸ್ತುತಪಡಿಸಿದರು.
ಸಾಹಿತಿ ಎಚ್.ಆರ್.ಲೀಲಾವತಿ, ಕವಿ ಜಯಪ್ಪ ಹೊನ್ನಾಳಿ, ಮೈಸೂರು ಆಕಾಶವಾಣಿಯ ಉದ್ಘೋಷಕ ಡಾ.ಮೈಸೂರು ಉಮೇಶ್, ವಿದ್ವಾಂಸರಾದ ಪಂ.ವೀರಭದ್ರಯ್ಯ ಹಿರೇಮಠ್ ಇತರರಿದ್ದರು. ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು.