ಭದ್ರತಾ ಪಡೆಯಿಂದ ಐವರು ನಕ್ಸಲರ ಹತ್ಯೆ: ಇಬ್ಬರು ಮಾವೋ ನಾಯಕರ ಸಾವು | Chhattisgarh

Chhattisgarh
Published on

Chhattisgarh: ಭದ್ರತಾ ಪಡೆಗಳು ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆಸಿದ ಎರಡು ಎನ್​​​ಕೌಂಟರ್​​ನಲ್ಲಿ ಐವರು ನಕ್ಸಲರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶನಿವಾರ (ಜೂ.07) ಹೇಳಿದ್ದಾರೆ.

ಮೂರು ದಿನಗಳಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಸರಣಿ ಎನ್‌ಕೌಂಟರ್‌ಗಳಲ್ಲಿ ನಕ್ಸಲ್​ ಸಂಘಟನೆಯ ಉನ್ನತ ನಾಯಕರಾದ ತೆಲಂಗಾಣ ರಾಜ್ಯ ಸಮಿತಿಯ ವಿಶೇಷ ವಲಯ ಸಮಿತಿ ಸದಸ್ಯ ಭಾಸ್ಕ‌ರ್ ಹಾಗೂ ಮಾವೋವಾದಿಗಳ ಕೇಂದ್ರ ಸಮಿತಿ ಸದಸ್ಯ ನರಸಿಂಹ ಚಲಂ ಅಲಿಯಾಸ್ ಸುಧಾಕರ್ ಸೇರಿದಂತೆ ಕನಿಷ್ಠ ಏಳು ಮಾವೋವಾದಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಛತ್ತೀಸಗಢ ಹಾಗೂ ತೆಲಂಗಾಣದಲ್ಲಿ ಭಾಸ್ಕ‌ರ್ ಸುಳಿವು ಕೊಟ್ಟವರಿಗೆ 45 ಲಕ್ಷ ರೂ. ಬಹುಮಾನವನ್ನು ಘೋಷಿಸಲಾಗಿತ್ತು. ಹಾಗೆ ಛತ್ತೀಸಗಢ ಸರ್ಕಾರ ಚಲಂ ಸುಳಿವು ನೀಡುವವರಿಗೆ 40 ಲಕ್ಷ ರೂ. ಬಹುಮಾನವನ್ನು ಘೋಷಿಸಿತ್ತು

ಬಿಜಾಪುರ ಜಿಲ್ಲೆಯ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ನಡೆಯುತ್ತಿರುವ ನಕ್ಸಲ್ ವಿರೋಧಿ ಕಾರ್ಯಾಚರಣೆಯ ಸಂದರ್ಭದಲ್ಲಿ ಭದ್ರತಾ ಪಡೆಗಳು ಒಟ್ಟು 5 ಮಾವೋವಾದಿ ಕಾರ್ಯಕರ್ತರ ಮೃತರಾಗಿದ್ದಾರೆ. ಎರಡು ಎಕೆ-47 ರೈಫಲ್‌ಗಳು ಸೇರಿದಂತೆ ಅಪಾರ ಮದ್ದುಗುಂಡು, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಶನಿವಾರ ಗುಂಡಿನ ಚಕಮಕಿಯ ನಂತರ ಎರಡು ಶವಗಳು ಪತ್ತೆಯಾಗಿದ್ದು, ಶುಕ್ರವಾರ ಮತ್ತು ಶನಿವಾರದ ಮಧ್ಯರಾತ್ರಿ ನಡೆದ ಎನ್‌ಕೌಂಟರ್ ನಂತರ ಇತರ ಮೂರು ಶವಗಳು ಪತ್ತೆಯಾಗಿವೆ ಎಂದು ಪೊಲೀಸ್​​ ಅಧಿಕಾರಿಗಳು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net