ಇ.ಡಿ.ತನಿಖೆಗೆ ಸಹಕರಿಸದ ಯೆಸ್​ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್​ ಅರೆಸ್ಟ್​...

Rana kapur 8 March 20
Published on

ಮುಂಬೈ: ಯೆಸ್​ಬ್ಯಾಂಕ್​ ಸಂಸ್ಥಾಪಕ ರಾಣಾ ಕಪೂರ್​ರನ್ನು ವಿಚಾರಣೆಗಾಗಿ ಶನಿವಾರ ಬೆಳಗ್ಗೆ ಮುಂಬೈ ಕಚೇರಿಗೆ ಕರೆದೊಯ್ದಿದ್ದ ಇಡಿ ಅಧಿಕಾರಿಗಳು ಭಾನುವಾರ ಮುಂಜಾನೆ ಬಂಧಿಸಿದ್ದಾರೆ.

ಬ್ಯಾಂಕ್​ನ ಆರ್ಥಿಕ ಸ್ಥಿತಿ ಹದಗೆಟ್ಟ ಕಾರಣದ ಬಗ್ಗೆ ಅವರನ್ನು ವಿಚಾರಣೆ ನಡೆಸಿದರೂ ರಾಣಾ ಕಪೂರ್​ ಅವರು ತನಿಖೆಗೆ ಸರಿಯಾಗಿ ಸಹಕರಿಸುತ್ತಿಲ್ಲದ ಕಾರಣ ಇ.ಡಿ.ಅಧಿಕಾರಿಗಳನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಣಾ ಕಪೂರ್​ ಅವರನ್ನು ಇಂದು ಸ್ಥಳೀಯ ನ್ಯಾಯಾಲಯದ ಎದುರು ಹಾಜರು ಪಡಿಸಲಾಗುವುದು ಎನ್ನಲಾಗಿದೆ.

ಯೆಸ್​ ಬ್ಯಾಂಕ್​ ದಿವಾಳಿ ಹಿನ್ನೆಲೆಯಲ್ಲಿ ಆರ್​ಬಿಐ ಮಧ್ಯಪ್ರವೇಶ ಮಾಡಿ, ಅಲ್ಲಿನ ಆಡಳಿತ ಮಂಡಳಿಯನ್ನು ವಜಾಗೊಳಿಸಿತ್ತು. ಶುಕ್ರವಾರ ಯೆಸ್​ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್​ ಮನೆ ಮೇಲೆ ಇ.ಡಿ. ದಾಳಿ ನಡೆಸಿತ್ತು.

ಇ.ಡಿ.ಅಧಿಕಾರಿಗಳು ಹಣಕಾಸು ಅಕ್ರಮ ವರ್ಗಾವಣೆ ತಡೆ ಕಾನೂನಿನ (ಪಿಎಂಎಲ್​ಎ) ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಡಿಎಚ್​ಎಫ್​ಎಲ್(ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಶನ್ ಲಿಮಿಟೆಡ್) ತನಿಖೆಯಲ್ಲಿ ಸಿಕ್ಕ ವಿವರಗಳ ಆಧಾರದಲ್ಲಿ ಯೆಸ್ ಬ್ಯಾಂಕ್ ವಿರುದ್ಧ ಕ್ರಮ ಆರಂಭಿಸಲಾಗಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net