

ಕೋಟ: ಮನುಕುಲ ಕಾಪಾಡುವುದೇ ಪ್ರಕೃತಿ, ಆದರೆ ಅದೇ ಪ್ರಕೃತಿ ಮೇಲೆ ಮನುಷ್ಯ ವಿಕೃತಿ ಮೆರೆಯುತ್ತಿದ್ದಾನೆ. ಇದು ಕೊನೆಯ ಕರೆಗಂಟೆಯಾಗಿದೆ ಇದರ ಹೊರತಾಗಿಯೂ ಅದೇ ಮನಸ್ಥಿತಿ ತಳೆದರೆ ಅಂತ್ಯ ಕಟ್ಟಿಟ್ಟ ಬುತ್ತಿ ಎಂದು ಧಾರ್ಮಿಕ ಮುಖಂಡ ಕೆ.ವಿ.ರಮೇಶ್ ರಾವ್ ಹೇಳಿದರು.
ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಸುವರ್ಣ ಎಂಟರ್ಪ್ರೈಸಸ್ ಬ್ರಹ್ಮಾವರ, ಮಣೂರು ಫ್ರೆಂಡ್ಸ್, ಸಮುದ್ಯತಾ ಗ್ರೂಪ್ಸ್ ಕೋಟ, ಸೀನಿಯರ್ ಚೇಂಬರ್ ಕೋಟ ಲಿಜನ್ ಸಹಯೋಗದೊಂದಿಗೆ ಪಾಂಡೇಶ್ವರ ಹೈನಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಸಂಯೋಜನೆಯೊಂದಿಗೆ 219ನೇ ಭಾನುವಾರದ ಪರಿಸರಸ್ನೇಹಿ ಹಸಿರು ಜೀವ ಕಾರ್ಯಕ್ರಮದಲ್ಲಿ ಗಿಡ ವಿತರಿಸಿ ಮಾತನಾಡಿದರು.
ಪಾಂಡೇಶ್ವರ ಗ್ರಾಪಂ ಸದಸ್ಯೆ ಸಂಧ್ಯಾ ರಾವ್, ಹೈನಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಅಧ್ಯಕ್ಷೆ ವಿಶಾಲಾಕ್ಷಿ ರಾವ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಗಂಗಾ, ಪಾಂಡೇಶ್ವರ ಗ್ರಾಪಂ ಸಿಬ್ಬಂದಿ ಕಾರ್ತಿಕ್ ಪೂಜಾರಿ, ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಜಿತ್ ಆಚಾರ್, ಸಂಘಟನಾ ಕಾರ್ಯದರ್ಶಿ ಗಿರೀಶ್ ಆಚಾರ್, ಪಂಚವರ್ಣ ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ ಪೂಜಾರಿ, ಸೀನಿಯರ್ ಚೇಂಬರ್ ಕೋಟ ಲಿಜನ್ ಅಧ್ಯಕ್ಷ ಕೇಶವ್ ಆಚಾರ್ ಕೋಟ ಮತ್ತಿತರರು ಉಪಸ್ಥಿತರಿದ್ದರು. ಪಂಚವರ್ಣ ಮಹಿಳಾ ಮಂಡಲ ಸಂಚಾಲಕಿ ಸುಜಾತಾ ಬಾಯರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.