9ರಿಂದ ಅಡಪಾಡಿ ದೇವಳ ಶತಚಂಡಿಕಾ ಮಹಾಯಾಗ

shatha chandika
ಶ್ರೀ ಉಮಾಮಹೇಶ್ವರ, ಶ್ರೀ ದುರ್ಗಾಪರಮೇಶ್ವರಿ ದೇವಿ
Published on

ಕಾರ್ಕಳ: ಪಳ್ಳಿ ಅಡಪಾಡಿ ಶ್ರೀ ಉಮಾಮಹೇಶ್ವರ, ಶ್ರೀ ದುರ್ಗಾಪರಮೇಶ್ವರಿ ದೇವಿ ಸಾನ್ನಿಧ್ಯದಲ್ಲಿ ಆ.9ರಿಂದ 11ರವರೆಗೆ ಶತಚಂಡಿಕಾ ಮಹಾಯಾಗ ನಡೆಯಲಿದೆ. 9ರಂದು ಬೆಳಗ್ಗೆ ವಿವಿಧ ಧಾರ್ಮಿಕ ಅನುಷ್ಠಾನ, ಅಷ್ಟನಾರಿಕೇಳಾತ್ಮಕ ಗಣಪತಿ ಯಾಗ, ಶತಚಂಡಿಕಾ ಯಾಗದ ಪೂರ್ವಭಾವಿ ಅನುಷ್ಠಾನ, ವಿಷ್ಣುಯಾಗ ಆರಂಭ, ದೇವರ ಉಭಯ ಸಾನ್ನಿಧ್ಯದಲ್ಲಿ ನವಕ ಪ್ರಧಾನ ಹೋಮ, ಕಲಶಾಭಿಷೇಕ, ಪ್ರಸನ್ನಪೂಜೆ, ಪರಿವಾರ ದೇವತಾರಾಧನೆ, ಮಧ್ಯಾಹ್ನ ವಿಷ್ಣುಯಾಗದ ಪೂರ್ಣಾಹುತಿ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6ರಿಂದ ಶಾಂತಿಮಂತ್ರ ಪಠಣ, ಭಜನೆ, ಮಹಾಪೂಜೆ ನೆರವೇರಲಿದೆ.

10ರಂದು ಬಳಗ್ಗೆ ವಿವಿಧ ಧಾರ್ಮಿಕ ಅನುಷ್ಠಾನ, ಶತಚಂಡಿಕಾ ಪಾರಾಯಣ ಪ್ರಾರಂಭ, ಶತರುದ್ರ ಯಾಗ ಪ್ರಾರಂಭ, ಮಧ್ಯಾಹ್ನ ಯಾಗದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ. ಸಂಜೆ 5ರಿಂದ ಶ್ರೀಚಕ್ರ ಆರಾಧನೆ, ಅಷ್ಟಾವಧಾನ ಸೇವೆ, ಭಜನೆ, ಮಹಾಪೂಜೆ, 11ರಂದು ಬೆಳಗ್ಗೆ ಶತಚಂಡಿಕಾಯಾಗ ಪ್ರಾರಂಭ, ರಾತ್ರಿ 10ರಿಂದ ಕನ್ನಿಕಾ ಪೂಜೆ, ಸುವಾಸಿನಿ ಆರಾಧನೆ, ಬಲಿ ಪ್ರದಾನ, ಮಧ್ಯಾಹ್ನ ಯಾಗದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಸಂಪನ್ನಗೊಳ್ಳಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಪುಂಡಲೀಕ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net