ಕಾಡುಪ್ರಾಣಿಗಳ ಉಳಿವಿಗೆ ಸಹಕಾರ :ಹಣ್ಣಿನ ಬೀಜ ಬಿತ್ತನೆ ಕಾರ್ಯಕ್ರಮದಲ್ಲಿ ಚಂದ್ರ ನಾಯ್ಕ

bithane
ಹೆಬ್ರಿ ತಾಲೂಕಿನ ಕಾನ್ಬೆಟ್ಟು ಹಕ್ಲುಮನೆ ಪ್ರಾದೇಶಿಕ ಅರಣ್ಯ ವಿಭಾಗದಲ್ಲಿ ವಿವಿಧ ಹಣ್ಣಿನ ಬೀಜಗಳ 1000ಕ್ಕೂ ಹೆಚ್ಚಿನ ಸೀಡ್ ಬಾಲ್ ಗಳನ್ನು ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಬಿತ್ತನೆ ಮಾಡಲಾಯಿತು
Published on

ಹೆಬ್ರಿ: ಕಾಡು ನಾಶದ ಅಂಚಿನಲ್ಲಿ ಹಾಗೂ ಕಾಡು ಪ್ರಾಣಿಗಳಿಗೆ ಆಹಾರದ ಕೊರತೆಯಿಂದಾಗಿ ನಾಡಿಗೆ ಬರುತ್ತಿದೆ. ಈ ನಿಟ್ಟಿನಲ್ಲಿ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ಶೌರ್ಯ ಘಟಕದ ಸ್ವಯಂಸೇವಕರು ಈ ಬಿತ್ತೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಶೌರ್ಯ ವಿಪತ್ತು ನಿರ್ವಹಣಾ ಘಟಕ ಚಾರ ಬೇಳಂಜೆ ಘಟಕ ಪ್ರತಿನಿಧಿ ಚಂದ್ರ ನಾಯ್ಕ ಹೇಳಿದರು.

ಅರಣ್ಯ ಇಲಾಖೆ ಆಶ್ರಯದಲ್ಲಿ ಹೆಬ್ರಿ ತಾಲೂಕಿನ ಕಾನ್ಬೆಟ್ಟು ಹಕ್ಲುಮನೆ ಪ್ರಾದೇಶಿಕ ಅರಣ್ಯ ವಿಭಾಗದಲ್ಲಿ ವಿವಿಧ ಹಣ್ಣಿನ ಬೀಜಗಳ 1000ಕ್ಕೂ ಹೆಚ್ಚಿನ ಸೀಡ್ ಬಾಲ್‌ಗಳನ್ನು ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಬಿತ್ತನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚಾರ ವಲಯ ಮೇಲ್ವಿಚಾರಕಿ ರೇವತಿ, ಅರಣ್ಯ ಇಲಾಖೆ ರಾಮಚಂದ್ರ, ಗಿರೀಶ್, ಸೇವಾ ಪ್ರತಿನಿಧಿ ಸಂಗೀತಾ, ಘಟಕ ಸಂಯೋಜಕಿ ಲತಾ, ಶೌರ್ಯ ಸ್ವಯಂಸೇವಕರಾದ ಶ್ರೀನಿವಾಸ ನಾಯ್ಕ, ಸುಬ್ರಹ್ಮಣ್ಯ, ಸತೀಶ ನಾಯ್ಕ, ಮಹೇಶ ನಾಯ್ಕ, ಸಂತೋಷ ಪೂಜಾರಿ, ಕುಮಾರ್ ನಾಯ್ಕ, ಸುಮಲತಾ, ಗಂಗಾರತ್ನ, ಸಂತೋಷ ನಾಯ್ಕ, ನಿಖಿತ್ ಕುಮಾರ್, ಕೆ.ಕೃಷ್ಣ ನಾಯ್ಕ ಮತ್ತು ನಯನ ಕುಮಾರ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net