More

  ರಾಸಾಯನಿಕ ಆಹಾರದಿಂದ ಆರೋಗ್ಯಕ್ಕೆ ಹಾನಿ : ಡಾ.ಶ್ರೀನಿಧಿ ಮಾಹಿತಿ

  ಕೋಟ: ಆಹಾರದ ರುಚಿಗಾಗಿ ಅನೇಕ ರಾಸಾಯನಿಕಗಳನ್ನು ಆಹಾರದಲ್ಲಿ ಬಳುಸುತ್ತಿದ್ದಾರೆ. ಈ ರಾಸಾಯನಿಕಗಳು ಯುವಜನರ ಆರೋಗ್ಯದಲ್ಲಿ ದುಷ್ಪರಿಣಾಮ ಉಂಟು ಮಾಡುತ್ತಿದ್ದು, ಅನೇಕ ರೋಗಗಳಿಗೆ ಕಾರಣವಾಗಿವೆ. ಜನರು ಎಚ್ಚೆತ್ತುಗೊಳ್ಳದಿದ್ದರೆ ದೇಶಕ್ಕೆ ಆರೋಗ್ಯವಂತ ಸಮಾಜದ ಕೊರತೆ ಎದುರಾಗಲಿದೆ ಎಂದು ಎಸ್‌ಡಿಎಂ ಆಯುರ್ವೇದ ಕಾಲೇಜು ಪ್ರಾಧ್ಯಾಪಕ ಡಾ.ಶ್ರೀನಿಧಿ ಧನ್ಯ ಹೇಳಿದರು.

  ವಿಶ್ವ ಆಹಾರ ಸುರಕ್ಷಾ ದಿನದ ಅಂಗವಾಗಿ ವಿವೇಕ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯ ಇಕೋ-ಕ್ಲಬ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯದ ಕುರಿತು ಮಾಹಿತಿ ನೀಡಿದರು. ಇಕೋ ಕ್ಲಬ್ ಸಂಚಾಲಕಿ ನಾಗರತ್ನ ಇದ್ದರು. ಪ್ರಾಂಶುಪಾ ಜಗದೀಶ ನಾವಡ ಸ್ವಾಗತಿಸಿದರು. ಶಿಕ್ಷಕ ವೆಂಕಟೇಶ ಉಡುಪ ವಂದಿಸಿದರು. ಮದನ ಭಟ್ಟ ಕಾರ್ಯಕ್ರಮ ನಿರೂಪಿಸಿದರು.

  See also  ಉಚಿತ ಔಷಧ ವಿತರಣೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts