ಕಡಬ: ಉತ್ತಮ ಆರೋಗ್ಯದ ದೃಷ್ಟಿಯಿಂದ ಪೌಷ್ಟಿಕ ಆಹಾರ ಸೇವನೆ ಅಗತ್ಯ, ಹಿಂದಿನ ಜೀವನ ಶೈಲಿಯಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿರಲಿಲ್ಲ. ಮುಂದಿನ ಆರೋಗ್ಯವಂತ ಜನಾಂಗದ ಬೆಳವಣಿಗೆಗೆ ಪ್ರಕೃತಿದತ್ತ ಆಹಾರ ಸೇವನೆ ಮುಖ್ಯ ಎಂದು ಪುತ್ತೂರು ಜೆ.ಎಂ.ಎಫ್.ಸಿ ಹೆಚ್ಚುವರಿ ವ್ಯವಹಾರಿಕ ನ್ಯಾಯಧೀಶ ಶಿವಣ್ಣ ಎಚ್.ಆರ್.ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು, ವಕೀಲರ ಸಂಘ ಪುತ್ತೂರು, ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘ, ಉಜ್ವಲ ಸಂಜೀವಿನಿ ಒಕ್ಕೂಟ ಗ್ರಾಮ ಮಟ್ಟ ಕಾಣಿಯೂರು ಆಶ್ರಯದಲ್ಲಿ ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಶುಕ್ರವಾರ ವಿಶ್ವ ಪೌಷ್ಟಿಕಾಂಶ ದಿನದ ಅಂಗವಾಗಿ ರಾಷ್ಟ್ರೀಯ ಪೌಷ್ಟಿಕ ಆಹಾರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಕೀಲರ ಸಂಘದ ಕೋಶಾಧಿಕಾರಿ, ಕಡಬ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ಕೆ.ಸವಣೂರು ಮಾತನಾಡಿ, ಮನುಷ್ಯ ಆರೋಗ್ಯವಾಗಿರಲು ಸತ್ವಯುತ ಆಹಾರ ಸೇವನೆ ಅಗತ್ಯ. ಹೀಗಾಗಿ ಪ್ರತಿಯೊಬ್ಬರೂ ನಿತ್ಯ ಪೌಷ್ಟಿಕ ಆಹಾರ ಸೇವಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ವಕೀಲೆ ಚಂದ್ರಾವತಿ ಟಿ.ಪೌಷ್ಟಿಕಾಂಶಯುಕ್ತ ಆಹಾರ ಮತ್ತು ಮಹಿಳೆ ವಿಷಯದ ಕುರಿತು ಮಾಹಿತಿ ನೀಡಿದರು.
ಕಾಣಿಯೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ರಘು ಎನ್.ಬಿ., ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶೋಕ್ ಗೌಡ, ಕಾಣಿಯೂರು ಉಜ್ವಲ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುಚಿತ್ರಾ ಕಟ್ಟತ್ತಾರು, ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಓಡಬಾಯಿ, ವಕೀಲ ಅವಿನಾಶ್ ಬೈತಡ್ಕ, ವಕೀಲರಾದ ರಾಜೇಶ್ವರಿ ಆಚಾರ್ಯ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ, ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘ ಉಪಾಧ್ಯಕ್ಷ ಚಂದ್ರಯ್ಯ ಆಚಾರ್ಯ ಅಬೀರ, ನಿರ್ದೇಶಕರಾದ ರಾಜೇಶ್ ಮೀಜೆ, ಹೇಮಾವತಿ ಮುಗರಂಜ, ನ್ಯಾಯಾಲಯದ ಸಿಬ್ಬಂದಿ ಜ್ಯೋತಿ, ಅಶ್ವಥ್ ಉಪಸ್ಥಿತರಿದ್ದರು.
ಪಶು ಸಖಿ ಲೀಲಾವತಿ ಸ್ವಾಗತಿಸಿ, ಎಲ್‌ಸಿಆರ್‌ಪಿ ವಿನುತಾ ರೈ ನಿರೂಪಿಸಿದರು. ಕಾರ್ಯಕ್ರಮದ ಸಂಯೋಜಕಿ ಪುತ್ತೂರು ವಕೀಲರಾದ ರಾಜೇಶ್ವರಿ ಆಚಾರ್ಯ ವಂದಿಸಿದರು.