1ರಂದು ಎಕೆಪಿಎ ಕುಂಬಳೆ ವಲಯ ಸಮ್ಮೇಳನ

Published on

ಕುಂಬಳೆ: ಆಲ್ ಕೇರಳ ಫೋಟೋಗ್ರಾಫರ್ಸ್‌ ಅಸೋಸಿಯೇಷನ್ ಕುಂಬಳೆ ವಲಯ ಸಮ್ಮೇಳನ ಅಕ್ಟೋಬರ್ 1ರಂದು ಕುಂಬಳೆ ಮಾಧವ ಪೈ ಸಭಾಂಗಣದಲ್ಲಿ ವಿ.ವಿ ಚಂದ್ರನ್ ವೇದಿಕೆಯಲ್ಲಿ ಜರುಗಲಿದೆ. ಬೆಳಗ್ಗೆ 9.30ಕ್ಕೆ ಧ್ವಜಾರೋಹಣ, 10ಕ್ಕೆ ಸಭಾಕಾರ್ಯಕ್ರಮ ನಡೆಯಲಿದೆ.

ಕುಂಬಳೆ ವಲಯ ಉಪಾಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಕಾರ್ಯದರ್ಶಿ ಹರೀಶ್ ಪಾಲಕುನ್ನು ಉದ್ಘಾಟಿಸಲಿದ್ದಾರೆ. ರಾಜ್ಯಸಮಿತಿ ಸದಸ್ಯ ಪ್ರಶಾಂತ್ ತೈಕಡಪ್ಪುರಂ ಮುಖ್ಯಅತಿಥಿಗಳಾಗಿರುವರು. ಜಿಲ್ಲಾ ಅಧ್ಯಕ್ಷ ಕೆ.ಸಿ.ಅಬ್ರಹಾಂ ಮುಖ್ಯ ಭಾಷಣ ಮಾಡಲಿದ್ದಾರೆ.

ಜಿಲ್ಲಾ ಕಾರ್ಯದರ್ಶಿ ಸುಗುಣನ್ ಇರಿಯ, ಕೋಶಾಧಿಕಾರಿ ಸುನಿಲ್ ಕುಮಾರ್ ಪಿ.ಟಿ., ಉಪಾಧ್ಯಕ್ಷ ವೇಣು ವಿ.ವಿ., ಶರೀಫ್, ಜತೆಕಾರ್ಯದರ್ಶಿ ರಾಜೇಂದ್ರನ್, ಪ್ರಜಿತ್, ಸುಧೀರ್, ದಿನೇಶ್ ಇನ್‌ಸೈಟ್, ಅಶೋಕನ್ ಪೊಯಿನಾಚಿ, ಅನೂಪ್ ಚಂದೇರ, ವಾಸು ಎ., ವಿಜಯನ್ ಶೃಂಗಾರ್, ವೇಣುಗೋಪಾಲ ಎ., ಸುರೇಶ್ ಆಚಾರ್ಯ, ಅಬ್ದುಲ್ ನವಾಸ್, ನವೀನ್ ಕುಮಾರ್, ಶ್ಯಾಮಪ್ರಸಾದ ಸರಳಿ ಶುಭಾಶಂಸನೆಗೈಯುವರು. ವಲಯ ಕಾರ್ಯದರ್ಶಿ ನಿತ್ಯಪ್ರಸಾದ್, ಪಿ.ಆರ್.ಒ. ಪ್ರಮೋದ್ ಕುಂಬಳೆ ಉಪಸ್ಥಿತರಿರುವರು. ಮಧ್ಯಾಹ್ನ ಪ್ರತಿನಿಧಿ ಸಮ್ಮೇಳನ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net