ಐಸ್​ಕ್ರೀಂ, ಶೀತಲೀಕೃತ ಆಹಾರ ಸೇವನೆಯಿಂದ ಕರೊನಾ ಹರಡುತ್ತಾ? ಇಲ್ಲಿದೆ ಫ್ಯಾಕ್ಟ್​ಚೆಕ್​

Ice-Cream
Published on

ನವದೆಹಲಿ: ಪಾಶ್ಚಾತ್ಯ ಹಾಗೂ ಐರೋಪ್ಯ ದೇಶಗಳಲ್ಲಿ ಕರೊನಾ ಹೆಮ್ಮಾರಿಗೆ ಅಂಕುಶವೇ ಇಲ್ಲದಂತಾಗಿದೆ. ಸೋಂಕಿತರು ಹಾಗೂ ಸಾವಿನ ಸಂಖ್ಯೆ ದಿನೇದಿನೆ ಹೆಚ್ಚುತ್ತಲೇ ಇದೆ.

ಕರೊನಾ ಮಟ್ಟಹಾಕಲು ಏನು ಮಾಡಬೇಕೆಂದು ತಿಳಿಯದೇ ಕಂಗಾಲಾಗಿದೆ. ಅಕ್ಷರಶಃ ಕಂಗಾಲಾಗಿರುವ ಬ್ರಿಟನ್​ ಜೂನ್​ವರೆಗೂ ಲಾಕ್​ಡೌನ್​ ಮುಂದುವರಿಸುವ ಚಿಂತನೆ ನಡೆಸಿದೆ.

ಜನರು ಕೂಡ ಜೀವವುಳಿಸಿಕೊಳ್ಳುವುದು ಹೇಗಪ್ಪಾ ಎಂಬ ಚಿಂತೆಯಲ್ಲಿದ್ದಾರೆ. ಇಂಥವರನ್ನೇ ಗುರಿಯಾಗಿಸಿಕೊಂಡು ಹಲವು ಸುದ್ದಿಗಳು ಭಾರಿ ವೈರಲ್​ ಆಗುತ್ತಿವೆ. ಜನರನ್ನು ಇನ್ನಷ್ಟು ಆತಂಕಕ್ಕೆ ತಳ್ಳುತ್ತಿವೆ.

ಇತ್ತೀಚೆಗೆ ಜನರ ನಿದ್ದೆಗಡಿಸಿದ ಸಂಗತಿ ಎಂದರೆ, ಐಸ್​ಕ್ರೀಂ ಹಾಗೂ ಇತರ ಶೀತಲೀಕೃತ ಆಹಾರವನ್ನು ಸೇವಿಸಿದರೆ ಕರೊನಾ ವಕ್ಕರಿಸುತ್ತದೆ ಎಂಬುದು. ಹೀಗಾಗಿ ಜನರು ಏನನ್ನು ತಿನ್ನಬೇಕು ಬಿಡಬೇಕು ಎಂದು ಯೋಚನೆಗೊಳಗಾಗಿದ್ದರು. ವಿಶ್ವ ಆರೋಗ್ಯ ಸಂಸ್ಥೆ ಇಂಥ ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿತು. ಐಸ್​ಕ್ರೀಂ ತಿನ್ನುವುದರಿಂದ ಕರೊನಾ ಹರಡುತ್ತ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ ಎಂದು ಸ್ಪಷ್ಟಪಡಿಸಿತು.

ಸರಿ, ಇದು ಅಲ್ಲಿಗೇ ನಿಲ್ಲುತ್ತಾ? ಇಲ್ಲ, ಸದ್ಯ ಭಾರತದಲ್ಲೂ ಭಾರಿ ಸದ್ದು ಮಾಡುತ್ತಿದೆ. ಹೀಗಾಗಿ ಇಲ್ಲಿಯೂ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಸ್ಪಷ್ಟನೆಯನ್ನು ಇಲ್ಲಿಯೂ ವಾರ್ತಾ ಮತ್ತು ಪ್ರಸಾರ ಇಲಾಖೆ ಜನರಿಗೆ ತಲುಪಿಸುತ್ತಿದೆ.

ಇದರಿಂದ ಸ್ಪಷ್ಟವಾಗುವುದೆನೆಂದರೆ, ಐಸ್​ಕ್ರೀಂ ಹಾಗೂ ಇತರ ಶೀತಲೀಕೃತ ಆಹಾರ ಸೇವನೆಯಿಂದ ಕರೊನಾ ಸೋಂಕು ತಗಲುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net