

ಲಕ್ನೋ: ಸೋಷಿಯಲ್ ಮೀಡಿಯಾದಲ್ಲಿ ಆಘಾತಕಾರಿ ಘಟನೆಯ ವಿಡಿಯೋವೊಂದು ಹರಿದಾಡಿದ್ದು, ಲಕ್ನೋ ನಾಗರಿಕ ನಗರ ಎಂಬ ಖ್ಯಾತಿಗೆ ಮಸಿ ಬಳಿದಿದೆ. ಸಂಸ್ಕೃತಿ ಮತ್ತು ನಾಗರೀಕತೆಗೆ ಹೆಸರಾಗಿರುವ ನಗರಕ್ಕೆ ಇಲ್ಲಿನ ಯುವತಿಯರು ಕುಡಿದು ಬಂದು ಮಾಡಿದ ಅವಾಂತರಗಳು ಸದ್ಯ ಸ್ಥಳೀಯರನ್ನು ಭಾರೀ ಬೇಸರಕ್ಕೆ ದೂಡಿದೆ.
ಕುಡಿದ ಅಮಲಿನಲ್ಲಿ ಲಕ್ನೋದ ಫೀನಿಕ್ಸ್ ಪಲಾಸಿಯೊ ಮಾಲ್‌ನ ಕ್ಲಬ್‌ನ ಮುಂಭಾಗದಲ್ಲಿ ಪರಸ್ಪರ ಮಾತಿಗಿಳಿದ ಯುವತಿಯರು, ತದನಂತರ ಜಗಳ ತಾರಕಕ್ಕೇರಿದ ಬೆನ್ನಲ್ಲೇ ಅಸಭ್ಯ ಭಾಷೆ ಬಳಸಿ ಒಬ್ಬರನೊಬ್ಬರು ನಿಂದಿಸಿದ್ದಾರೆ. ಯುವತಿಯರ ಮಾತಿನ ಕಿತ್ತಾಟ, ಕೈ ಕೈ ಮೀಲಾಯಿಸುವವರೆಗೂ ತಲುಪಿದ್ದು, ಘಟನೆಯ ಸಂಪೂರ್ಣ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಮದ್ಯದ ಅಮಲಿನಲ್ಲಿ ಹುಡುಗಿಯರು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಲಕ್ನೋದ ಹೆಸರಾಂತ ಪಲಾಸಿಯೊ ಮಾಲ್‌ನಲ್ಲಿ ತಡರಾತ್ರಿ ಪಾರ್ಟಿ ಆಯೋಜಿಸಲಾಗಿತ್ತು. ಈ ವೇಳೆ ಅವಾಂತರ ನಡೆದಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).