

Drunk Man: ಮದ್ಯ ವ್ಯಸನಿಗಳು ಕಂಠಪೂರ್ತಿ ಕುಡಿದು ವಿಚಿತ್ರ ಕೆಲಸಗಳನ್ನು ಮಾಡುವುದನ್ನು ನಾವು ನೋಡಿರುತ್ತೇವೆ. ಅದೇ ರೀತಿ ಇಲ್ಲೊಬ್ಬ ಕುಡುಕ ಅಂಗಡಿಯಲ್ಲಿ ಮದ್ಯದ ಬಾಟಲಿಯನ್ನು ತೆಗೆದುಕೊಳ್ಳುವ ಪ್ರಯತ್ನದಲ್ಲಿ ಕಬ್ಬಿಣದ ಗ್ರಿಲ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ ಹಾಸ್ಯಾಸ್ಪದ ಘಟನೆಯ ವಿಡಿಯೋವೊಂದು ಸಾಮಾಜಿಕ ಮಾದ್ಯಮದಲ್ಲಿ ಸಖತ್ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಜನನಿಬಿಡ ಮದ್ಯದ ಅಂಗಡಿಯಲ್ಲಿ ಮದ್ಯದ ಬಾಟಲಿಯನ್ನು ಪಡೆಯಲು ಧಾವಿಸಿದ್ದಾನೆ. ನಂತರ ಆ ವ್ಯಕ್ತಿ ತನ್ನ ಬಾಟಲಿಯನ್ನು ಹಿಡಿಯುವಾಗ ಅಂಗಡಿಯ ಕಬ್ಬಿಣದ ಗ್ರಿಲ್‌ನಲ್ಲಿ ತಲೆ ಸಿಲುಕಿಕೊಂಡಿದೆ.
ಅವನು ಅದರಿಂದ ಹೊರಬರಲು ಹೆಣಗಾಡುತ್ತಿರುವಾಗ, ಸುತ್ತಲಿನ ಇತರ ಗ್ರಾಹಕರು ಅವನನ್ನು ರಕ್ಷಿಸಲು ಪ್ರಯತ್ನಿಸಿ ಬಿಡಿಸುತ್ತಾರೆ. ಕುತೂಹಲಕಾರಿ ಸಂಗತಿಯೆಂದರೆ, ಈ ಘಟನೆಯ ಹೊರತಾಗಿಯೂ ಸಿಕ್ಕಿಬಿದ್ದ ವ್ಯಕ್ತಿ ಮದ್ಯದ ಬಾಟಲಿಯನ್ನು ಕೈಯಿಂದ ಬಿಟ್ಟಿರಲಿಲ್ಲ. ಈ ವಿಡಿಯೋ @mannkaurr1 ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ, ಈಗಾಗಲೇ ಇದು 134K ವೀಕ್ಷಣೆಗಳನ್ನು ಪಡೆದಿದೆ. (ಏಜೆನ್ಸೀಸ್)
̤̤̤̤̤