

ಮುಂಬೈ: ಅಕ್ಟೋಬರ್ 2 ರಂದು ಕಾರ್ಡೆಲಿಯ ಕ್ರೂಸ್ ಶಿಪ್ನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಯ ಮೇಲೆ ದಾಳಿ ನಡೆಸಿದ್ದರ ಮುಂದುವರಿದ ಭಾಗವಾಗಿ ಇಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ಸಿಬಿ) ತಂಡಗಳು ಮುಂಬೈನ ಅಂಧೇರಿಯಲ್ಲಿ ದಾಳಿ ನಡೆಸಿವೆ. ಕ್ರೂಸ್ ಪ್ರಕರಣದ ಆರೋಪಿಯೋರ್ವನಿಂದ ಸಿಕ್ಕ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆ ನಡೆಯುತ್ತಿದೆ ಎನ್ನಲಾಗಿದೆ.
ಕ್ರೂಸ್ ದಾಳಿಯ ನಂತರ ಬಂಧಿಸಲ್ಪಟ್ಟ ಪುತ್ರ ಆರ್ಯನ್ ಖಾನ್ರನ್ನು ಜೈಲಿನಲ್ಲಿ ಭೇಟಿಯಾಗಿ ಬಂದ ಬೆನ್ನಲ್ಲೇ ನಟ ಶಾರುಖ್ ಖಾನ್ ಮನೆಗೆ ಎನ್ಸಿಬಿ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಆರ್ಯನ್ಗೆ ಸೇರಿದ ಇನ್ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಿದ್ದಲ್ಲಿ ಅವುಗಳನ್ನು ತನಿಖೆಗಾಗಿ ಎನ್ಸಿಬಿ ವಶಕ್ಕೊಪ್ಪಿಸಬೇಕು ಎಂದು ನೋಟೀಸ್ ನೀಡಿದ್ದಾರೆ.
ಮತ್ತೊಂದೆಡೆ, ಉದಯೋನ್ಮುಖ ನಟಿಯಾದ ಅನನ್ಯ ಪಾಂಡೆ ಮನೆಗೆ ತೆರಳಿದ ಎನ್ಸಿಬಿ ಅಧಿಕಾರಿಗಳು ಆಕೆಗೆ ಎನ್ಸಿಬಿ ಮುಂದೆ ಮಧ್ಯಾಹ್ನ 2 ಗಂಟೆಗೆ ಮುನ್ನ ಹಾಜರಾಗಬೇಕೆಂದು ಸಮನ್ಸ್ ನೀಡಿದ್ದಾರೆ. ಆರ್ಯನ್ ಖಾನ್ರ ವಾಟ್ಸಾಪ್ ಚ್ಯಾಟ್ನಲ್ಲಿ ಅನನ್ಯಾರೊಂದಿಗೆ ಡ್ರಗ್ಸ್ ಬಗ್ಗೆ ಮಾತನಾಡಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಆಕೆಯ ಮೊಬೈಲ್ ಫೋನನ್ನೂ ಎನ್ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)