More

    ಕರೊನಾ ಲಸಿಕಾ ಅಭಿಯಾನದಲ್ಲಿ ಸೆಂಚುರಿ ಬಾರಿಸಿದ ಭಾರತ! 100 ಕೋಟಿ ಡೋಸ್​​ ನೀಡಿದ ಜಗತ್ತಿನ 2ನೇ ದೇಶ

    ನವದೆಹಲಿ: ಕರೊನಾ ಲಸಿಕಾ ಅಭಿಯಾನ ಆರಂಭವಾದ 9 ತಿಂಗಳಲ್ಲೇ 100 ಕೋಟಿ ಡೋಸ್​ಗಳನ್ನು ನೀಡಿದ ಮಹತ್ವದ ದಾಖಲೆಯನ್ನು ಇಂದು ಭಾರತ ಸಾಧಿಸಿದೆ. ಚೀನಾದ ನಂತರ, ಜಗತ್ತಿನಲ್ಲಿ ಶತಕೋಟಿ ಲಸಿಕೆಗಳ ಮಟ್ಟ ದಾಟಿರುವ ಎರಡನೇ ದೇಶ ನಮ್ಮದಾಗಿದೆ. ಕೋವಿನ್​ ಪೋರ್ಟಲ್​ನಲ್ಲಿ ಹಾಲಿ 100 ಕೋಟಿ 30 ಲಕ್ಷ ಡೋಸ್​ಗಳನ್ನು ದಾಟಿದ್ದು, ಕ್ಷಣಕ್ಷಣಕ್ಕೂ ಲಸಿಕೀಕರಣದ ಸಂಖ್ಯೆ ಏರುತ್ತಿರುವುದು ಡಿಸ್​ಪ್ಲೇ ಆಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ VaccineCentury ಎಂಬ ಹ್ಯಾಶ್​ಟ್ಯಾಗ್​ ಟ್ರೆಂಡ್​ ಆಗುತ್ತಿದೆ.

    ಈ ಸುಸಂದರ್ಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು, ದೆಹಲಿಯ ರಾಮಮನೋಹರ ಲೋಹಿಯ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಕೀಯ ಸಿಬ್ಬಂದಿಯೊಂದಿಗೆ ಸಂಭಾಷಣೆ ನಡೆಸಿದರು. “ಭಾರತ ಇತಿಹಾಸ ರಚಿಸಿದೆ. ಲಸಿಕೆಯು ಭಾರತದ ನಾಗರೀಕರಲ್ಲಿ ಹೆಮ್ಮೆ ಮತ್ತು ಸುರಕ್ಷೆಯ ಭಾವನೆ ಮೂಡಿಸಿದೆ” ಎಂದಿರುವ ಮೋದಿ, “ನಾವು ಭಾರತೀಯ ವಿಜ್ಞಾನ, ಉದ್ಯಮ ಮತ್ತು 130 ಕೋಟಿ ಭಾರತೀಯರ ಸಾಮೂಹಿಕ ಮನೋಭಾವದ ವಿಜಯವನ್ನು ನೋಡುತ್ತಿದ್ದೇವೆ. 100 ಕೋಟಿ ಲಸಿಕೆಗಳ ಮಟ್ಟವನ್ನು ದಾಟಿದ ಭಾರತಕ್ಕೆ ಅಭಿನಂದನೆಗಳು. ನಮ್ಮ ವೈದ್ಯರು, ನರ್ಸ್​ಗಳು ಮತ್ತು ಈ ಸಾಧನೆ ಮಾಡಲು ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು” ಎಂದು ಟ್ವೀಟ್​ ಮಾಡಿದ್ದಾರೆ.

    ಭಾರತದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕರೊನಾ ಲಸಿಕೆಗಳನ್ನು ನೀಡಿರುವ ರಾಜ್ಯವೆಂದರೆ ಉತ್ತರಪ್ರದೇಶ. ತದನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳಿವೆ. ಈವರೆಗೆ ಲಸಿಕೆಗೆ ಅರ್ಹ ವಯೋಮಾನದ ಶೇಕಡ 75 ರಷ್ಟು ಜನಸಂಖ್ಯೆಗೆ ಕನಿಷ್ಠ ಒಂದು ಡೋಸ್​ ಕರೊನಾ ಲಸಿಕೆ ನೀಡಲಾಗಿದ್ದು, ಸುಮಾರು ಶೇಕಡ 31 ರಷ್ಟು ವಯಸ್ಕರು ಎರಡೂ ಡೋಸ್​ಗಳನ್ನು ಪಡೆದಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

    ಎಷ್ಟೇ ಶಕ್ತಿಶಾಲಿಯಾದರೂ, ವಂಚಕರನ್ನು ಸರ್ಕಾರ ಬಿಡುವುದಿಲ್ಲ: ಪ್ರಧಾನಿ ಮೋದಿ

    ಜೈಲಿಗೆ ತೆರಳಿ ಮಗನನ್ನು ಭೇಟಿಯಾದ ನಟ ಶಾರುಖ್​ ಖಾನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts