More

    ಮಯಾಂಕ್​ ಶತಕ, ರಾಜ್ಯಕ್ಕೆ ಇನಿಂಗ್ಸ್​ ಮುನ್ನಡೆ: ಸಮರ್ಥ್​, ಮನೀಷ್​ ಪಾಂಡೆ ಅರ್ಧಶತಕ

    ಅಹಮದಾಬಾದ್​: ನಾಯಕ ಮಯಾಂಕ್​ ಅಗರ್ವಾಲ್​ (109 ರನ್​, 124 ಎಸೆತ, 17 ಬೌಂಡರಿ, 1 ಸಿಕ್ಸರ್​) ಆಕರ್ಷಕ ಶತಕದ ನೆರವಿನಿಂದ ಪ್ರವಾಸಿ ಕರ್ನಾಟಕ ತಂಡ ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಟೂರ್ನಿಯಲ್ಲಿ ಆತಿಥೇಯ ಗುಜರಾತ್​ ಎದುರು ಮೊದಲ ಇನಿಂಗ್ಸ್​ ಮುನ್ನಡೆ ಸಾಧಿಸಿದೆ.

    ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ “ಸಿ’ ಗುಂಪಿನ ಪಂದ್ಯದ ಎರಡನೇ ದಿನವಾದ ಶನಿವಾರ ಬ್ಯಾಟಿಂಗ್​ ಆರಂಭಿಸಿದ ಕರ್ನಾಟಕ ತಂಡ ದಿನದಂತ್ಯಕ್ಕೆ 90 ಓವರ್​ಗಳಲ್ಲಿ 5 ವಿಕೆಟ್​ಗೆ 328 ರನ್​ಗಳಿಸಿದ್ದು, ಸದ್ಯ 64 ರನ್​ಗಳ ಮುನ್ನಡೆ ಸಾಧಿಸಿದೆ. ಅನುಭವಿ ಬ್ಯಾಟರ್​ ಮನೀಷ್​ ಪಾಂಡೆ (56* ರನ್​, 97 ಎಸೆತ, 4 ಬೌಂಡರಿ, 2 ಸಿಕ್ಸರ್​) ಜತೆಯಾಗಿ ಸುಜಯ್​ ಸಾತೇರಿ (24*)ಮೂರನೇ ದಿನಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ. ಪಂದ್ಯದ ಮೊದಲ ದಿನ ಗುಜರಾತ್​ ಮೊದಲ ಇನಿಂಗ್ಸ್​ನಲ್ಲಿ 264 ರನ್​ಗಳಿಗೆ ಆಲೌಟ್​ ಆಗಿತ್ತು.

    ಕರ್ನಾಟಕ: 5 ವಿಕೆಟ್​ಗೆ 328 (ಮಯಾಂಕ್​ 109, ಸಮರ್ಥ್​ 60, ಪಡಿಕಲ್​ 42, ನಿಕಿನ್​ 22, ಮನೀಷ್​ 56*, ಶುಭಾಂಗ್​ 11, ಸುಜಯ್​ 24*, ಚಿಂತನ್​ ಗಜ 43ಕ್ಕೆ 2, ವಘೇಲಾ 90ಕ್ಕೆ 1).

    ನಾಯಕನಿಗೆ ಸಮರ್ಥ್​ ಸಾಥ್​
    ದಿನದ ಆಟ ಆರಂಭಿಸಿದ ನಾಯಕ ಮಯಾಂಕ್​ ಅಗರ್ವಾಲ್​ ಹಾಗೂ ಆರ್​.ಸಮರ್ಥ್​ (60 ರನ್​, 108 ಎಸೆತ, 7 ಬೌಂಡರಿ) ಜೋಡಿ ಕರ್ನಾಟಕಕ್ಕೆ ಭದ್ರ ಅಡಿಪಾಯ ಒದಗಿಸಿತು. ಈ ಜೋಡಿ ಮೊದಲ ವಿಕೆಟ್​ಗೆ 172 ರನ್​ ಕಲೆಹಾಕಿತು ಗುಜರಾತ್​ ಬೌಲರ್​ಗಳನ್ನು ದಂಡಿಸಿದ ಇವರಿಬ್ಬರು ಭೋಜನಾ ವಿರಾಮದವರೆಗೂ ಸರಾಗವಾಗಿ ಬ್ಯಾಟಿಂಗ್​ ನಡೆಸಿದರು. ಕಳೆದ ಪಂದ್ಯ ಎರಡೂ ಇನಿಂಗ್ಸ್​ಗಳಲ್ಲಿ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದ ಮಯಾಂಕ್​ ಭರ್ಜರಿ ಕಂಬ್ಯಾಕ್​ ಮಾಡಿದರು. ಮಯಾಂಕ್​ಗೆ ಉತ್ತಮ ಬೆಂಬಲ ಒದಗಿಸಿದ ಆರ್​. ಸಮರ್ಥ್​ ಅರ್ಧಶತಕ ಪೂರೈಸಿದರು. ಅಮೋ ಬ್ಯಾಟಿಂಗ್​ ನಡೆಸುತ್ತಿದ್ದ ಇವರಿಬ್ಬರು ಚಹಾ ವಿರಾಮಕ್ಕೂ ವಿಕೆಟ್​ ಕಾಯ್ದುಕೊಂಡರು. ಬಳಿಕ ಐದು ಎಸೆತಗಳ ಅಂತರದಲ್ಲಿ ವಿಕೆಟ್​ ಕೈಚೆಲ್ಲಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts