ಡಿಜಿಟಲ್ ಗ್ರಂಥಾಲಯ ಉದ್ಘಾಟನೆ

digital
ನಿಟ್ಟೆ ಡಾ.ಎನ್.ಎಸ್.ಎ.ಎಂ. ಪ್ರಥಮ ದರ್ಜೆ ಕಾಲೇಜಿನಲ್ಲಿ ಡಿಜಿಟಲ್ ಗ್ರಂಥಾಲಯವನ್ನು ಪ್ರಾಂಶುಪಾಲೆ ಡಾ.ವೀಣಾ ಕುಮಾರಿ ಬಿ.ಕೆ ಉದ್ಘಾಟಿಸಿದರು
Published on

ಕಾರ್ಕಳ: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸಂಸ್ಥೆಗಳಲ್ಲೊಂದಾದ ಡಾ.ಎನ್.ಎಸ್.ಎ.ಎಂ. ಪ್ರಥಮ ದರ್ಜೆ ಕಾಲೇಜಿನಲ್ಲಿ ಡಿಜಿಟಲ್ ಗ್ರಂಥಾಲಯ ಉದ್ಘಾಟನೆ ಗುರುವಾರ ನಡೆಯಿತು.

ಪ್ರಾಂಶುಪಾಲೆ ಡಾ.ವೀಣಾ ಕುಮಾರಿ ಬಿ.ಕೆ. ಉದ್ಘಾಟಿಸಿ, ಆಧುನಿಕ ಜಗತ್ತಿಗೆ ತಕ್ಕ ಹಾಗೆ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ಒದಗಿಸುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ನಿಟ್ಟೆ ಶಿಕ್ಷಣ ಸಂಸ್ಥೆ ಕಾರ್ಯೋನ್ಮುಖವಾಗಿದೆ ಎಂದರು.

ಎಡ್ವೈಸ್ ಲರ್ನ್ ಡಿಜಿಟಲ್ ಲೈಬ್ರೆರಿಯ ಧೀರಜ್ ಮಾತನಾಡಿ, ವಿದ್ಯಾರ್ಥಿಗಳಿಗೆ ಮೊಬೈಲ್‌ನಲ್ಲೇ ಪಠ್ಯಪುಸ್ತಕ, ಪರಾಮರ್ಶನ ಪುಸ್ತಕ, ಸಂಶೋಧನಾ ಪುಸ್ತಕ, ಜರ್ನಲ್‌ಗಳು, ಸಾಹಿತ್ಯಿಕ ಪುಸ್ತಕಗಳನ್ನು ಒದಗಿಸುವುದು ಸಂಸ್ಥೆ ಉದ್ದೇಶ ಎಂದರು. ಮುಖ್ಯ ಗ್ರಂಥಪಾಲಕಿ ಶಾಲಿನಿ ಶೆಟ್ಟಿ, ಶಿಕ್ಷಕ, ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net