blank

5 ಕೋಟಿ ರೂ. ಕೊಟ್ಟರೂ ಸಾಕಾಗಲಿಲ್ಲ… ಮದ್ವೆಯಾದ ಎರಡೇ ದಿನಕ್ಕೆ ನವವಧುವಿಗೆ ವರದಕ್ಷಿಣೆ ಕಿರುಕುಳ! Dowry Harassment

Dowry Harassment

Dowry Harassment : ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನವವಿವಾಹಿತ ವಧುವಿಗೆ ವರದಕ್ಷಿಣೆ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. 5 ಕೋಟಿ ರೂಪಾಯಿ ನೀಡಿದ್ದರೂ, ಮದುವೆಯಾದ ಎರಡೇ ದಿನಗಳಲ್ಲಿ ವರದಕ್ಷಿಣೆ ಕಿರುಕುಳ ಆರಂಭವಾಗಿದ್ದು, ಅದನ್ನು ಸಹಿಸಲಾಗದೇ ವಧು ಭವಾನಿಪುರಂ ಪೊಲೀಸರಿಗೆ ದೂರು ನೀಡಿದ್ದಾಳೆ.

ವಧು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪತಿ ಮತ್ತು ಆತನ ಅಪ್ಪನನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 498 ಎ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ತಂದೆ ಮತ್ತು ಮಗನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ನೆಲ್ಲೂರು ಕೇಂದ್ರ ಜೈಲಿಗೆ ಕಳುಹಿಸಲಾಗಿದೆ. ‘

ಲಕ್ಷ್ಮಣ ರಾವ್ ಅವರು ವಿಜಯವಾಡ ಆರ್‌ಟಿಸಿಯಲ್ಲಿ ಕಂಟ್ರೋಲರ್​ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ಮಗ ಹೇಮಂತ್ ಅಜಯ್, ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಸನ್ನ ಕುಮಾರ್ ಚೌಧರಿ ಎಂಬುವರು ಕರ್ನಾಟಕದ ರಾಯಚೂರಿನ ಎಕ್ಲಾಸ್‌ಪುರದಲ್ಲಿ ದೊಡ್ಡ ಭೂಮಾಲೀಕರಾಗಿದ್ದು (180 ಎಕರೆ), ಅವರ ಮಗಳು ಲಕ್ಷ್ಮಿ ಕೀರ್ತನಾ ಚೌಧರಿಯನ್ನು ಅಜಯ್ ಜೊತೆ ಮದುವೆ ನಿಶ್ಚಯ ಮಾಡಲಾಗಿತ್ತು.

ಮಗಳು ಸಂತೋಷವಾಗಿರಲೆಂದು ಮದುವೆಗೆ ಮೊದಲು ಸುಮಾರು 5 ಕೋಟಿ ರೂ. ನಗದು, ಸ್ಥಿರ ಆಸ್ತಿಗಳು, ಚಿನ್ನ ಮತ್ತು ಬೆಳ್ಳಿಯನ್ನು ವರದಕ್ಷಿಣೆಯಾಗಿ ನೀಡಲು ಒಪ್ಪಂದ ಮಾಡಿಕೊಂಡಿದ್ದರು. ಈ ತಿಂಗಳ 7ನೇ ತಾರೀಖಿನಂದು ರಾಯಚೂರಿನಲ್ಲಿ ಕೀರ್ತನಾ ಮತ್ತು ಅಜಯ್ ಅವರ ವಿವಾಹ ನಡೆಯಿತು. ಈ ತಿಂಗಳ 9ನೇ ತಾರೀಖಿನಂದು ನಿಡಮನೂರಿನ ಒಂದು ಸಭಾಂಗಣದಲ್ಲಿ ಆರತಕ್ಷತೆ ಕಾರ್ಯಕ್ರಮವೂ ನಡೆಯಿತು.

ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು! ಡೆತ್​ನೋಟ್​ನಲ್ಲಿ ಕಾರಣ ತಿಳಿಸಿದ ಚೇತನ್​ | Suicide Case

ಮದುವೆಯಾದ ಎರಡು ದಿನಗಳ ನಂತರ, ಲಕ್ಷ್ಮಿ ಕೀರ್ತನಾಗೆ ಹೆಚ್ಚಿನ ವರದಕ್ಷಿಣೆಗಾಗಿ ಕಿರುಕುಳ ಶರುವಾಯಿತು. ಅಜಯ್ ಮತ್ತು ಲಕ್ಷ್ಮಣ ರಾವ್ ಮತ್ತೆ 50 ಲಕ್ಷ ರೂಪಾಯಿ ತರುವಂತೆ ವಧುವಿಗೆ ಒತ್ತಾಯ ಮಾಡಿದರು. ಕಿರುಕುಳವನ್ನು ಸಹಿಸದ ಕೀರ್ತನಾ ಪತಿ ಮತ್ತು ಆತನ ತಂದೆಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಇಬ್ಬರನ್ನು ಬಂಧಿಸಲಾಗಿದೆ.

ನವವಧು ಕೀರ್ತನಾ ಭವಾನಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಐಪಿಸಿ ಸೆಕ್ಷನ್ 498 ಎ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ತಂದೆ ಮತ್ತು ಮಗನಿಗೆ 14 ದಿನಗಳ ಕಾಲ ನ್ಯಾಯಂಗ ಬಂಧನ ವಿಧಿಸಿದ್ದು, ನೆಲ್ಲೂರು ಜೈಲಿಗೆ ಕಳುಹಿಸಲಾಗಿದೆ. ಲಕ್ಷ್ಮಣ ರಾವ್ ಅವರು ಇನ್ನೊಂದು ತಿಂಗಳಲ್ಲಿ ನಿವೃತ್ತರಾಗಲಿದ್ದಾರೆ. ಅವರ ಮಗ ಅಜಯ್ ಈ ಹಿಂದೆಯೂ ಒಂದು ಸಂಬಂಧ ಹೊಂದಿದ್ದು, 1.5 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ ಎಂದು ವರದಿಯಾಗಿದೆ. (ಏಜೆನ್ಸೀಸ್​)

ಬೆತ್ತಲೆ ವಿಡಿಯೋ ಕರೆ ಮಾಡಿಸಿ 18 ಲಕ್ಷ ರೂ. ಸಂಪಾದನೆ: ಗಂಡನ ಕರಾಳ ಮುಖ ಬಿಚ್ಚಿಟ್ಟ ಪತ್ನಿ! Crime

ಹೆಲ್ಮೆಟ್​ ಬಳಸುವುದರಿಂದ ಕೂದಲು ಉದುರುತ್ತಿದೆಯೇ? ಇಲ್ಲಿದೆ ನೋಡಿ ಸಿಂಪಲ್​ ಟಿಪ್ಸ್​…! Hair Loss

Share This Article

ಬೇಸಿಗೆಯಲ್ಲಿ ಬೇಗನೆ ತೂಕ ಇಳಿಸಿಕೊಳ್ಳುವುದು ಹೇಗೆ ಗೊತ್ತಾ?  ಈ ಸುಲಭ ಸಲಹೆಗಳನ್ನು ಅನುಸರಿಸಿ…summer

summer: ತೂಕ ಇಳಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಕೆಲವರು ಇದಕ್ಕಾಗಿ ಆಹಾರ ಕ್ರಮದ ಜೊತೆಗೆ ವ್ಯಾಯಾಮ ಮಾಡುತ್ತಾರೆ.…

ಮದ್ವೆಯಾದ ನಂತ್ರ ಮಹಿಳೆಯರು… ಇದುವರೆಗೂ ನಾವಂದುಕೊಂಡಿದ್ದು ತಪ್ಪು, ಹೊಸ ಅಧ್ಯಯನದಲ್ಲಿ ಅಚ್ಚರಿ ಸಂಗತಿ! Marriage

Marriage : ಸಾಮಾನ್ಯವಾಗಿ ಮದುವೆಯ ನಂತರ ಮಹಿಳೆಯರ ತೂಕ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಅವರು ಎಷ್ಟೇ…

ನಿಮ್ಮ ಮಕ್ಕಳನ್ನು ಸ್ಮಾರ್ಟ್‌ಫೋನ್‌ಗಳಿಂದ ದೂರವಿಡುವುದು ಹೇಗೆ? Child Care Tips

Child Care Tips: ನೀವು ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲ್ ಫೋನ್ ಕೊಡಬಾರದು. ನಿಮ್ಮ ಮಗು ನಿಮ್ಮೊಂದಿಗೆ…