ಒಂಟಿ ಮನೆಯಲ್ಲಿ ಡಬಲ್​ ಮರ್ಡರ್​; ವೃದ್ಧ ದಂಪತಿಯ ಭೀಕರ ಹತ್ಯೆ

Double Murder
Published on

ಶಿವಮೊಗ್ಗ: ಒಂಟಿ ಮನೆಯಲ್ಲಿ ವಾಸಿಸುತ್ತಿದ್ದ ವೃದ್ಧ ದಂಪತಿಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಸಾಗರ ತಾಲೂಕಿನ ಬ್ಯಾಕೋಡು ಗ್ರಾಮದಲ್ಲಿ ನಡೆದಿದೆ.

ಸುಂದರ್​ ಶೇಟ್​ (70) ಮತ್ತು ಸುಲೋಚನಾ ಶೇಟ್​ ಮೃತರು. ಇಂದು ರಾತ್ರಿ ಒಂಭತ್ತು ಗಂಟೆ ಸುಮಾರಿಗೆ ಇಬ್ಬರನ್ನೂ ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಲಾಗಿದೆ.

ಈ ದಂಪತಿ ಐದು ದಶಕಗಳಿಂದಲೂ ಬಂಗಾರದ ಅಂಗಡಿ ನಡೆಸುತ್ತಿದ್ದರು. ಈಗ ಅಂಗಡಿಗಳನ್ನು ಮಕ್ಕಳಿಗೆ ಬಿಟ್ಟುಕೊಟ್ಟು, ಬ್ಯಾಕೋಡಿನ ಒಂಟಿ ಮನೆಯಲ್ಲಿ ವಾಸಿಸುತ್ತಿದ್ದರು. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ನಡೆದಿದೆ. (ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net