ಹಣದ ವಿಚಾರದಲ್ಲಿ ಈ 4 ಸಂಗತಿಗಳು ನಿಮಗೆ ತಿಳಿದಿರಲಿ... ಇಲ್ಲವಾದರೆ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತೆ! Money

Money
Published on

Money : ಮನೆಯ ವಿಚಾರಕ್ಕೆ ಬಂದಾಗ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಈ ಗ್ರಂಥವು ಮನೆಯನ್ನು ನಿರ್ಮಿಸುವ ಮತ್ತು ಅದಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ತಿಳಿಸುತ್ತದೆ. ವಾಸ್ತು ನಿಯಮಗಳನ್ನು ಅನುಸರಿಸಿ ಯಾವುದೇ ಕೆಲಸವನ್ನು ಮಾಡಿದರೆ ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ ಮತ್ತು ಕುಟುಂಬವು ಸಮೃದ್ಧವಾಗುತ್ತದೆ ಎಂದು ಬಲವಾಗಿ ನಂಬಲಾಗಿದೆ. ಅದೇ ಸಮಯದಲ್ಲಿ, ಅದನ್ನು ಉಲ್ಲಂಘಿಸಿದರೆ, ಶ್ರೀಮಂತ ಮನೆಗಳು ಸಹ ಬಡವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ನಂಬಲಾಗಿದೆ.

ಒಬ್ಬ ವ್ಯಕ್ತಿಯ ಸಂಪತ್ತು ಅಥವಾ ಆಸ್ತಿ ಇದ್ದಕ್ಕಿದ್ದಂತೆ ಕಡಿಮೆಯಾಗಲು ಪ್ರಾರಂಭಿಸಿದರೆ, ಆತ ವಾಸ್ತು ದೋಷದಿಂದ ಬಳಲುತ್ತಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಜೀವನ ಪ್ರತಿಯೊಂದು ಹಂತದಲ್ಲೂ ಮನುಷ್ಯನಿಗೆ ಹಣ ಅತಿ ಮುಖ್ಯ. ಹೀಗಾಗಿ ಹಣಕಾಸಿನ ವಿಚಾರದಲ್ಲಿ ಕೆಲವೊಂದು ವಾಸ್ತು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಪಾಲಿಸಲು ಎಡವಿದರೆ ಸಾಕಷ್ಟು ಹಣಕಾಸಿನ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.

* ಅನೇಕ ಜನರು ತಮ್ಮ ಹಣದ ಲಾಕರ್​ ಅಥವಾ ಬೀರುವಿನಲ್ಲಿ ಕನ್ನಡಿಯನ್ನು ಅಳವಡಿಸಲು ಇಷ್ಟಪಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಕನ್ನಡಿ ಅಳವಡಿಸುವುದು ತಪ್ಪಲ್ಲ. ಆದರೆ, ಲಾಕರ್​ ಅಥವಾ ಬೀರುವಿನಲ್ಲಿ ಅಳವಡಿಸಲಾದ ಕನ್ನಡಿ ಎಂದಿಗೂ ಬಿರುಕು ಬಿಡಬಾರದು ಅಥವಾ ಮುರಿಯಬಾರದು ಎಂಬುದನ್ನು ನೆನಪಿನಲ್ಲಿಡಬೇಕು. ಅಲ್ಲದೆ, ಲಾಕರ್​ ಅಥವಾ ಬೀರು ಮನೆಯ ದಕ್ಷಿಣ ದಿಕ್ಕಿನಲ್ಲಿದ್ದಾಗ ಮಾತ್ರ ಈ ಕನ್ನಡಿಯನ್ನು ಅಳವಡಿಸಬೇಕು. ಇಲ್ಲವಾದಲ್ಲಿ ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

* ವಾಸ್ತು ಶಾಸ್ತ್ರದ ಪ್ರಕಾರ, ತಪ್ಪು ಕಾರ್ಯಗಳ ಮೂಲಕ ಗಳಿಸಿದ ಹಣವು ಶಾಶ್ವತವಾಗಿ ಉಳಿಯುವುದಿಲ್ಲ. ಅಂತಹ ಹಣವು ಮನೆಯಲ್ಲಿ ಬಡತನ ಮತ್ತು ಕೆಟ್ಟ ಸಮಯವನ್ನು ತರುತ್ತದೆ. ಆದ್ದರಿಂದ, ಈ ರೀತಿ ಸಂಪಾದಿಸಿದ ಹಣವನ್ನು ಆದಷ್ಟು ಬೇಗ ತೆಗೆದುಹಾಕಿ. ಇಲ್ಲದಿದ್ದರೆ ನೀವು ಅದರ ಪರಿಣಾಮಗಳನ್ನು ಒಂದಲ್ಲ ಒಂದು ದಿನ ಅನುಭವಿಸಬೇಕಾಗುತ್ತದೆ.

* ನೀವು ಬಡ್ಡಿ ವಿಧಿಸಿ ಅಥವಾ ಬಡವರ ಮೇಲೆ ದಬ್ಬಾಳಿಕೆ ಮಾಡಿ ಹಣ ಸಂಪಾದಿಸಿದ್ದರೆ, ಎಂದಿಗೂ ಸಮೃದ್ಧಿಯಾಗುವುದಿಲ್ಲ ಮತ್ತು ಮನುಷ್ಯನ ಸಂತೋಷ ಮತ್ತು ಶಾಂತಿಯನ್ನು ಈ ರೀತಿಯ ಹಣ ಹಾಳು ಮಾಡುತ್ತದೆ.

* ವಾಸ್ತು ಶಾಸ್ತ್ರದ ಪ್ರಕಾರ ಕಷ್ಟಪಟ್ಟು ಸಂಪಾದಿಸಿದ ಹಣದ ಜತೆ ಚಾಕು, ಬಂದೂಕು ಅಥವಾ ಯಾವುದೇ ಇತರ ಆಯುಧಗಳನ್ನು ಇಟ್ಟುಕೊಳ್ಳಬಾರದು. ಆ ರೀತಿಯ ಆಯುಧಗಳನ್ನು ಇಟ್ಟುಕೊಳ್ಳುವುದರಿಂದ ಮನಸ್ಸಿನಲ್ಲಿ ಹಿಂಸಾತ್ಮಕ ಆಲೋಚನೆಗಳು ಬೆಳೆಯುತ್ತವೆ. ಇದರಿಂದಾಗಿ ಇಡೀ ಕುಲವು ನಾಶವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಇದರಿಂದಾಗಿ ತಾಯಿ ಲಕ್ಷ್ಮಿ ಕೂಡ ಕೋಪಗೊಳ್ಳುತ್ತಾಳೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ. ಹಾಗೆಯೇ ಮೇಲಿನ ನಿಯಮಗಳು ಸಾಂಪ್ರದಾಯಿಕ ಚಿಂತನೆಯನ್ನು ಆಧರಿಸಿವೆ ಹೊರತು ವಿಜ್ಞಾನದಿಂದ ಬೆಂಬಲಿತವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net