

ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಡಿಸೆಂಬರ್ 30) ಅಯೋಧ್ಯೆಯಲ್ಲಿ ರೈಲು ಹಾಗೂ ವಿಮಾನ ನಿಲ್ದಾಣದ ಜೊತೆಗೆ ಬಹುಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಿದ್ದಾರೆ.
ಬಳಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜನವರಿ 22ರಂದು ನಡೆಯುವ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಯಾರು ಬರಬೇಡಿ. ಕಾರ್ಯಕ್ರಮಕ್ಕೆ ಕೆಲವೇ ಜನರನ್ನು ಆಹ್ವಾನಿಸಲಾಗಿದ್ದು, ಆದ ಕಾರಣ ಹೆಚ್ಚಿನ ಜನರು ಬರಬೇಡಿ ಎಂದು ಹೇಳಿದ್ದಾರೆ.
ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಆದಾಗ ನೀವೆಲ್ಲರೂ ಮನೆಯಲ್ಲಿ ದೀಪಾವಳಿಯನ್ನು ಆಚರಿಸಬೇಕು, ಪ್ರತಿಯೊಬ್ಬರೂ ಮನೆಯಲ್ಲಿ ದೀಪ ಬೆಳಗಿಸಿ ಎಂದು ನಾನು ವಿನಂತಿಸುತ್ತೇನೆ. ಅದ್ಧೂರಿ ಕಾರ್ಯಕ್ರಮಕ್ಕೆ ಸಿದ್ಧತೆಗಳು ವರ್ಷಗಳಿಂದ ನಡೆಯುತ್ತಿದ್ದು, ಯಾವುದೇ ಅಡ್ಡಿ ಉಂಟಾಗಬಾರದು.
ದೇವಸ್ಥಾನ ಎಲ್ಲಿಯೂ ಹೋಗುವುದಿಲ್ಲ. ಇದು ಶತಮಾನಗಳವರೆಗೆ ಇರುತ್ತದೆ. ನೀವು ಜನವರಿ, ಫೆಬ್ರವರಿ, ಅಥವಾ ಮಾರ್ಚ್ ಅಥವಾ ಮುಂದಿನ ವರ್ಷ ಯಾವಾಗ ಬೇಕಾದರೂ ಬರಬಹುದು. ಆದರೆ ಜನವರಿ 22 ರಂದು ಬರಬೇಡಿ. ದೇವಾಲಯದ ಆಡಳಿತ ಮಂಡಳಿಗೆ ಭಕ್ತರಿಂದ ತೊಂದರೆ ಆಗಬಾರದು. ಸಮಾರಂಭಕ್ಕೆ ಕೆಲವೇ ಜನರನ್ನು ಆಹ್ವಾನಿಸಲಾಗಿದೆ. 23 ರ ನಂತರ ಭೇಟಿ ನೀಡಲು ಸುಲಭವಾಗುತ್ತದೆ.
ಇದನ್ನೂ ಓದಿ: ಒಂದೇ ಸಮನೆ ಅಳುತ್ತಿದ್ದ ಮಗನನ್ನೇ ಕೊಂದ ಪಾಪಿ ತಾಯಿ
ಅಯೋಧ್ಯಾ ನಗರವನ್ನು ದೇಶದಲ್ಲೇ ಅತ್ಯಂತ ಸ್ವಚ್ಛ ನಗರವನ್ನಾಗಿ ಮಾಡಲು ಅಯೋಧ್ಯೆ ಜನರನ್ನು ಒತ್ತಾಯಿಸಿದ ಪ್ರಧಾನಿ ಮೋದಿ, ಅಯೋಧ್ಯೆ ಈಗ ಲಕ್ಷಗಟ್ಟಲೆ ಸಂದರ್ಶಕರಿಗೆ ಆತಿಥ್ಯ ವಹಿಸಲು ಸಿದ್ಧರಾಗಿರಬೇಕು ಮತ್ತು ಅದು ಶಾಶ್ವತವಾಗಿ ಮುಂದುವರಿಯುತ್ತದೆ. ಅಯೋಧ್ಯೆಯನ್ನು ದೇಶದ ಅತ್ಯಂತ ಸ್ವಚ್ಛ ನಗರವನ್ನಾಗಿ ಮಾಡಲು ಅಯೋಧ್ಯೆಯ ಜನರು ಪ್ರತಿಜ್ಞೆ ಮಾಡಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಡಿಸೆಂಬರ್ 30) ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಿರುವ ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಧಾಮ ಎಂದು ಹೆಸರಿಡಲಾದ ವಿಮಾನ ನಿಲ್ದಾಣ ಉದ್ಘಾಟಿಸಿದ್ದಾರೆ. 1,450 ಕೋಟಿ ರೂಪಾಯಿ ವೆಚ್ಚದಲ್ಲಿ ವಿಮಾನ ನಿಲ್ದಾಣದ ಮೊದಲನೇ ಹಂತದ ಕಾಮಗಾರಿ ಮುಗಿದಿದ್ದು, ಇಂದಿನಿಂದ (ಡಿಸೆಂಬರ್ 30) ವಿಮಾನಗಳು ಕಾರ್ಯಾಚರಣೆ ನಡೆಸಲಿವೆ.
ವಿಮಾನ ನಿಲ್ದಾಣವು 2200 ಮೀಟರ್ ಉದ್ದದ ರನ್ ವೇ ಹೊಂದಿದೆ ಮತ್ತು A-321 ಮಾದರಿಯ ವಿಮಾನಗಳಿಗೆ ಸೂಕ್ತವಾಗಿದೆ. ಎರಡು ಲಿಂಕ್ ಟ್ಯಾಕ್ಸಿವೇಗಳು ಮತ್ತು ಗ್ರೌಂಡ್ ಸಪೋರ್ಟ್ ಎಕ್ವಿಪ್ಮೆಂಟ್ ಏರಿಯಾ ಜೊತೆಗೆ ಎಂಟು A321 ಗಳನ್ನು ಪಾರ್ಕಿಂಗ್ ಮಾಡಲು ಸೂಕ್ತವಾದ ಏಪ್ರನ್ ಅನ್ನು ಸಹ ನಿರ್ಮಿಸಲಾಗಿದೆ.
6,500 ಚದರ ಮೀಟರ್‌ಗಳಷ್ಟು ವಿಸ್ತಾರವಾಗಿರುವ ಹೊಸ ಟರ್ಮಿನಲ್ ಕಟ್ಟಡವು ವಾರ್ಷಿಕ 10 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಹಂತ 2 ರ ಅಡಿಯಲ್ಲಿ, 50,000 ಚದರ ಮೀಟರ್‌ನ ಹೊಸ ಟರ್ಮಿನಲ್ ಕಟ್ಟಡವನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ನಿಲ್ದಾಣಕ್ಕೆ ಉದ್ಘಾಟನಾ ವಿಮಾನಗಳನ್ನು ನಿರ್ವಹಿಸುತ್ತವೆ. ಇಂಡಿಗೋ ಜನವರಿ 15 ರಿಂದ ಮುಂಬೈ ಮತ್ತು ಅಯೋಧ್ಯೆ ನಡುವೆ ದೈನಂದಿನ ವಿಮಾನ ಸಂಚಾರ ನಡೆಸಲಿದೆ.