More

    ಅಪ್ರಾಪ್ತ ವಯಸ್ಕಳ ಮೇಲೆ Aತ್ಯಾಚಾರ; ಕ್ರಿಕೆಟಿಗ ಸಂದೀಪ್​ಗೆ ಸಜೆ

    ಕಠ್ಮಂಡು: ಅಪ್ರಾಪ್ತ ವಯಸ್ಕಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಪಾಳ ಕ್ರಿಕೆಟ್ ತಂಡ ಮಾಜಿ ನಾಯಕ, ಸ್ಪಿನ್ನರ್​ ಸಂದೀಪ್​ ಲಮಿಚಾನೆ ಎಂದು ಕಠ್ಮಂಡು ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.

    ಪ್ರಕರಣದಲ್ಲಿ ಸಂದೀಪ್‌ಗೆ ಎಷ್ಟು ವರ್ಷ ಶಿಕ್ಷೆ ವಿಧಿಸಲಾಗುತ್ತದೆ ಎಂಬುದನ್ನು ನ್ಯಾಯಾಧೀಶರು ಬಹಿರಂಗಪಡಿಸಿಲ್ಲ. ಮುಂದಿನ ವಿಚಾರಣೆಯಲ್ಲಿ ಈ ಬಗ್ಗೆ ಪ್ರಕಟಿಸಲಾಗುತ್ತದೆ ಎಂದು ತಿಳಿದು ಬಂದಿದೆ.

    ಪ್ರಕರಣದ ಹಿನ್ನಲೆ

    ನೇಪಾಳದ ಸ್ಟಾರ್‌ ಕ್ರಿಕೆಟಿಗ ಎನಿಸಿರುವ ಲಮಿಚಾನೆ ವಿರುದ್ಧ ಸಂತ್ರಸ್ತ ಬಾಲಕಿಯು (17 ವರ್ಷ) ಕಳೆದ ವರ್ಷ ಸೆಪ್ಟೆಂಬರ್‌ 6ರಂದು  ಆಗಸ್ಟ್‌ 21ರಂದು ತನ್ನೊಂದಿಗೆ ಕಠ್ಮಂಡುವಿನ ವಿವಿಧ ತಾಣಗಳಲ್ಲಿ ಸುತ್ತಾಡಿದ್ದ ಸಂದೀಪ್, ನಂತರ ಹೋಟೆಲ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ ಎಂದು ಗೋಶಾಲಾ ಮೆಟ್ರೊಪಾಲಿಟಿನ್ ಪೊಲೀಸರಿಗೆ ದೂರು ನೀಡಿದ್ದಳು. 

    ಇದನ್ನೂ ಓದಿ: ಬಿಜೆಪಿ ‘ಶ್ರೀರಾಮ’ ನಮ್ಮ ಅಭ್ಯರ್ಥಿ ಎಂದು ಘೋಷಿಸುವುದೊಂದೇ ಬಾಕಿ: ಸಂಜಯ್ ರಾವತ್

    ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಸಂದೀಪ್​ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಅದರಂತೆ ಬಂಧನಕ್ಕೊಳಗಾಗಿದ್ದ ಲಮಿಚಾನೆ, ಈ ವರ್ಷ ಜನವರಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಪ್ರಕರಣ ಸಂಬಂಧ ಭಾನುವಾರದಿಂದ ಆರಂಭವಾದ ಅಂತಿಮ ವಿಚಾರಣೆ ನಡೆಸಿದ ನ್ಯಾ.ಶಿಶಿರ್‌ ರಾಜ್ ಧಾಕಲ್‌ ಅವರಿದ್ದ ಏಕಸದಸ್ಯ ಪೀಠ, ಲಮಿಚಾನೆ ದೋಷಿ ಎಂದು ತೀರ್ಪು ನೀಡಿದೆ.

    2018ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಪದಾರ್ಪಣೆ ಮಾಡುವ ಮೂಲಕ, ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಆಡಿದ ನೇಪಾಳದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts