More

    ವೈರಲ್ ಆಗುವ ಭರದಲ್ಲಿ ಪೊಲೀಸ್​ ಠಾಣೆ ಎದುರು ಗಾಂಜಾ ಸೇವನೆ; ಮುಂದೆ ನಡೆದಿದ್ದಿಷ್ಟು

    ಹೈದರಾಬಾದ್: ಪ್ರಚಾರದ ಹುಚ್ಚಿಗೆ ಬಿದ್ದು ರೀಲ್ಸ್​ ಮಾಡುವುದು, ಅದಕ್ಕಾಗಿ ಪ್ರಾಣ ಪಣಕ್ಕಿಡುವುದು, ಇನ್ನೊಬ್ಬರ ಪ್ರಾಣ, ಆಸ್ತಿಗೆ ಹಾನಿಯುಂಟು ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಹೀಗೆ ರೀಲ್​ ಮಾಡುವವರ ಹಿಂದೆ ಕಾನೂನು ಹಿಂಬಾಲಿಸುತ್ತದೆ ಎಂಬ ಅರಿವು ಅಂತಹವರಿಗೆ ಇರುವುದಿಲ್ಲ.

    ಇದೀಗ ವೈರಲ್​ ಆಗುವ ಭರದಲ್ಲಿ ಯುವಕನೋರ್ವ ಪೊಲೀಸ್​ ಠಾಣೆ ಎದುರು ಗಾಂಜಾ ಸೇವಿಸಿ ಅರೆಸ್ಟ್​ ಆಗಿರುವ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದಿನ ರಾಮ್​ಗೋಪಾಲ್​ಪೇಟ್​ನಲ್ಲಿ ನಡೆದಿದೆ.

    ವೈರಲ್​ ಆಗಿರುವ ವಿಡಿಯೋದಲ್ಲಿ ರಾಮ್​ಗೋಪಾಲ್​ಪೇಟ್​ ಪೊಲೀಸ್​ ಠಾಣೆಯ ಮುಂಭಾಗ ಯುವಕನೋರ್ವ ಗಾಂಜಾ ಸೇವನೆ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಬಳಿಕ ಆ ವಿಡಿಯೋವನ್ನು ತನ್ನಿಷ್ಟದಂತೆ ಎಡಿಟ್​ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್​ ಮಾಡಿದ್ದಾನೆ. ವಿಡಿಯೋ ಕ್ಷಣಾರ್ಧದಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ಹಾಗೂ ಯುವಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

    ಇದನ್ನೂ ಓದಿ: ಬಾಕ್ಸ್​ಆಫೀಸ್​ನಲ್ಲಿ ಮತ್ತೆ ಬಿರುಗಾಳಿ ಎಬ್ಬಿಸಿದ ಪ್ರಶಾಂತ್​ ನೀಲ್; 500 ಕೋಟಿ ರೂ. ಕ್ಲಬ್​ ಸೇರಿದ ಸಲಾರ್​!

    ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವು ತೊಂದರೆಯನ್ನುಂಟುಮಾಡುತ್ತದೆ ಮತ್ತು ಅದು ಇತರರಿಗೂ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಪೊಲೀಸರು ಯುವಕನನ್ನು ವಶಕ್ಕೆ ಪಡೆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಭಾರತದಲ್ಲಿ ಗಾಂಜಾ ಮಾರಾಟ ಹಾಗೂ ಸೇವನೆಯನ್ನು ನಿಷೇಧಿಸಲಾಗಿದ್ದು, ಒಂದು ವೇಳೆ ನಿಯಮ ಮೀರಿ ಸೇವನೆ ಮಾಡಿದ್ದಲ್ಲಿ NDPS ಕಾಯ್ದೆ ಸೆಕ್ಷನ್​ 20ರ ಅಡಿಯಲ್ಲಿ ಆರು ತಿಂಗಳ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts