ದಾನಿಗಳಿಂದ ಸರ್ಕಾರಿ ಶಾಲೆಗಳ ಪ್ರಗತಿ

konjadi
Published on

ಆರ್ಡಿ: ದಾನಿಗಳು, ಹಳೇ ವಿದ್ಯಾರ್ಥಿಗಳು, ಶಿಕ್ಷಣಾಭಿಮಾನಿಗಳ ಕೊಡುಗೆಗಳಿಂದ ಸರ್ಕಾರಿ ಶಾಲೆಗಳು ಉತ್ತಮ ಪ್ರಗತಿ ಹೊಂದುತ್ತಿರುವುದು ಪ್ರಶಂಸನೀಯ ಎಂದು ಹಿಲಿಯಾಣ ಶ್ರೀ ಬ್ರಹ್ಮಬೈದರ್ಕಳ ಗರೋಡಿ ಅಧ್ಯಕ್ಷ ವೈ.ಕರುಣಾಕರ ಶೆಟ್ಟಿ ಯರುಕೋಣೆ ಹೇಳಿದರು.

ಕೊಂಜಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಇತ್ತೀಚೆಗೆ ಅಕ್ವಾಗಾರ್ಡ್ ಯಂತ್ರ ಕೊಡುಗೆ ನೀಡಿ ಮಾತನಾಡಿದರು. ಬೆಳ್ವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ, ಪ್ರಮುಖರಾದ ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ, ಬಾಬು ಶೆಟ್ಟಿ ಜಗ್ಲುಗುಡ್ಡೆ, ಅಣ್ಣಯ್ಯ ಶೆಟ್ಟಿ, ವೈ.ಪಟ್ಟಾಭಿರಾಮ್ ಭಟ್ ಮರೂರು, ಪತ್ರಕರ್ತ ಕೆ.ಸಂಜೀವ ಆರ್ಡಿ, ಶ್ರೀನಿವಾಸ ಆಚಾರ್ಯ ಕಾರಿಕೊಡ್ಲು, ಲಲಿತಾ ಪದ್ಮನಾಭ ಆಚಾರ್ಯ, ಪ್ರಸಾದ್ ತೊನ್ನಾಸೆ, ಅಚ್ಯುತ್ ಶೆಟ್ಟಿ, ಗಿರೀಶ್ ಕಲ್ಮರ್ಗಿ, ನಾರಾಯಣ ನಾಯ್ಕ, ನಾರಾಯಣ ನಾಯ್ಕ, ನಾರಾಯಣ ನಾಯ್ಕ ಉಪಸ್ಥಿತರಿದ್ದರು. ನಾರಾಯಣ ನಾಯ್ಕ ಸ್ವಾಗತಿಸಿದರು. ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net