ಕೇಂದ್ರ ಸರ್ಕಾರ ಯೋಜನೆ ಮಾಹಿತಿ

gaurava
ಬೈಂದೂರು ಕ್ಷೇತ್ರದ ಸಮಸ್ಯೆ ನಿರಂತರವಾಗಿ ಶಾಸಕರ ಗಮನಕ್ಕೆ ತಂದ ಕ್ಷೇತ್ರದ ಪ್ರಾಣೇಶ್ ಯಡಿಯಾಳ್, ಚರಣ್ ಬೈಂದೂರು, ಸಿದ್ದೇಶ್ ಯಳಜಿತ್, ಗೋಪಾಲ ಪೂಜಾರಿ ವಸ್ರೆ, ರಾಘವೇಂದ್ರ ಸುರಭಿ ಅವರನ್ನು ಗೌರವಿಸಲಾಯಿತು.
Published on

ಬೈಂದೂರು: ಕೇಂದ್ರ ಸರ್ಕಾರ ಯೋಜನೆ ಮನೆಮನೆಗೆ ತಲುಪಿಸುವ ನಿಟ್ಟಿನಲ್ಲಿ ಜಿಜಿಎಂವೈ ಯೋಜನೆ ಸಿದ್ಧಪಡಿಸಿದ್ದೇವೆ. ಮೋದಿ ಸರ್ಕಾರದ ಪ್ರತಿ ಯೋಜನೆ ಬಗ್ಗೆ ನಮ್ಮ ಕ್ಷೇತ್ರದ ಜನರಿಗೆ ಮಾಹಿತಿ ಇರಬೇಕು ಮತ್ತು ಪ್ರತಿ ಯೋಜನೆ ಲಾಭ ಕ್ಷೇತ್ರದ ಅರ್ಹ ಜನರು ಪಡೆದುಕೊಳ್ಳಬೇಕು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ಬೈಂದೂರಿನ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಬೈಂದೂರಿನಲ್ಲಿ ಕಾರ್ಯಾಗಾರದಲ್ಲಿ ಘರ್‌ಘರ್ ಮೋದಿ ಯೋಜನೆ (ಜಿಜಿಎಂವೈ) ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಕಾರ್ಯಕರ್ತ ಶಾಸಕರ ಕಚೇರಿಗೆ ಕರೆ ಅಥವಾ ಸ್ವತಃ ಬಂದು ಸಂಪರ್ಕಿಸಿ ನೀಡಿದ ದೂರು ಬಗೆಹರಿಸುವ ಕೆಲಸ ಅವಿರತವಾಗಿ ನಡೆಯುತ್ತಿವೆ. ಇದುವರೆಗೆ ಶಾಸಕರ ಕಾರ್ಯಾಲಯಕ್ಕೆ ಒಟ್ಟು 16,200ಕ್ಕೂ ಅಧಿಕ ಕರೆ ಬಂದಿದ್ದು, 9000ಕ್ಕೂ ಕ್ಷೇತ್ರದ ಅಧಿಕ ಜನರು ಕರೆ ಮಾಡಿದ್ದಾರೆ. ಶಾಸಕರ ಕಚೇರಿ ಸಂಪರ್ಕಿಸಿ ಕ್ಷೇತ್ರದ ಸಮಸ್ಯೆ ನಿರಂತರವಾಗಿ ಶಾಸಕರ ಗಮನಕ್ಕೆ ತಂದ ಕ್ಷೇತ್ರದ ಪ್ರಾಣೇಶ್ ಯಡಿಯಾಳ್, ಚರಣ್ ಬೈಂದೂರು, ಸಿದ್ದೇಶ್ ಯಳಜಿತ್, ಗೋಪಾಲ ಪೂಜಾರಿ ವಸ್ರೆ, ರಾಘವೇಂದ್ರ ಸುರಭಿ ಅವರನ್ನು ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net