ನಮ್ಮ ಕ್ಲಿನಿಕ್‌ಗೆ ವಿವಿಧ ಉಪಕರಣಗಳ ಕೊಡುಗೆ

kota (7)
Published on

ಕೋಟ: ಪಡುಕರೆ ಕೋಟತಟ್ಟು ಟೀಮ್ ಭವಾಬ್ದಿ ಸಂಸ್ಥೆ ವತಿಯಿಂದ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಪಾರಂಪಳ್ಳಿ ಪಡುಕರೆ ನಗರದಲ್ಲಿರುವ ಆರೋಗ್ಯ ಕ್ಷೇಮ ನಮ್ಮ ಕ್ಲಿನಿಕ್‌ಗೆ ವಿವಿಧ ಉಪಕರಣಗಳನ್ನು ಪಾರಂಪಳ್ಳಿ ಪಡುಕರೆ ವಾರ್ಡ್ ಸದಸ್ಯೆ ರೇಖಾ ಕೇಶವ ಕರ್ಕೇರ ಹಸ್ತಾಂತರಿಸಿದರು.

ಟೀಮ್ ಭವಾಬ್ದಿ ಅಧ್ಯಕ್ಷ ಸಂತೋಷ್ ತಿಂಗಳಾಯ, ಸಂಚಾಲಕ ರವೀಂದ್ರ ತಿಂಗಳಾಯ, ಸಮುದಾಯ ಆರೋಗ್ಯ ಅಧಿಕಾರಿ ಡಾ.ಸುಶ್ಮಿತಾ, ಸ್ಟಾಫ್ ನರ್ಸ್ ಶ್ರೀಲಕ್ಷ್ಮೀ, ರಚನಾ, ಸಂಸ್ಥೆ ಪ್ರಧಾನ ಕಾರ್ಯದರ್ಶಿ ಭರತ್ ಪೂಜಾರಿ, ಖಜಾಂಚಿ ಶಿವಾನಂದ ಕುಂದರ್, ಉಪಾಧ್ಯಕ್ಷ ಉದಯ್ ಬಂಗೇರ, ಕೇಶವ ಕರ್ಕೇರ, ದರ್ಶನ್ ಪೂಜಾರಿ, ಆಕಾಶ್, ಶ್ರೀನಿವಾಸ, ಅಮೋ ತಿಂಗಳಾಯ, ಸುಶಾಂತ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಸಂಸ್ಥೆ ಸದಸ್ಯ ದೇವೇಂದ್ರ ಶ್ರೀಯನ್ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net