ಕುಂದಾಪುರದಲ್ಲಿ ಸಂತ ಫ್ರಾನ್ಸಿಸ್ ಆಸೀಸಿ ಹಬ್ಬ ಆಚರಣೆ

gan (8)
Published on

ಕುಂದಾಪುರ: ಕುಂದಾಪುರ ರೋಜರಿ ಚರ್ಚ್‌ನ ಸಂತ ಫ್ರಾನ್ಸಿಕನ್ ಸಭಾದಿಂದ ಅವರ ಪೋಷಕ ಸಂತ ಫ್ರಾನ್ಸಿಸ್ ಆಸೀಸಿ ಹಬ್ಬವನ್ನು ಭಾನುವಾರ ಆಚರಿಸಲಾಯಿತು.

ಚರ್ಚ್‌ನ ಧರ್ಮಗುರು ಪಾವ್ಲ್ ರೇಗೊ ನೇತೃತ್ವದಲ್ಲಿ ದಿವ್ಯ ಬಲಿ ಪೂಜೆ ಅರ್ಪಿಸಲಾಯಿತು.

ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯಾ, ಚಚ್‌ನ ಪಾಲನಾ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ ಶುಭ ಕೋರಿದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುವಾನಗಳನ್ನು ವಿತರಿಸಲಾಯಿತು.

ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಸರ್ವ ಆಯೋಗಗಳ ಸಂಚಾಲಕಿ ಪ್ರೇವಾ ಡಿಕುನ್ಹಾ ಉಪಸ್ಥಿತರಿದ್ದರು.

ಫ್ರಾನ್ಸಿಕನ್ ಸಭಾದ ಅಧ್ಯಕ್ಷೆ ಡಾ. ಸೋನಿ ಡಿಕೋಸ್ತಾ ಸ್ವಾಗತಿಸಿದರು. ಕಾರ್ಯದರ್ಶಿ ಐವಿನ್ ಡಿಸೋಜ ವರದಿ ವಾಚಿಸಿದರು. ಉಪಾಧ್ಯಕ್ಷೆ ಆಲಿಸ್ ಬಾಂಜ್ ವಂದಿಸಿದರು. ಡಾಯಾನಾ ಡಿಆಲ್ಮೇಡಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net