ಪ್ರಾಣಿ ಪ್ರಿಯ ಸುಧೀಂದ್ರ ಐತಾಳ್ ಅಭಿಮಾನಿಗಳ ಸಭೆ

kota (6)
Published on

ಕೋಟ: ಸಾಲಿಗ್ರಾಮದ ಸುಧೀಂದ್ರ ಐತಾಳ್ ಪ್ರಾಣಿ ಸಂಗ್ರಹಾಲಯದ ಮೇಲೆ ಜಿಲ್ಲಾಡಳಿತ ಮತ್ತು ಪೆಟಾ ಸೇರಿದಂತೆ ಸಂಬಂಧಿಸಿದ ಇಲಾಖೆ ನಿರಂತರ ದಾಳಿ ಖಂಡಿಸಿ ಪ್ರಾಣಿ ಪ್ರಿಯ ಸುಧೀಂದ್ರ ಐತಾಳ್ ಅಭಿಮಾನಿಗಳು ಭಾನುವಾರ ಅವರ ಗೃಹದಲ್ಲಿ ಸಭೆ ನಡೆಸಿದರು.

ಸಾವಾಜಿಕ ಕಾರ್ಯಕರ್ತ ಕೋಟ ದಿನೇಶ್ ಗಾಣಿಗ ವಾತನಾಡಿ, ಐತಾಳರ ಪ್ರಾಣಿ ಸಂಗ್ರಾಲಯದ ಮೇಲೆ ವ್ಯವಸ್ಥಿತವಾದ ಪಿತೂರಿ ಮೂಲಕ ದಾಳಿ ನಡೆಸಲಾಗಿದೆ. ಈ ಬಗ್ಗೆ ಕಾನೂನಿನ ಮೂಲಕ ಸೂಕ್ತ ಉತ್ತರ ನೀಡಲಿದೆ. ಇನ್ನೊಂದೆಡೆ ಇದಕ್ಕೆ ಪೂರಕ ಕ್ರಮಗಳನ್ನು ಸಭೆಯಲ್ಲಿ ಕೈಗೊಳ್ಳಬೇಕಿದೆ. ಜಿಲ್ಲೆಯ ಎಲ್ಲ ಪ್ರಾಣಿ ಪ್ರಿಯರು ಮತ್ತು ಅಭಿವಾನಿಗಳ ಸಮ್ಮುಖ ಪ್ರಾಣಿ, ಪಕ್ಷಿ ಸಂರಕ್ಷಣಾ ಸಮಿತಿ ರಚಿಸಿ, ಮುಂದಿನ ಹೋರಾಟದ ಬಗ್ಗೆ ತೀರ್ವಾನ ಕೈಗೊಳ್ಳಲಾಯಿತು.

ಸುಧೀಂದ್ರ ಐತಾಳ್, ಶ್ರೀಕಾಂತ್ ಶೆಣೈ ಕೋಟ, ನಾಗರಾಜ್ ಗಾಣಿಗ ಸಾಲಿಗ್ರಾಮ, ಉದಯ್ ಕುವಾರ್ ಬ್ರಹ್ಮಾವರ, ಗಣೇಶ್ ರಾವ್, ಸತ್ಯನಾರಾಯಣ ಉಡುಪ, ಅಶೋಕ್ ಪೂಜಾರಿ ಸಾಲಿಗ್ರಾಮ, ತಿಲೋತ್ತಮ ನಾಯಕ್, ನಿಶಾಂತ್ ಬಸ್ರೂರು, ಪಾರಂಪಳ್ಳಿ ಶಿವಣ್ಣ, ಸಾಸ್ತಾನದ ಮೊಹಮ್ಮದ್, ಉಮ್ಮರ, ಸಚಿನ್ ಶ್ರೀಯಾನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net