VIDEO| ಚಿರತೆಯನ್ನು ಧೈರ್ಯವಾಗಿ ಹಿಮ್ಮೆಟ್ಟಿಸಿದ ಶ್ವಾನ

Dog Leopord
Published on

ನಾಸಿಕ್​: ದಾಳಿ ಮಾಡಲು ಹೊಂಚು ಹಾಕುತ್ತ ಕಾದು ಕುಳಿತಿದ್ದ ಚಿರತೆಯೊಂದನ್ನು ಎರಡು ನಾಯಿಗಳು ಧೈರ್ಯವಾಗಿ ಹಿಮ್ಮೆಟ್ಟಿಸಿರುವ ಘಟನೆ ಮಹಾರಾಷ್ಟ್ರದ ನಾಸಿಕ್​ ಜಿಲ್ಲೆಯ ಅಡ್ಗಾಂವ್​ ಶಿವಾರ್​ ಪ್ರದೇಶದಲ್ಲಿ ನಡೆದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಚಿರತೆಯನ್ನು ಎರಡು ನಾಯಿಗಳು ಹಿಮ್ಮೆಟ್ಟಿಸುತ್ತಿರುವುದು ಕಂಡು ಬರುತ್ತದೆ. ಈ ದೃಶ್ಯವು ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ವೈರಲ್​ ಆಘಿರುವ ವಿಡಿಯೋದಲ್ಲಿ ಮನೆಯ ಕಾಂಪೌಂಡ್​ನಲ್ಲಿ ಎರಡು ನಾಯಿಗಳು ಮಲಗಿದ್ದು ನಿಧಾನವಾಗಿ ಚಿರತೆ ಬಂದು ಅದನ್ಉ ಕೊಂದು ತಿನ್ನಲು ಯತ್ನಿಸುತ್ತದೆ. ಈ ವೇಳೆ ಅಲ್ಲೇ ಮಲಗಿದ್ದ ಮತ್ತೊಂದು ನಾಯಿ ಇದನ್ನು ಗಮನಿಸಿ ಕೂಡಲೇ ಬೊಗಳಲು ಶುರು ಮಾಡುತ್ತದೆ. ಇದರಿಂದ ಗಾಬರಿಗೊಳ್ಳುವ ಚಿರತೆ ತನ್ನ ಬೇಟೆಯನ್ನು ಬಿಟ್ಟು ಓಡಲು ಶುರು ಮಾಡುತ್ತದೆ.

ಇದಾದ ಕೆಲ ಕ್ಷಣದ ಬಳಿಕ ಮತ್ತೊಮ್ಮೆ ಹೊಂಚು ಹಾಕಿ ವಾಪಸ್​ ಬರುವ ಚಿರತೆಯನ್ನು ಹೆದರದ ರ್ಶವಾನಗಳು ಅದನ್ನು ಧೈರ್ಯವಾಗಿ ಹಿಮ್ಮೆಟ್ಟಿಸಿತ್ತಿರುವ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ಘಟನೆಯ ದೃಶ್ಯ ಮನೆಯ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅರಣ್ಯಾಧಿಕಾರಿ ವಿರ್ಶರಾಲಿ ಗಾಡೆ ಕಳೆದ ಕೆಲ ದಿನಗಳಿಂದ ಈ ಪ್ರದೇಶದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಈಗಅಗಲೇ ಅದನ್ನು ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಆರಂಭಿಸಿದ್ದೇವೆ. ಶೀಘ್ರದಲ್ಲೇ ಅದನ್ನು ಹಿಡಿದು ಕಾಡಿಗೆ ವಾಪಸ್​ ಬಿಡಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net