ಬೆಂಗಳೂರು: ಸಾಮಾಜಿಕ ಮಾಧ್ಯಮ ಜನಪ್ರಿಯತೆ ಗಳಿಸುತ್ತಿದ್ದಂತೆ ಮಾನವ- ಪ್ರಾಣಿಗಳ ಸಂಬಂಧ ಅದರಲ್ಲೂ ನಾಯಿ(Dog)ಗಳು ತೋರುವ ನಿಯತ್ತು ಮತ್ತು ನೆರವಾಗುವ ದೃಶ್ಯಗಳು ಎಲ್ಲೆಡೆ ಕಂಡುಬರುತ್ತಿರುತ್ತವೆ. ಇತ್ತೀಚಿಗೆ ಇದೇ ರೀತಿಯ ವಿಡಿಯೋವೊಂದು ಸದ್ದು ಮಾಡುತ್ತಿದೆ. ಆಗಷ್ಟೇ ಹೆಜ್ಜೆ ಹಾಕುವುದನ್ನು ಕಲಿಯುತ್ತಿರುವ ಕಂದಮ್ಮನಿಗೆ ನಾಯಿ ಅಮ್ಮನಂತೆ ಸಹಾಯ ಮಾಡಿದೆ. ಇದನ್ನು ನೋಡಿ ನೆಟ್ಟಿಗರು ಆಶ್ಚರ್ಯ ಪಡುತ್ತಿದ್ದಾರೆ.
ಇದನ್ನೂ ಓದಿ: Wife Harassment : ‘ಪತ್ನಿ ಲೈಂಗಿಕ ಕಿರುಕುಳ ತಾಳದೆ ಆತ್ಮಹತ್ಯೆಗೆ ಯತ್ನಿಸಿದ ಪತಿ! ಪತ್ರದಲ್ಲಿ ಹೀಗೆ ಬರೆದ, ರಾತ್ರಿಯಾದರೆ.. ?
ಇದೀಗ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ. ಹಸುಗೂಸು ಮರಳಿನಲ್ಲಿ ಅಂಬೇಗಾಲು ಇಡುತ್ತಿರುವಾಗ ಕಾಲುಗಳು ಮರಳಿನಲ್ಲಿ ಸಿಲುಕಿದಾಗ ಆಸರೆಯಾಗಿ ನಿಂತಿದೆ.
ನಾಯಿ ಸಹಾಯಕ್ಕೆ ಬರುತ್ತಿದ್ದಂತೆಯೇ ಮಗು ನಾಯಿಯ ಮೇಲೆ ಕೈಯಿಟ್ಟು ಸಮತೋಲನ ಪಡೆದು ಮುಂದೆ ನಡೆದಿದೆ. ಸ್ವಲ್ಪ ಮುಂದೆ ಹೋದ ನಂತರ ಮತ್ತೆ ಬೀಳುವ ಹಂತದಲ್ಲಿದ್ದಾಗ ನಾಯಿ ಮಗುವಿನ ಹಿಂದೆ ಹೋಗಿ ಸಹಾಯ ಮಾಡಿದೆ. ಪುಟಾಣಿ ಬಹಳ ದೂರ ನಡೆಯುವವರೆಗೂ ಅವನ ಪಕ್ಕದಲ್ಲಿ ಹೋಗಿ ಸಹಾಯ ಮಾಡಿದೆ. ಈ ದೃಶ್ಯವನ್ನು ಬಾಲಕನ ಮನೆಯವರು ವಿಡಿಯೋದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಸದ್ಯ ಈ ವೀಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಇದಕ್ಕೆ ನೆಟಿಜನ್‌ಗಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು, “ಈ ನಾಯಿಯಿಂದ ನಾನು ಬಹಳಷ್ಟು ಕಲಿಯಬೇಕಾಗಿದೆ” ಎಂದರೆ, ಅಮ್ಮನಾದ ನಾಯಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ವೀಡಿಯೊ ಪ್ರಸ್ತುತ 750 ಕ್ಕೂ ಹೆಚ್ಚು ಇಷ್ಟಗಳು ಮತ್ತು 2.4 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದ್ದು, ಎಲ್ಲೆಡೆ ವೈರಲ್ ಆಗಿದೆ.
Lion: ‘ಅಯ್ಯೋ, ಕಾಡಿನ ರಾಜಾ ನಿನಗೆಥ ಸ್ಥಿತಿ ಬಂತಪ್ಪಾ’: ಸಿಂಹದ ಜೊತೆ ಮಾಲೀಕನ ಆಟ ನೋಡಿದ ನೆಟ್ಟಿಗರು ಮರುಕ..