ನವದೆಹಲಿ: ಅಡವಿ ಮೃಗಗಳಾದ ಸಿಂಹ( Lion), ಹುಲಿ ಮತ್ತು ಕರಡಿಗಳಂತಹ ಪ್ರಾಣಿಗಳನ್ನು ದುಬೈ ಸೇರಿದಂತೆ ವಿದೇಶಗಳಲ್ಲಿ ಜನರು ತಮ್ಮ ಮನೆಗಳಲ್ಲಿ ಸಾಕುತ್ತಾರೆ. ಅವುಗಳನ್ನು ಸಾಕುವುದು ಸ್ಟೇಟಸ್ ಎಂದು ಪರಿಗಣಿಸುತ್ತಾರೆ. ಇಂತಹ ಪ್ರಾಣಿಗಳೊಂದಿಗೆ ಕಾಣಿಸಿಕೊಳ್ಳುವ ಅವುಗಳ ಮಾಲೀಕರ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ಸಿಂಹದ ಜೊತೆ ವ್ಯಕ್ತಿ ಕಾಣಿಸಿಕೊಂಡಿರುವ ವೀಡಿಯೋ ವೈರಲ್ ಆಗುತ್ತಿದೆ.
ಇದನ್ನೂ ಓದಿ: Police: ಡಿಎಸ್ಪಿಯಾಗಿ ಕ್ರಿಕೆಟಿಗ ಮೊಹಮ್ಮದ್ ಸಿರಾಜ್!
ಕಂಟೆಂಟ್ ಕ್ರಿಯೇಟರ್ miansaqib363 ನಲ್ಲಿ ಇತ್ತೀಚೆಗೆ ಹಂಚಿಕೊಂಡ ವೀಡಿಯೋ ಬೆಚ್ಚಿಬೀಳಿಸುವಂತಿದೆ. ವೈರಲ್ ವೀಡಿಯೊದಲ್ಲಿ, ಶಕೀಬ್ ಎಂಬಾತ ತನ್ನ ಮನೆಯ ಆವರಣದಲ್ಲಿ ಸಾಕು ಸಿಂಹದೊಂದಿಗೆ ಆಟವಾಡುತ್ತಿದ್ದಾನೆ. ಸಿಂಹವನ್ನು ಹಿಡಿದುಕೊಂಡು ಯಾವುದೇ ಭಯವಿಲ್ಲದೆ ಮೈಮೈಲೆ ಹಾಕಿಕೊಳ್ಳುತ್ತಾನೆ. ಸಿಂಹ ಕೂಡ ಶಾಂತವಾಗಿ ನಡೆದುಕೊಳ್ಳುತ್ತಿದೆ. ಈ ವೀಡಿಯೋ ನೋಡಿದ ನೆಟ್ಟಿಗರು ‘ಕಾಡಿನ ರಾಜಾ, ನಾಡಿಗೆ ಬಂದು ನಿನಗೆಂಥ ಸ್ಥಿತಿ ಬಂತಪ್ಪಾ’ ಎಂದು ಸಿಂಹದ ಸ್ಥಿತಿಯ ಬಗ್ಗೆ ಕರುಣೆ ತೋರುತ್ತಿದ್ದಾರೆ.
ಇನ್ನು ವೈರಲ್ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. 25 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಈ ವಿಡಿಯೋಗೆ ನೆಟಿಜನ್‌ಗಳು “ಅಯ್ಯೋ ಪಾಪ.. ಸಿಂಹಕ್ಕೆ ಎಂಥ ಗತಿ”, “ಅವನು ಕಾಡಿನ ರಾಜ.. ಹೀಗೆ ಆಡುವುದು ಅಪಾಯಕಾರಿ”, “ವೀಡಿಯೋ ಅದ್ಭುತವಾಗಿದೆ, ಜೊತೆಗೆ ಚಿಂತಿಸುವಂತೆ ಮಾಡಿದೆ”, “ಸಿಂಹದೊಂದಿಗೆ ಅದ್ಭುತ ಬಂಧ, ಆದರೆ, ಆ ಸಂಬಂಧದ ಹಿಂದಿರುವ ಅಪಾಯವನ್ನು ನಿರ್ಲಕ್ಷಿಸಬಾರದು,” ಎಂದು ನೆಟಿಜನ್‌ಗಳು ಪ್ರತಿಕ್ರಿಯಿಸುತ್ತಿದ್ದಾರೆ.
Rape: ಹಬ್ಬದ ದಿನವೇ ಅಮಾನವೀಯ ಘಟನೆ..ಅಪ್ಪ,ಮಗನಿಗೆ ಬೆದರಿಸಿ ಅತ್ತೆ, ಸೊಸೆ ಮೇಲೆ ಸಾಮೂಹಿಕ ಅತ್ಯಾಚಾರ!