Rape: ಹಬ್ಬದ ದಿನವೇ ಅಮಾನವೀಯ ಘಟನೆ..ಅಪ್ಪ,ಮಗನಿಗೆ ಬೆದರಿಸಿ ಅತ್ತೆ, ಸೊಸೆ ಮೇಲೆ ಸಾಮೂಹಿಕ ಅತ್ಯಾಚಾರ!

rape
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಆಂಧ್ರದ ಹಿಂದೂಪುರ(ಶ್ರೀ ಸತ್ಯಸಾಯಿ ಜಿಲ್ಲೆ)ಯಲ್ಲಿ ದಸರಾ ಹಬ್ಬದ ದಿನವೇ ಅಮಾನವೀಯ ಘಟನೆ ನಡೆದಿದೆ. ನಾಲ್ವರು ಪುಂಡರು ಕರ್ನಾಟಕದಿಂದ ವಲಸೆ ಹೋಗಿದ್ದ ಬಡ ಕುಟುಂಬದ ತಂದೆ, ಮಗನಿಗೆ ಚಾಕು ತೋರಿಸಿ ಅತ್ತೆ, ಸೊಸಡ ಮೇಲೆ ಸಾಮೂಹಿಕ ಅತ್ಯಾಚಾರ(Rape) ಎಸಗಿದ್ದಾರೆ. ಚಿಲಮತ್ತೂರು ಮಂಡಲದಲ್ಲಿ ನಡೆದ ಈ ಘಟನೆ ಆಂಧ್ರದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಬಳ್ಳಾರಿಯಿಂದ ವಲಸೆ ಹೋಗಿದ್ದ ಬಡ ಕುಟುಂಬ ಚಿಲಮತ್ತೂರಿನ ಬಡಾವಣೆಯಲ್ಲಿ ನೆಲೆಸಿದೆ. ಇಡೀ ಕುಟುಂಬ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಂಡಿತ್ತು. ಶನಿವಾರ ಮುಂಜಾನೆ 2 ಬೈಕ್ ಗಳಲ್ಲಿ ಬಂದ ದುಷ್ಕರ್ಮಿಗಳು ತಂದೆ-ಮಗನಿಗೆ ಚಾಕು ತೋರಿಸಿ ಬೆದರಿಸಿ ಅತ್ತೆ, ಸೊಸೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ.

ಕೆಲವು ಅಪರಿಚಿತ ವ್ಯಕ್ತಿಗಳು ಅವರು ತಂಗಿದ್ದ ಕಟ್ಟಡಕ್ಕೆ ಬಂದರು. ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಪುಂಡರು ಅತ್ತೆಗೆ ಚಾಕು ತೋರಿಸಿ ಬೆದರಿಸಿದ್ದಾರೆ. ದಾರಿಯಲ್ಲಿದ್ದ ತಂದೆ-ಮಗನನ್ನು ಬೆದರಿಸಿ ಅತ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಅತ್ಯಾಚಾರದ ಬಗ್ಗೆ ಸಂತ್ರಸ್ತರು ಚಿಲಮತ್ತೂರು ಪೊಲೀಸರಿಗೆ ದೂರು ನೀಡಿದ್ದಾರೆ. ಇದರಿಂದಾಗಿ ಈ ಘಟನೆ ಸ್ಥಳೀಯವಾಗಿ ಸಂಚಲನ ಮೂಡಿಸಿದೆ. ಸತ್ಯಸಾಯಿ ಜಿಲ್ಲಾ ಎಸ್ಪಿ ರತ್ನಾ ದೂರು ಸ್ವೀಕರಿಸಿದ ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ಪ್ರತ್ಯೇಕ ತಂಡಗಳನ್ನು ರಚಿಸಿದ್ದಾರೆ.

ಮತ್ತೊಂದೆಡೆ ಸ್ಥಳೀಯ ಶಾಸಕ, ಹಿರಿಯ ನಟ ಬಾಲಕೃಷ್ಣ ಕೂಡ ಎಸ್ಪಿ ಜತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ತಪ್ಪಿತಸ್ಥರನ್ನು ಶೀಘ್ರ ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸೂಚಿಸಿದ್ದಾರೆ. ಸಾಮೂಹಿಕ ಅತ್ಯಾಚಾರ ಘಟನೆಗೆ ಸಚಿವೆ ಸವಿತಾ ಆಕ್ರೋಶ ವ್ಯಕ್ತಪಡಿಸಿದ್ದು, ಘಟನೆಯ ಹಿಂದೆ ಯಾರೇ ಇದ್ದರೂ ನಿರ್ಲಕ್ಷಿಸಬಾರದು. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ. ಹೊಟ್ಟೆಪಾಡಿಗಾಗಿ ಬೇರೆ ರಾಜ್ಯದಿಂದ ಬಂದ ಕುಟುಂಬಕ್ಕೆ ಬೆದರಿಕೆ ಹಾಕಿ ದೌರ್ಜನ್ಯ ಎಸಗಿರುವುದು ಅಪರಾಧ’ ಎಂದು ಸಚಿವೆ ಸವಿತಾ ಹೇಳಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ಸರ್ಕಾರ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.

ಮತ್ತೊಂದೆಡೆ ಆಂಧ್ರ ಗೃಹ ಸಚಿವೆ ವಂಗಲಪುಡಿ ಅನಿತಾ ಕೂಡ ಈ ಘಟನೆಯ ಬಗ್ಗೆ ಪೊಲೀಸರಿಂದ ವಿವರ ಪಡೆದು ಎಸ್ಪಿ ಜತೆ ದೂರವಾಣಿಯಲ್ಲಿ ಮಾತನಾಡಿ, ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net