ನವದೆಹಲಿ: ಹಾಂಗ್ ಕಾಂಗ್ ಕ್ರಿಕೆಟ್ ಸಿಕ್ಸ್(Hong Kong sixes) ಪಂದ್ಯಾವಳಿ ನ.1 ರಿಂದ ನ.3 ರವರೆಗೆ ನಡೆಯಲಿದ್ದು, ಭಾರತ ತಂಡ ಈ ಟೂರ್ನಮೆಂಟ್ನಲ್ಲಿ ಆಡಲು ಭಾರತ ಸಜ್ಜಾಗಿದೆ. ಕನ್ನಡಿಗ ರಾಬಿನ್ ಉತ್ತಪ್ಪ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: Tesla : ಮೈಲಿಗೆ 15ಪೈಸೆ ಖರ್ಚು..ಇದು ಸೈಬರ್‌ಕ್ಯಾಬ್ ವಿಶೇಷತೆ! ಬೆಲೆಯೂ ಅಗ್ಗ!!
ಹಾಂಕಾಂಗ್‌ನ ಟಿನ್ ಕ್ವಾಂಗ್ ರೋಡ್ ಕ್ರಿಕೆಟ್ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ. ಈ ಟೂರ್ನಿಗೆ ಟೀಂ ಇಂಡಿಯಾ ತಂಡವನ್ನು ಶನಿವಾರ ಪ್ರಕಟಿಸಲಾಗಿದೆ. ಭಾರತದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ನಾಯಕರಾಗಿ ಆಯ್ಕೆಯಾಗಿದ್ದು, ಮಾಜಿ ತಾರೆಗಳಾದ ಮನೋಜ್ ತಿವಾರಿ, ಕೇದಾರ್ ಜಾಧವ್ ಮತ್ತು ಸ್ಟುವರ್ಟ್ ಬಿನ್ನಿ ಅವರನ್ನು ಪ್ರತಿನಿಧಿಸಲಿದ್ದಾರೆ. ಆದರೆ, ಕಳೆದ 2017ರಲ್ಲಿ ನಡೆದಿದ್ದ ಈ ಟೂರ್ನಿ ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು. ಈಗ ಈ ವರ್ಷ ಮತ್ತೆ ಶುರುವಾಗಲಿದೆ.
ಹಾಂಗ್ ಕಾಂಗ್ ಸಿಕ್ಸ್ ಗೆ ಭಾರತ ತಂಡ: ರಾಬಿನ್ ಉತ್ತಪ್ಪ (ನಾಯಕ), ಕೇದಾರ್ ಜಾಧವ್, ಸ್ಟುವರ್ಟ್ ಬಿನ್ನಿ, ಮನೋಜ್ ತಿವಾರಿ, ಶಹಬಾಜ್ ನದೀಮ್, ಭರತ್ ಚಿಪ್ಲಿ, ಶ್ರೀವತ್ಸ್ ಗೋಸ್ವಾಮಿ (ವಿಕೆಟ್ ಕೀಪರ್)
ಉತ್ತಪ್ಪ, ಜಾಧವ್, ತಿವಾರಿ, ಬಿನ್ನಿ ಮುಂತಾದ ಸ್ಟಾರ್ ಆಟಗಾರರು ಆಡುತ್ತಿರುವುದರಿಂದ ಈ ಟೂರ್ನಿ ಕುತೂಹಲ ಮೂಡಿಸಿದೆ. ತಂಡ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದೆ.
ಈ ಟೂರ್ನಿಯಲ್ಲಿ 12 ದೇಶಗಳು ಸ್ಪರ್ಧಿಸಲಿವೆ. ಪ್ರತಿ ತಂಡವು ಆರು ಪಂದ್ಯಗಳನ್ನು ಆಡುತ್ತದೆ. ಪ್ರತಿ ಇನ್ನಿಂಗ್ಸ್ 5 ಓವರ್‌ಗಳನ್ನು ಒಳಗೊಂಡಿದೆ. ಆದರೆ, ಟೀಂ ಇಂಡಿಯಾದಲ್ಲಿ ಅನುಭವಿ ಆಟಗಾರರ ದಂಡೇ ಇರುವುದರಿಂದ ಈ ಟೂರ್ನಿಯ ಮೇಲಿನ ನಿರೀಕ್ಷೆ ಹೆಚ್ಚಿದೆ.
ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಹಾಂಗ್ ಕಾಂಗ್, ನೇಪಾಳ, ನ್ಯೂಜಿಲೆಂಡ್, ಓಮನ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ 3-ದಿನದ ಪಂದ್ಯಾವಳಿಯಲ್ಲಿ ಸ್ಪರ್ಧಿಸಲು ಸಿದ್ಧವಾಗಿರುವ ಇತರ ತಂಡಗಳು.ಪಾಕಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಹಾಂಗ್ ಕಾಂಗ್, ನೇಪಾಳ, ನ್ಯೂಜಿಲೆಂಡ್, ಓಮನ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ 3-ದಿನದ ಪಂದ್ಯಾವಳಿಯಲ್ಲಿ ಸ್ಪರ್ಧಿಸಲು ಸಿದ್ಧವಾಗಿರುವ ಇತರ ತಂಡಗಳು.
IPO: ದೇಶದ ಅತಿದೊಡ್ಡ ಹ್ಯುಂಡೈ ಸೇರಿ 3ಐಪಿಒ ಮಾರುಕಟ್ಟೆ ಪ್ರವೇಶಿಸಲು ಸಜ್ಜು! ಹೂಡಿಕೆದಾರರೇ ವಿವರ ಪರಿಶೀಲಿಸಿ..