

ಮುಂಬೈ: ದಸರಾಗೆ ತೆರೆ ಬೀಳುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುವ ಸಾಧ್ಯತೆ ಗೋಚರಿಸುತ್ತಿದೆ. ಸೋಮವಾರದಿಂದ (ಅ.14) ಪ್ರಾರಂಭವಾಗುವ ಹೊಸ ವಾರದಲ್ಲಿ ಐಪಿಒ(IPO) ಮಾರುಕಟ್ಟೆಯಲ್ಲಿ ಮೂರುಐಪಿಒಗಳು ಚಂದಾದಾರಿಕೆಗಾಗಿ ತೆರೆದಿರುತ್ತವೆ. ಆದರೆ, ಇವುಗಳಲ್ಲಿ ಹ್ಯುಂಡೈ ಮೋಟಾರ್ ಇಂಡಿಯಾದ ಐಪಿಒ ಕೂಡ ಇರುತ್ತದೆ. ಇದು ದೇಶದ ಅತಿದೊಡ್ಡ ಐಪಿಒ ಆಗಲಿದೆ. ಉಳಿದ ಎರಡು ಐಪಿಒಗಳು ಎಸ್‌ಎಂಇ ವಿಭಾಗದ್ದಾಗಿವೆ.
ಮುಂದಿನ ಮೇನ್‌ಬೋರ್ಡ್ ಮತ್ತು ಎಸ್ಎಂಐ ಸಾರ್ವಜನಿಕ ಕೊಡುಗೆಯ ಮೂಲಕ 27,995 ಕೋಟಿ ರೂ. ಇರಲಿದ್ದು, ಇದರಲ್ಲಿ ಎಸ್‌ಎಂಇ ವಿಭಾಗದ ಎರಡೂ ಸಂಚಿಕೆಗಳ ಒಟ್ಟು ಗಾತ್ರ 125 ಕೋಟಿ ರೂ. ಇರಲಿದೆ.
ಮೂಲತಃ ದಕ್ಷಿಣ ಕೊರಿಯಾದ ಹುಂಡೈ ಮೋಟಾರ್ ನ ಇಂಡಿಯಾ ಐಪಿಒ ಅ.15 ರಿಂದ ಅ.17 ರವರೆಗೆ ಚಂದಾದಾರಿಕೆಗಾಗಿ ತೆರೆದಿರುತ್ತದೆ. ಈ ಐಪಿಒ ಗಾತ್ರ 27,870.16 ಕೋಟಿ ರೂ.ಗಳಾಗಿದ್ದು, ದೇಶದಲ್ಲೇ ಇದುವರೆಗಿನ ಅತಿ ದೊಡ್ಡ ಐಪಿಒ ಆಗಲಿದೆ. ಇದರ ಬೆಲೆಯನ್ನು ಪ್ರತಿ ಷೇರಿಗೆ 1865 ರೂ. ರಿಂದ 1960ರೂ.ಗೆ ನಿಗದಿಪಡಿಸಲಾಗಿದೆ. ಒಂದು ಲಾಟ್‌ನಲ್ಲಿ 7 ಷೇರುಗಳು ಇರುತ್ತವೆ. ಇದರರ್ಥ ಚಿಲ್ಲರೆ ಹೂಡಿಕೆದಾರರು ಮೇಲಿನ ಬೆಲೆಯ ಬ್ಯಾಂಡ್ ಪ್ರಕಾರ ಕನಿಷ್ಠ 13,720 ರೂ. ಹೂಡಿಕೆ ಮಾಡಬಹುದು.
ಇನ್ನು ಎಸ್‌ಎಂಇ ವಿಭಾಗದಲ್ಲಿ ಲಕ್ಷ್ಯ ಪವರ್‌ಟೆಕ್‌ನ ಐಪಿಒ ಅ.16 ರಿಂದ 18 ರವರೆಗೆ ತೆರೆದಿರುತ್ತದೆ. ಈ ಸಂಚಿಕೆಯ ಗಾತ್ರ 50 ಕೋಟಿ ರೂ. ಹುಂಡೈಗಿಂತ ಭಿನ್ನವಾಗಿ, ಈ ಐಪಿಒದಲ್ಲಿ 49.91 ಕೋಟಿ ಮೌಲ್ಯದ 27.72 ಲಕ್ಷ ಹೊಸ ಷೇರುಗಳನ್ನು ನೀಡಲಾಗುವುದು. ಇದರ ಬೆಲೆ ಬ್ಯಾಂಡ್ ಪ್ರತಿ ಈಕ್ವಿಟಿ ಷೇರಿಗೆ 171 ರೂ.ನಿಂದ ರಿಂದ 180 ರೂ. ಆಗಿದೆ. ಇದು ಅ.21 ರಂದು ಹಂಚಿಕೆ ನಡೆಯಲಿದೆ.
ಫ್ರೆಶರಾ ಆಗ್ರೊದ ಐಪಿಒ ಅ.17 ರಂದು ಪ್ರಾರಂಭವಾಗಲಿದೆ. ಈ ಕಂಪನಿಯು ಐಪಿಒದಲ್ಲಿ 75.39 ಕೋಟಿ ಮೌಲ್ಯದ ತಾಜಾ ಷೇರುಗಳನ್ನು ನೀಡಲಿದೆ. ಪ್ರತಿ ಈಕ್ವಿಟಿ ಷೇರಿನ ಬೆಲೆ 110 ರಿಂದ 116 ರೂ. ಆಗಿದೆ. ಹೂಡಿಕೆದಾರರು 17 ರಿಂದ 21 ಅಕ್ಟೋಬರ್ ವರೆಗೆ ಈ ಐಪಿಒ ಗೆ ಚಂದಾದಾರರಾಗಲು ಸಾಧ್ಯವಾಗುತ್ತದೆ. ಅದರ ಹಂಚಿಕೆಯನ್ನು ಅಕ್ಟೋಬರ್ 22 ರಂದು ಅಂತಿಮಗೊಳಿಸಬಹುದು.