ಮುಂಬೈ: ಷೇರು ಮಾರುಕಟ್ಟೆಯಲ್ಲಿ ಐಪಿಒ(IPO ) ಪ್ರಕ್ರಿಯೆ ಶುರುವಾಗಲಿದ್ದು, ಇನ್ನೆರಡು ತಿಂಗಳಲ್ಲಿ 30 ಕಂಪನಿಗಳ ಐಪಿಒ ಬರಬಹುದು ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
ಇದನ್ನೂ ಓದಿ: Cancer: ಆತ್ಮವಿಶ್ವಾಸದಿಂದ ಸವಾಲುಗಳನ್ನು ಎದುರಿಸಿ: ಕ್ರಿಕೆಟಿಗ ಮೊಹಮ್ಮದ್ ಸಿರಾಜ್
ಬಜಾಜ್ ಹೌಸಿಂಗ್ ಫೈನಾನ್ಸ್‌ನ ಐಪಿಒ ಸೆಪ್ಟೆಂಬರ್ ತಿಂಗಳಿನಲ್ಲಿ ಮುಖ್ಯಾಂಶಗಳನ್ನು ಮಾಡಿದೆ. ಈಗ, ಅಕ್ಟೋಬರ್ ತಿಂಗಳಿನಲ್ಲಿ ಅನೇಕ ದೊಡ್ಡ ಕಂಪನಿಗಳ ಐಪಿಒ ಗಳು ಬರಲಿವೆ. ಇಂತಹ ಪರಿಸ್ಥಿತಿಯಲ್ಲಿ ಐಪಿಒದಲ್ಲಿ ಹೂಡಿಕೆ ಮಾಡುವವರು ಹಣ ಡಲು ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ.
ಹುಂಡೈ ಮೋಟಾರ್ ಇಂಡಿಯಾ, ಸ್ವಿಗ್ಗಿ ಮತ್ತು ಎನ್‌ಟಿಪಿಸಿ ಗ್ರೀನ್ ಎನರ್ಜಿಯಂತಹ ಐಪಿಒಗಳು ಮುಂದಿನ ಎರಡು ತಿಂಗಳಲ್ಲಿ ಹೂಡಿಕೆಗೆ ತೆರೆದುಕೊಳ್ಳಲಿವೆ. ಈ ಐಪಿಒ ಗಳ ಬಿಡುಗಡೆ ದಿನಾಂಕ ಇನ್ನೂ ಬಂದಿಲ್ಲ, ಆದರೆ ಅವುಗಳು ಈಗಾಗಲೇ ಚರ್ಚೆಗೆ ಬಂದಿವೆ. ಈ ಎಲ್ಲ ದೊಡ್ಡ ಕಂಪನಿಗಳು ಒಟ್ಟು 60ಸಾವಿರ ಕೋಟಿ ರೂ.ಗಳ ಐಪಿಒ ನೀಡಲಿವೆ ಎನ್ನಲಾಗುತ್ತಿದೆ.
ಇವಿಷ್ಟೇ ಅಲ್ಲದೆ, ಅಫ್ಕಾನ್ಸ್ ಇನ್ಫ್ರಾಷ್ಟ್ರಕ್ಚರ್, ವಾರಿ ಎನರ್ಜೀಸ್, ನಿವಾಭೂಪ ಹೆಲ್ತ್ ಇನ್ಶ್ಊರನ್ಸ್, ಒನ್ ಮೊಬಿಕ್ವಿಕ್ ಸಿಸ್ಟಮ್ಸ್ ಮತ್ತು ಗರುಡ ಕನ್ಷ್ಟ್ರಕ್ಷನ್ ನ ಐಒಇಒ ಸಹ ಬರಲಿವೆ. ಅಷ್ಟೇ ಅಲ್ಲ, ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ 30 ದೊಡ್ಡ ಐಪಿಒಗಳನ್ನು ನಿರೀಕ್ಷಿಸಲಾಗಿದೆ ಎನ್ನುತ್ತಾರೆ ತಜ್ಞರು.
RBI Monetary Policy : ಪ್ರಮುಖ ಬಡ್ಡಿ ದರ ಯಥಾಸ್ಥಿತಿ – ಪ್ರಸಕ್ತ ಸಾಲಿನಲ್ಲಿ 7.2 ಜಿಡಿಪಿ ಬೆಳವಣಿಗೆ?