ನೀತಾ ಅಂಬಾನಿ 396 ಕೋಟಿ ರೂ. ಮೌಲ್ಯದ ವಿಶ್ವದ ದುಬಾರಿ ಫೋನ್ ಬಳಸ್ತಿದ್ದಾರಾ? ಅಸಲಿ ಸಂಗತಿ ಇಲ್ಲಿದೆ…

Nita Ambani
Published on

ಮುಂಬೈ: ದೇಶದ ನಂ. 1 ಶ್ರೀಮಂತ ಮುಕೇಶ್​ ಅಂಬಾನಿ ಅವರ ಪತ್ನಿ ಹಾಗೂ ರಿಲಯನ್ಸ್ ಫೌಂಡೇಷನ್​ ಅಧ್ಯಕ್ಷೆ ನೀತಾ ಅಂಬಾನಿ ಅವರು ವಿಶ್ವದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರು. ತಮ್ಮ ಐಷಾರಾಮಿ ಜೀವನಶೈಲಿಯಿಂದಲೂ ನೀತಾ ಅಂಬಾನಿ ಖ್ಯಾತಿಯನ್ನು ಪಡೆದಿದ್ದಾರೆ.

ವಿಶ್ವದ ಅತ್ಯಂತ ದುಬಾರಿ ಸೀರೆಯಿಂದ ಹಿಡಿದು 3 ಲಕ್ಷ ರೂ. ಮೌಲ್ಯದ ಟೀ ಕಪ್​ವರೆಗೂ ಅನೇಕ ಐಷಾರಾಮಿ ವಸ್ತುಗಳನ್ನು​ ನೀತಾ ಅಂಬಾನಿ ಹೊಂದಿದ್ದಾರೆ. ಇದೀಗ ಹಳೆಯ ಸುದ್ದಿಯೊಂದು ಮತ್ತೆ ವೈರಲ್​ ಆಗಿದೆ. ಅದೇನೆಂದರೆ, ನೀತಾ ಅಂಬಾನಿ ಅವರು ವಿಶ್ವದ ದುಬಾರಿ ಫೋನ್,​ ಫಾಲ್ಕನ್​ ಸೂಪರ್​ನೋವಾ ಐಫೋನ್​ 6 ಪಿಂಕ್​ ಡೈಮಂಡ್ ಒಡತಿಯಾಗಿದ್ದಾರೆ​ ಎಂದು ಹೇಳಲಾಗುತ್ತಿದೆ.

ಹಲವಾರು ದಿವಸಗಳಿಂದ ಅನೇಕ ಮಾಧ್ಯಮಗಳಲ್ಲಿ ಈ ವಿಚಾರ ಬಹಳ ಸುದ್ದಿಯಾಗುತ್ತಲೇ ಇದೆ. ಅಂದರೆ, ಈ ಫಾಲ್ಕನ್​ ಸೂಪರ್​ನೋವಾ ಐಫೋನ್​ 6 ಪಿಂಕ್​ ಡೈಮಂಡ್ ಫೋನ್​ ವಿಶ್ವದ ಅತಿ ದುಬಾರಿ ಫೋನ್​ ಎಂದೇ ಹೇಳಲಾಗಿದೆ. ಇದರ ಬೆಲೆ 48.5 ಮಿಲಿಯನ್​ ಡಾಲರ್ಸ್​. ಭಾರತೀಯ ಕರೆನ್ಸಿ ಪ್ರಕಾರ 396 ಕೋಟಿ ರೂಪಾಯಿ.

ಆದರೆ, ಆಗಾಗ ವೈರಲ್​ ಆಗುತ್ತಿರುವ ಈ ಸ್ಟೋರಿ ಸಂಪೂರ್ಣ ಸುಳ್ಳು ಸುದ್ದಿಯಾಗಿದೆ. ಡೈಮಂಡ್​ ಇರುವ ಯಾವುದೇ ದುಬಾರಿ ಫೋನ್​ ಮತ್ತು ನೂರಾರು ಕೋಟಿ ರೂ. ಮೌಲ್ಯದ ಮೊಬೈಲ್​ ಫೋನ್ ಅನ್ನು ನೀತಾ ಅಂಬಾನಿ ಅವರು ಬಳಸುತ್ತಿಲ್ಲ. ನೀತಾ ಅವರ ಫೋನ್​ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂಬುದು ಫ್ಯಾಕ್ಟ್​ಚೆಕ್​ನಿಂದ ತಿಳಿದುಬಂದಿದೆ.

ನೀತಾ ಅಂಬಾನಿ ಅವರು ಯಾವ ಫೋನ್ ಬಳಸುತ್ತಾರೆ ಎಂಬುದು ದೃಢಪಟ್ಟಿಲ್ಲವಾದರೂ, ಅದು ವಜ್ರದಿಂದ ಕೂಡಿದ ಐಫೋನ್ ಅಂತೂ ಅಲ್ಲ ಎಂದು ಪರಿಶೀಲಿಸಲಾಗಿದೆ. ರಿಲಯನ್ಸ್‌ನ ಮೂಲಗಳು ಇಂಡಿಯಾ ಟುಡೆ ಟೆಕ್ ತಂಡಕ್ಕೆ ಮಾಹಿತಿ ನೀಡಿದ್ದು, ನೀತಾ ಅಂಬಾನಿ ಫಾಲ್ಕನ್ ಸೂಪರ್‌ನೋವಾ ಐಫೋನ್ 6 ಪಿಂಕ್ ಡೈಮಂಡ್ ಅನ್ನು ಹೊಂದಿಲ್ಲ ಎಂದು ದೃಢಪಡಿಸಿದೆ.

ದುಬಾರಿ ಐಫೋನ್​ ಕುರಿತು

ಫಾಲ್ಕನ್ ಸೂಪರ್ನೋವಾ ಕಂಪನಿ ವಿಶ್ವದ ಅತ್ಯಂತ ದುಬಾರಿ ಫೋನ್ ರಚಿಸಲು ಐಫೋನ್ 6 ಅನ್ನು ಕಸ್ಟಮೈಸ್ ಮಾಡಿದೆ. ಫಾಲ್ಕನ್ ಸೂಪರ್ನೋವಾ ಐಫೋನ್ 6 ಪಿಂಕ್ ಡೈಮಂಡ್ 24-ಕ್ಯಾರೆಟ್ ಚಿನ್ನದ ಲೇಪಿತ ಐಫೋನ್ 6 ಆಗಿದ್ದು, ಹಿಂಭಾಗದಲ್ಲಿ ಬೃಹತ್ ಗುಲಾಬಿ ವಜ್ರವನ್ನು ಅಳವಡಿಸಲಾಗಿದೆ. ಇದು ಮಾತ್ರವಲ್ಲದೆ ಫೋನ್ ಪ್ಲಾಟಿನಮ್​ನಿಂದ ಲೇಪಿತವಾಗಿದೆ. ಇದರ ಬೆಲೆ 48.5 ಮಿಲಿಯನ್‌ ಡಾಲರ್​ ತೆಗೆದುಕೊಳ್ಳುತ್ತದೆ.

ದುಬಾರಿ ಸೀರೆ ಬೆಲೆ ಎಷ್ಟು?

ನೀತಾ ಅಂಬಾನಿ ಅವರು ವಿಶ್ವದ ಅತ್ಯಂತ ದುಬಾರಿ ಫೋನ್ ಅನ್ನು ಹೊಂದಿಲ್ಲವಾದರೂ, ಅವರು ವಿಶ್ವದ ಅತ್ಯಂತ ದುಬಾರಿ ಸೀರೆ (ರೂ. 40 ಲಕ್ಷ) ಹೊಂದಿದ್ದಾರೆ ಮತ್ತು ವಿಶ್ವದ ಅತ್ಯಂತ ದುಬಾರಿ ನೆಕ್ಲೇಸ್ ಅನ್ನು (ರೂ. 450 ಕೋಟಿ) ಖರೀದಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net