ಕೆನೆಭರಿತ ಹಾಲು ಸೇವನೆ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತಾ? ತಜ್ಞರು ಹೇಳೋದೇನು.? Health tips

milk
Published on

Health tips : ಕೊಲೆಸ್ಟ್ರಾಲ್ ತುಂಬಾ ಹೆಚ್ಚಾದರೆ ದೇಹದಲ್ಲಿ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ, ಹೃದಯಾಘಾತ, ಪಾರ್ಶ್ವವಾಯು, ಟೈಪ್ 2 ಮಧುಮೇಹ ಮತ್ತು ಇತರ ಕಾಯಿಲೆಗಳ ಅಪಾಯವು ಹೆಚ್ಚಾಗುತ್ತದೆ. ಮತ್ತೊಂದೆಡೆ ಹಾಲಿನ ಕೆನೆ ತಿನ್ನುವುದರಿಂದ ಕೊಲೆಸ್ಟ್ರಾಲ್​ ಹೆಚ್ಚಾಗಬಹುದು ಎಂದು ಅನೇಕರು ಅಂದುಕೊಳ್ಳುತ್ತಾರೆ. ಹಾಗಿದ್ರೆ ಹಾಲಿಕ ಕೆನೆ ತಿಂದರೆ ಏನಾಗುತ್ತದೆ ಎಂಬುದನ್ನು ತಿಳಿಯೋಣ.

ಹಾಲಿನ ಕೆನೆ ಆರೋಗ್ಯಕರ ಆಹಾರವಾಗಿದೆ. ಇದು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಚರ್ಮಕ್ಕೆ ತುಂಬಾ ಒಳ್ಳೆಯದು. ಹಾಲಿನ ಕೆನೆಯಲ್ಲಿ ಕೊಬ್ಬು, ಪ್ರೋಟೀನ್, ವಿಟಮಿನ್​ಗಳು ಮತ್ತು ಖನಿಜಾಂಶಗಳು ಇರುತ್ತವೆ. ಹಾಲಿನ ಕೆನೆಯು ಚರ್ಮವನ್ನು ತೇವಗೊಳಿಸುತ್ತದೆ ಮತ್ತು ಮೃದುಗೊಳಿಸುತ್ತದೆ. ನೀವು ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು.

ಹಾಲಿನ ಕೆನೆ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತಾ.?

ಅಧಿಕೃತ ಆಹಾರ ಮಾರ್ಗಸೂಚಿಗಳ ಪ್ರಕಾರ, ಒಬ್ಬ ವ್ಯಕ್ತಿಯು ದಿನಕ್ಕೆ ಗರಿಷ್ಠ 300 ಮಿಲಿಗ್ರಾಂ ಕೊಲೆಸ್ಟ್ರಾಲ್ ಸೇವಿಸಬೇಕು. 100 ಗ್ರಾಂ ಹಾಲಿನ ಕೆನೆಯಲ್ಲಿ 68 ಮಿಲಿಗ್ರಾಂ ಕೊಲೆಸ್ಟ್ರಾಲ್ ಇರುತ್ತದೆ. ನೀವು ದಿನಕ್ಕೆ 100 ಗ್ರಾಂ ಗಿಂತ ಹೆಚ್ಚು ಕೆನೆ ಸೇವಿಸಿದರೂ ಸಹ, ಕೊಲೆಸ್ಟ್ರಾಲ್ ಸೀಮಿತವಾಗಿರುತ್ತದೆ. ಕೆನೆಯಲ್ಲಿ ಕೊಬ್ಬಿನ ಅಂಶ ಅಧಿಕವಾಗಿದ್ದು, ಇದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ ಮತ್ತು ಹಸಿವನ್ನು ಸಹ ನಿಯಂತ್ರಿಸುತ್ತದೆ. ತೂಕ ನಷ್ಟಕ್ಕೆ ಕೆನೆ ಸೇವನೆಯು ಪರಿಣಾಮಕಾರಿ ಎಂದು ಸಾಬೀತಾಗಿದೆ, ಆದರೆ ಸೀಮಿತ ಪ್ರಮಾಣದಲ್ಲಿ ಸೇವಿಸಬೇಕಾಗಿರುತ್ತದೆ. ಕೊಲೆಸ್ಟ್ರಾಲ್ ಮತ್ತು ಹೃದಯ ಕಾಯಿಲೆಯ ನಡುವೆ ನೇರ ಸಂಬಂಧವಿದೆ. ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿರುವ ಜನರು ಹೃದಯ ಕಾಯಿಲೆಯ ಅಪಾಯವನ್ನು ಹೊಂದಿರುತ್ತಾರೆ. ಹಾಗಾಗಿ ನಿತ್ಯ ಸೇವಿಸುವ ಕೆನೆಭರಿತ ಹಾಲಿನಿಂದ ಯಾವುದೇ ಸಮಸ್ಯೆಯಿಲ್ಲ ಎನ್ನುತ್ತಾರೆ ತಜ್ಞರು.

ಹಾಲಿನ ಕೆನೆ ಕೊಲೆಸ್ಟ್ರಾಲ್ ಹೊಂದಿರುವ ಪ್ರಾಣಿ ಮೂಲದ ಉತ್ಪನ್ನವಾಗಿದೆ. ಆಯುರ್ವೇದ ಮಾರ್ಗದರ್ಶಿ ಡಾ. ಸೀಮಾ ಗುಪ್ತಾ ಅವರು ಹಾಲಿನ ಕೆನೆ ಕೊಲೆಸ್ಟ್ರಾಲ್ ಹೊಂದಿರುವ ಪ್ರಾಣಿ ಮೂಲದ ಆಹಾರವಾಗಿದೆ, ಆದರೆ ಅದನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಮತ್ತು ಹೃದಯ ಕಾಯಿಲೆಗಳು ಉಂಟಾಗುತ್ತವೆ ಎಂದು ಹೇಳಲು ಬರುವುದಿಲ್ಲ ಎನ್ನುತ್ತಾರೆ.

ಹಾಲಿನ ಕೆನೆಯ ಆರೋಗ್ಯ ಪ್ರಯೋಜನಗಳು:

(ಏಜೆನ್ಸೀಸ್)

ಹಾಲಿನ ಕೆನೆ ಅತಿಯಾಗಿ ತಿನ್ನುವುದು ತೂಕ ಹೆಚ್ಚಾಗಲು ಕಾರಣವಾಗಬಹುದು. ಹಾಲಿನ ಕೆನೆ ಅಲರ್ಜಿಯನ್ನು ಹೊಂದಿರುವ ಜನರು ಇದನ್ನು ಬಳಸುವುದನ್ನು ತಪ್ಪಿಸಬೇಕು.

ಹಾಲಿನ ಕೆನೆಯು ಮೂಳೆಗಳನ್ನು ಬಲಪಡಿಸುವ ವಿಟಮಿನ್ ಎ, ವಿಟಮಿನ್ ಡಿ ಮತ್ತು ವಿಟಮಿನ್ ಇ ಹೊಂದಿರುವ ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದೆ. ಕೆನೆ ಸೇವಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹವನ್ನು ಆರೋಗ್ಯವಾಗಿಡುತ್ತದೆ. ಮೆದುಳು ಸರಿಯಾಗಿ ಕಾರ್ಯನಿರ್ವಹಿಸಲು ಆರೋಗ್ಯಕರ ಕೊಬ್ಬುಗಳು ಬೇಕಾಗುತ್ತವೆ. ಹಾಲಿನ ಕೆನೆ ಚರ್ಮದ ಬಣ್ಣವನ್ನು ಸುಧಾರಿಸಲು ಮತ್ತು ಕಾಂತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಹಾಲಿನ ಕೆನೆಯನ್ನು ನಿಮ್ಮ ಕಾಫಿ, ಚಹಾ ಅಥವಾ ಸಿಹಿತಿಂಡಿಗಳಲ್ಲಿ ಸೇರಿಸಿ ತಿನ್ನಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net