ಮುಂಬೈ: ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್ ಹಾಗೂ ವಾಚ್ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಿಷ್ಟೇ ಅಲ್ಲದೆ, ಆಗಿನ ಕಾಲದ ನಟ-ನಟಿಯರು ಈಗ ಹೇಗಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲವೂ ಜಾಸ್ತಿ ಇರುತ್ತದೆ.
ಕೆಲ ನಟ-ನಟಿಯರು ಒಂದು ಕಾಲದಲ್ಲಿ ಬಹಳ ಸದ್ದು ಮಾಡಿ ಇದ್ದಕ್ಕಿದ್ದಂತೆ ಸಿನಿಮಾ ಕ್ಷೇತ್ರದಿಂದ ಕಣ್ಮರೆಯಾಗಿಬಿಡುತ್ತಾರೆ. ಆದರೂ ಅವರ ನಟನೆಯ ಸಿನಿಮಾಗಳು ಮತ್ತು ಹಾಡುಗಳು ಸದಾ ಸಿನಿರಸಿಕರನ್ನು ರಂಜಿಸುತ್ತಲೇ ಇರುತ್ತದೆ. ಇಂತಹ ಸಿನಿಮಾಗಳಲ್ಲಿ ಲಂಕೇಶ್ ಪತ್ರಿಕೆ ಕೂಡ ಒಂದು. ನಟ ದರ್ಶನ್ ಅಭಿನಯದ ಈ ಸಿನಿಮಾವನ್ನು ಇಂದ್ರಜಿತ್ ಲಂಕೇಶ್ ನಿರ್ದೇಶಿಸಿದರು.
ಈ ಸಿನಿಮಾದ “ಎಂದೋ ಕಂಡ ಕನಸು ಅದು ನಿನ್ನ ಮನಸ್ಸು” ಹಾಡು ಇಂದಿಗೂ ಸಂಗೀತ ಪ್ರಿಯರ ಫೇವರಿಟ್ ಆಗಿದೆ. ಈ ಚಿತ್ರದಲ್ಲಿ ದರ್ಶನ್ಗೆ ಜೋಡಿಯಾಗಿದ್ದ ನಟಿ ವಸುಂಧರಾ ದಾಸ್ ಕನ್ನಡದಲ್ಲಿ ನಟಿಸಿದ್ದು ಇದೊಂದೆ ಸಿನಿಮಾ. ಆದರೆ, ಈ ಒಂದೇ ಒಂದು ಹಾಡಿನಿಂದ ಎಂದೆಂದಿಗೂ ಕನ್ನಡಿಗರಲ್ಲಿ ನೆನಪಾಗಿರುತ್ತಾರೆ.
ಕನ್ನಡದಲ್ಲಿ ಒಂದೇ ಸಿನಿಮಾದಲ್ಲಿ ನಟಿಸಿರುವ ವಸುಂಧರಾ ದಾಸ್ ತಮಿಳಿನಲ್ಲಿ ಎರಡು ಹಾಗೂ ಮಲಾಯಳಂನಲ್ಲಿ ಒಂದು ಮತ್ತು ಹಿಂದಿಯಲ್ಲಿ 7 ಸಿನಿಮಾಗಳಲ್ಲಿ ನಟಿಸಿದ್ದಾರೆ. ವಸುಂಧರಾ ಅವರು ಕೇವಲ ನಟಿ ಮಾತ್ರವಲ್ಲ, ಗಾಯಕಿಯೂ ಹೌದು. ಮೂಲತಃ ಕರ್ನಾಟಕದವರು. ಬೆಂಗಳೂರಿನಲ್ಲಿ ಜನಿಸಿದರು. 2012ರಲ್ಲಿ ತಮ್ಮ ದೀರ್ಘಕಾಲದ ಸ್ನೇಹಿತ, ಡ್ರಮ್ಮರ್ ಮತ್ತು ತಾಳವಾದ್ಯ ವಾದಕ ರಾಬರ್ಟೊ ನರೈನ್ ಅವರನ್ನು ವಿವಾಹವಾದರು.
2007ರ ನಂತರ ಯಾವುದೇ ಭಾಷೆಯಲ್ಲಿ ನಟಿಸದೆ ಚಿತ್ರರಂಗದಿಂದ ಕಣ್ಮರೆಯಾಗಿದ್ದ ವಸುಂಧರಾ ಅವರ ಇತ್ತೀಚಿನ ಫ್ಯಾಮಿಲಿ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫೋಟೋದಲ್ಲಿ ವಸುಂಧರಾ ಅವರು ಗುರುತಿಸಲಾಗದಷ್ಟು ದಪ್ಪವಾಗಿ ಕಾಣುತ್ತಾರೆ. ಅವರ ಪತಿ ಮತ್ತು ಮಗನೊಂದಿಗೆ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗುತ್ತಿದ್ದು, ಇವರೇನಾ ಲಂಕೇಶ್ ಪತ್ರಿಕೆ ಹೀರೋಯಿನ್ ಎಂದು ಕನ್ನಡಿಗರು ಹುಬ್ಬೇರಿಸಿದ್ದಾರೆ. (ಏಜೆನ್ಸೀಸ್)
ರೂಬಿ ಪ್ಲೇ ಬಟನ್ ಪಡೆದ ಕೇರಳದ ಫಸ್ಟ್ ಯೂಟ್ಯೂಬ್ ಚಾನೆಲ್! ಇವರ 1 ವಿಡಿಯೋ ಆದಾಯ ಹುಬ್ಬೇರಿಸುತ್ತೆ
ಮಾಜಿ ಪತಿ ನಾಗಚೈತನ್ಯ ಜತೆ ಶೋಭಿತಾ ನಿಶ್ಚಿತಾರ್ಥ: ಕೊನೆಗೂ ಮೌನ ಮುರಿದ ಸಮಂತಾ!