ಮಾಜಿ ಪತಿ ನಾಗಚೈತನ್ಯ ಜತೆ ಶೋಭಿತಾ ನಿಶ್ಚಿತಾರ್ಥ: ಕೊನೆಗೂ ಮೌನ ಮುರಿದ ಸಮಂತಾ!

Samantha

ಹೈದರಾಬಾದ್​: ನಟ ನಾಗಚೈತನ್ಯ ಹಾಗೂ ನಟಿ ಶೋಭಿತಾ ಧೂಳಿಪಾಲ ನಿಶ್ಚಿತಾರ್ಥ ಮಾಡಿಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಶೀಘ್ರದಲ್ಲೇ ಈ ತಾರಾ ಜೋಡಿ ಹಸೆಮಣೆ ಸಹ ಏರಲಿದೆ. ನಾಗಚೈತನ್ಯ-ಶೋಭಿತಾ ಪ್ರೀತಿ ಮಾಡುತ್ತಿದ್ದಾರೆ ಎಂದು ಸುದ್ದಿ ಈ ಹಿಂದೆ ಹಲವು ಬಾರಿ ಹರಿದಾಡುತ್ತಿತ್ತು. ಅಲ್ಲದೆ, ಇಬ್ಬರೂ ಜೊತೆಯಾಗಿ ಹಲವು ಬಾರಿ ವಿದೇಶ ಪ್ರವಾಸ ಕೂಡ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆದರೆ ಚೈತನ್ಯ ಆಗಲಿ ಶೋಭಿತಾ ಆಗಲಿ ತಮ್ಮ ಪ್ರೀತಿಯ ಬಗ್ಗೆ ಒಮ್ಮೆಯೂ ಬಾಯ್ಬಿಟ್ಟಿರಲಿಲ್ಲ. ಆದರೆ, ಆಗಸ್ಟ್​ 8ರಂದು ಈ ಪ್ರೇಮ ಪಕ್ಷಿಗಳು ನಿಶ್ಚಿತಾರ್ಥ ಮಾಡಿಕೊಂಡು ಪ್ರೇಮ ವದಂತಿಗಳಿಗೆ ಅಧಿಕೃತ ಮುದ್ರೆಯನ್ನು ಒತ್ತಿದ್ದಾರೆ.

ನಾಗಚೈತನ್ಯ ಮತ್ತು ಶೋಭಿತಾ ನಿಶ್ಚಿತಾರ್ಥ ಸುದ್ದಿ ಹೊರಬೀಳುತ್ತಿದ್ದಂತೆ ಮತ್ತೊಂದು ಹೆಸರು ಹೆಚ್ಚು ಚಾಲ್ತಿಯಲ್ಲಿದೆ. ಅವರು ಬೇರೆ ಯಾರೂ ಅಲ್ಲ, ನಟಿ ಸಮಂತಾ. ಏಕೆಂದರೆ, ಸಮಂತಾ ಈ ಹಿಂದೆ ನಾಗಚೈತನ್ಯ ಮಡದಿಯಾಗಿದ್ದರು. ಇಬ್ಬರು ಪರಸ್ಪರ ಪ್ರೀತಿಸಿ, 2017 ರಲ್ಲಿ ಮದುವೆಯಾಗಿದ್ದರು. ಆದರೆ, ಇಬ್ಬರಲ್ಲಿನ ಭಿನ್ನಾಭಿಪ್ರಾಯಗಳ ಕಾರಣದಿಂದ 2021ರಲ್ಲಿ ಬೇರ್ಪಟ್ಟರು. ಇಬ್ಬರ ಡಿವೋರ್ಸ್​ ಕೂಡ ಭಾರಿ ಸುದ್ದಿಯಾಗಿತ್ತು. ಡಿವೋರ್ಸ್​ ಆದ ಕೆಲವೇ ವರ್ಷಗಳಲ್ಲಿ ನಾಗಚೈತನ್ಯ ಮತ್ತೊಂದು ಮದುವೆಗೆ ತಯಾರಿ ಮಾಡಿಕೊಂಡಿದ್ದು, ಈ ಬಗ್ಗೆ ಸಮಂತಾ ಏನು ಹೇಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಹೀಗಾಗಿ ಸಮಂತಾ ಪ್ರತಿಕ್ರಿಯೆ ಬಗ್ಗೆ ನೆಟ್ಟಿಗರ ಹುಡುಕಾಟ ನಡೆದಿತ್ತು. ಇದೀಗ ಸಮಂತಾ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ. ಮೌಖಿಕವಾಗಿ ಪ್ರತಿಕ್ರಿಯೆ ನೀಡದಿದ್ದರೂ ಇನ್​ಸ್ಟಾಗ್ರಾನಲ್ಲಿ ಪೋಸ್ಟ್​ ಮಾಡಿರುವ ಫೋಟೋದಲ್ಲಿನ ಬರಹ ನಾಗಚೈತನ್ಯಗೆ ಪರೋಕ್ಷವಾಗಿ ಟಾಂಗ್​ ನೀಡಿದಂತಿದೆ. ಹೀಗಂತ ಅಭಿಮಾನಿಗಳು ಕಾಮೆಂಟ್​ ಮಾಡುತ್ತಿದ್ದಾರೆ.

ಸಮಂತಾ ಪೋಸ್ಟ್​ನಲ್ಲಿ ಏನಿದೆ?
ಅಷ್ಟಕ್ಕೂ ಸಮಂತಾ ಪೋಸ್ಟ್​ನಲ್ಲಿ ಏನಿದೆ ಎಂದು ನೋಡುವುದಾದರೆ, ಕಾರಿನ ಒಳಗೆ ಕುಳಿತು, ಬಲಗೈಯನ್ನು ತಮ್ಮ ಹಣೆಯ ಮೇಲಿಟ್ಟು ಕ್ಯಾಮೆರಾಗೆ ಪೋಸ್​ ನೀಡಿರುವ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. ಫೋಟೋದಲ್ಲಿ ಸಮಂತಾ ಸ್ಟೈಲಿಶ್​ ಕನ್ನಡಕ ಜತೆಗೆ ಫುಲ್​ ಆರ್ಮ್​ ಟೀ ಶರ್ಟ್​ ಧರಿಸಿದ್ದು, ಅದರ ಮೇಲೆ ಬಿಳಿ ಬಣ್ಣದಲ್ಲಿ The museum of peace and quiet (ಶಾಂತಿ ಮತ್ತು ನೆಮ್ಮದಿಯ ಸಂಗ್ರಹಾಲಯ) ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಫೋಟೋದಲ್ಲಿ ಮಧ್ಯದ ಬೆರಳು ತೋರಿಸಿರುವುದನ್ನು ಅಭಿಮಾನಿಗಳು ಗಮನಿಸಿದ್ದಾರೆ. ಪೋಸ್ಟ್ ಜೊತೆಯಲ್ಲಿ ಲೆಬ್ಲಾಂಕ್ ಅವರ ನೌ ವಿ ಆರ್ ಫ್ರೀ ಹಾಡನ್ನು ಬಳಸಿದ್ದಾರೆ.

ಸಮಂತಾ ಅವರ ಈ ಪೋಸ್ಟ್​ಗೆ ಕಾಮೆಂಟ್​ಗಳ ಸುರಿಮಳೆ ಹರಿದುಬರುತ್ತಿವೆ. ಪರೋಕ್ಷವಾಗಿ ನಾಗಚೈತನ್ಯ-ಶೋಭಿತಾ ನಿಶ್ಚಿತಾರ್ಥಕ್ಕೆ ಟಾಂಗ್​ ಕೊಟ್ಟಂತಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇದು ರಾಣಿಯ ನಡೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ. ಇದು ಯಾರಿಗಾಗಿ ಉದ್ದೇಶಿಸಲ್ಪಟ್ಟಿದೆಯೋ ಅವರಿಗೆ ಕ್ಲಾಸಿಕ್ ಪ್ರತ್ಯುತ್ತರವಾಗಿದೆ ಎಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್​ ಮಾಡಿದ್ದಾರೆ. ಆ ಮಧ್ಯದ ಬೆರಳು ವೈಯಕ್ತಿಕವಾಗಿದೆ, ಆಟಿಟ್ಯೂಡ್ ಓವರ್‌ಲೋಡ್ ಆಗಿದೆ, ರಾಣಿ ಪ್ರತಿಕ್ರಿಯಿಸುವ ರೀತಿ ಇದು ಹಾಗೂ ಈ ಫೋಟೋಗೆ ಶೀರ್ಷಿಕೆಯ ಅಗತ್ಯವೇ ಇಲ್ಲ ಎಲ್ಲವನ್ನೂ ಹೇಳುತ್ತದೆ ಎಂದೆಲ್ಲ ಕಾಮೆಂಟ್​ ಮಾಡುತ್ತಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ, ಸದ್ಯ ಸಮಂತಾ ಅವರ ನಿರೀಕ್ಷಿತ ಸ್ಪೈ ಥ್ರಿಲ್ಲರ್ ಸರಣಿ “ಸಿಟಾಡೆಲ್ ಹನಿ ಬನ್ನಿ” ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗುತ್ತಿದೆ. ಬಾಲಿವುಡ್ ನಟ ವರುಣ್ ಧವನ್ ಜತೆ ನಟಿಸಿದ್ದಾರೆ. ಈ ಸರಣಿಯು ಹಾಲಿವುಡ್ ವೆಬ್ ಸರಣಿ ಸಿಟಾಡೆಲ್‌ನ ರೀಮೇಕ್ ಆಗಿದೆ. ಇದರ ಹೊರತಾಗಿ ಮತ್ತೊಂದೆಡೆ ಅಗ್ರ ಒಟಿಟಿ ಕಂಪನಿ ನೆಟ್‌ಫ್ಲಿಕ್ಸ್‌ನೊಂದಿಗೆ “ರಕ್ತ ಬ್ರಹ್ಮಾಂಡ” ಎಂಬ ಸರಣಿಯಲ್ಲಿ ಸಮಂತಾ ನಟಿಸಲಿದ್ದಾರೆ. ಈ ಸರಣಿಯನ್ನು “ತುಂಬದ್” ಖ್ಯಾತಿಯ ನಿರ್ದೇಶಕ ಅನಿಲ್ ರಾಹಿ ಬರ್ವೆ ನಿರ್ದೇಶಿಸಿದ್ದಾರೆ. ಇದರಲ್ಲೂ ಸಮಂತಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. (ಏಜೆನ್ಸೀಸ್​)

ಶೋಭಿತಾ ಜತೆ ಮಾಜಿ ಪತಿ ನಾಗಚೈತನ್ಯ ನಿಶ್ಚಿತಾರ್ಥದ ಬೆನ್ನಲ್ಲೇ ಶಾಕಿಂಗ್​ ನಿರ್ಧಾರ ತೆಗೆದುಕೊಂಡ ಸಮಂತಾ!?

ಐಸಿಸಿ ಆಫರ್​ ತಿರಸ್ಕರಿಸಿದ ಭಾರತ! ಮಹಿಳಾ ಟಿ20 ವಿಶ್ವಕಪ್​ ಆಯೋಜನೆ ಮಾಡಲ್ಲ ಎಂದಿದ್ದೇಕೆ ಬಿಸಿಸಿಐ?

Share This Article

Skin Care | ಚಳಿಗಾಲದಲ್ಲಿ ನಿಮ್ಮ ತ್ವಚೆಯು ಹಾಳಾಗದಂತೆ ಎಚ್ಚರವಹಿಸಿ; ಈ ಫೇಸ್​ಪ್ಯಾಕ್ ಟ್ರೈ ಮಾಡಿ ಫಲಿತಾಂಶ ನೀವೇ ನೋಡಿ..

ಚಳಿಗಾಲ ಆರಂಭವಾಯಿತು ಎಂದರೆ ಸಾಕು ತ್ವಚೆಯಲ್ಲಿ ಸಣ್ಣದಾಗಿ ಬಿರುಕು ಕಾಣಿಸಿಕೊಳ್ಳುವುದನ್ನು ನಾವು ನೊಡಬಹುದು. ಇನ್ನು ಮುಖದ…

ಈ ಆಹಾರ ಪದಾರ್ಥದಲ್ಲಿದೆ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ; Health Tips ನಿಮಗಾಗಿ

ಕ್ಯಾನ್ಸರ್​​ನಂತಹ ಗಂಭೀರ ಕಾಯಿಲೆಯನ್ನು ತಡೆಗಟ್ಟಲು ಆರೋಗ್ಯಕರ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ.…

ಚಳಿಗಾಲದಲ್ಲಿ ಕೈ&ಕಾಲ್ಬೆರಳುಗಳ ಊತಕ್ಕೆ ಕಾರಣ ಈ ಕಾಯಿಲೆ; ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ… | Health Tips

ಚಳಿಗಾಲದಲ್ಲಿ ನೆಗಡಿ ಮಾತ್ರವಲ್ಲದೆ ಹಲವಾರು ಕಾಯಿಲೆಗಳು ಸಮಸ್ಯೆಯನ್ನು ಹೆಚ್ಚಿಸುತ್ತವೆ. ಅದರಲ್ಲಿ ಚಿಲ್ಬ್ಲೈನ್ಸ್ ರೋಗವು ಒಂದಾಗಿದೆ. ಬಹುಶಃ…