

Laptop : ಇಂದಿನ ದಿನಗಳಲ್ಲಿ ಬೆಳೆಯುತ್ತಿರುವಂತಹ ಕಾಲದಲ್ಲಿ ಮಕ್ಕಳ ಆನ್ಲೈನ್ ತರಗತಿಗಳು ಮತತ್ಉ ಟ್ಯೂಷನ್ನಿಂದ ಪ್ರಾರಂಭವಾಗಿ ವಯಸ್ಕರ ಕಚೇರಿ ಕೆಲಸದವರೆಗೂ ಎಲ್ಲಾ ಉದ್ದೇಶಗಳಿಗೆ ಲ್ಯಾಪ್ಟಾಪ್ಗಳ ಅಗತ್ಯ ಅನಿವಾರ್ಯವಾಗಿದೆ. ಇನ್ನು ಅನೇಕರು ವೈಯಕ್ತಿಕ ಉದ್ದೇಶಗಳಿಗಾಗಿ ಬಳಸುತ್ತಾರೆ. ಹೆಚ್ಚಿನ ಜನರು ಮಾಡುವ ದೊಡ್ಡ ತಪ್ಪು ಎಂದರೆ, ಲ್ಯಾಪ್ಟಾಪ್ಗಳನ್ನು ಅವರ ತೊಡೆಯ ಮೇಲೆ ಇಟ್ಟುಕೊಂಡು ಕೆಲಸ ಮಾಡುವುದು. ಇದು ಅತ್ಯಂತ ಅಪಾಯಕಾರಿ ಎಂದು ಕೆಲವು ಸಂಶೋಧನೆಗಳ ಪ್ರಕಾರ ತಿಳಿದುಬಂದಿದೆ. ಇದು ಕೆಳಗೆ ತೋರಿಸಲಾಗಿರುವ ಈ ರೀತಿಯ ಗಂಭೀರ ಕಾಯಿಲೆಗಳನ್ನು ಸೃಷ್ಟಿಸಬಹುದು.
ಲ್ಯಾಪ್ಟಾಪ್ಗಳನ್ನು ತೊಡೆಯ ಮೇಲೆ ಇಟ್ಟುಕೊಂಡು ಕೆಲಸ ಮಾಡುವಾಗ ಅದರಿಂದ ಹೊರಸೂಸುವ ಶಾಖ ಮತ್ತು ವಿದ್ಯುತ್ಕಾಂತೀಯ ಆವರ್ತನ ವಿಕಿರಣಗಳು ಆರೋಗ್ಯದ ಮೇಲೆ ಪರಿಣಾಮ ಬೀಳಲಾರಂಭಿಸುತ್ತವೆ. ಇವು ಪುರುಷರ ದೇಹದಲ್ಲಿ ವೀರ್ಯಾಣು ಸಂಖ್ಯೆಗಳನ್ನು ಕಡಿಮೆ ಮಾಡುತ್ತವೆ. ಹಾಗೇ ಮಹಿಳೆಯರಲ್ಲಿ ಹಾರ್ಮೋನುಗಳ ನಿಯಂತ್ರಣ ಮತ್ತು ಅಂಡಾಶಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಗರ್ಭದಾರಣೆ ಸಮಯದಲ್ಲಿ ತೊಂದರೆ ಉಂಟಾಗುತ್ತದೆ.
ಲ್ಯಾಪ್ಟಾಪ್ಗಳನ್ನು ತೊಡೆಯ ಮೇಲೆ ಇಟ್ಟುಕೊಂಡು ಕೆಲಸ ನಿರ್ವಹಿಸುತ್ತಿರುವುದರಿಂದ ಅದರಿಂದ ಬರುವ ಶಾಖ ಮತ್ತು ವಿಕಿರಣವು ಚರ್ಮದ ಕೋಶಗಳನ್ನು ಹಾನಿ ಮಾಡಿ, ಚರ್ಮದ ಉರಿಯೂತ ಮತ್ತು ಬಣ್ಣ ಬದಲಾವಣೆಯಾಗಬಹದು. ಈ ಯಂತ್ರಗಳನ್ನು ತೊಡೆಯ ಮೇಲೆ ಹಿಡಿದಿಟ್ಟುಕೊಳ್ಳುವಾಗ ಸಂತಾನೋತ್ಪತ್ತಿ ಅಂಗಗಳ ಬಳಿ ನೇರವಾಗಿ ಇರಿಸಲಾಗುತ್ತದೆ. ಇದರಿಂದ ಬರುವ ವಿಕಿರಣಗಳು ಪುರುಷರ ವೃಷಣ ಹಾಗೂ ಮಹಿಳೆಯರ ಅಂಡಾಶಯದ ಕ್ಯಾನ್ಸರ್ಗಳ ಅಪಾಯವನ್ನು ಹೆಚ್ಚಿಸುತ್ತವೆ.
ಲ್ಯಾಪ್ಟಾಪ್ಗಳನ್ನು ನಿಮ್ಮ ತೊಡೆಯ ಮೇಲೆ ದೀರ್ಘಕಾಲ ಇಡುವುದರಿಂದ ಅದರಿಂದ ಬರುವ ವಿಕಿರಣಗಳು ಚರ್ಮದ ಸ್ಥಿತಿಯನ್ನು ಹಾಳು ಮಾಡುತ್ತವೆ. ಇದು ತೊಡೆಗಳ ಮೇಲೆ ಕೆಂಪು ಅಥವಾ ಮಚ್ಚೆಯ ಕಲೆಗಳಾಗಿ ಕಾಣಿಸಿಕೊಳ್ಳುತ್ತದೆ. ದೀರ್ಘಕಾಲದವರೆಗೂ ಹೀಗೆ ಮುಂದುವರೆದರೆ ಚರ್ಮದಲ್ಲಿ ಬಣ್ಣ ಬದಲಾಗಿ ಸುಟ್ಟು ಹೋಗಬಹುದು. ಹಾಗಾಗಿ ಈ ಶಾಖವು ನಿಮ್ಮ ದೇಹಕ್ಕೆ ನೇರವಾಗಿ ಸ್ಪರ್ಶಿಸುವುದನ್ನು ತಪ್ಪಿಸಲು ಡೆಸ್ಕ್ಗಳನ್ನು ಬಳಸಿ.
ಗರ್ಭಿಣಿ ಮಹಿಳೆಯರು ತೊಡೆಯ ಮೇಲೆ ಲ್ಯಾಪ್‌ಟಾಪ್ ಇಟ್ಟುಕೊಂಡು ಕೆಲಸ ಮಾಡುವುದರಿಂದ ಅದರಿಂದ ಬರುವಂತಹ ವಿಕಿರಣಗಳು ಗರ್ಭದಲ್ಲಿ ಬೆಳೆಯುತ್ತಿರುವಂತಹ ಮಗುವನ್ನು ತಲುಪುವ ಸಾಧ್ಯತೆ ಹೆಚ್ಚಾಗಿರುತ್ತದೆ. ಎಲೆಕ್ಟ್ರಾನ್ ಯಂತ್ರಗಳಿಂದ ಹೊರಸೂಸುವ ಇಎಂಎಫ್ ಮಟ್ಟಗಳು ಭ್ರೂಣದ ಬೆಳವಣಿಗೆಗೆ ಗಂಭೀರ ಹಾನಿಯನ್ನು ಉಂಟುಮಾಡಬಹುದು. ಆದರಿಂದ ಗರ್ಭಿಣಿ ಮಹಿಳೆಯರು ಲ್ಯಾಪ್ಟಾಪ್ಗಳನ್ನು ಮೇಜಿನ ಮೇಲೆ ಇಟ್ಟು ಕೆಲಸ ಮಾಡುವುದು ಉತ್ತಮ.
ಲ್ಯಾಪ್‌ಟಾಪ್ ಸ್ಕ್ರೀನಿಂಗ್ಗಳು ಸಾಮಾನ್ಯವಾಗಿ ಕಡಿಮೆ ಮಟ್ಟದಲ್ಲಿರುತ್ತವೆ. ಆದರಿಂದ ನೀವು ತೊಡೆಯ ಮೇಲೆ ಇಟ್ಟು ಕೆಲಸ ಮಾಡುವುದರಿಂದ ಮುಂದಕ್ಕೆ ಬಾಗಿ ಕೂರಬೇಕಾಗುತ್ತದೆ. ಇದರಿಂದ ಕುತ್ತಿಗೆ, ಬೆನ್ನುಮೂಳೆ, ಕಣ್ಣು, ಸ್ನಾಯು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಲ್ಯಾಪ್‌ಟಾಪ್ ಅನ್ನು ಮೇಜಿನ ಮೇಲಿಟ್ಟು ಕೆಲಸ ಮಾಡುವುದರಿಂದ ಸರಿಯಾದ ದೇಹದ ಭಂಗಿಯನ್ನು ಹೊಂದಬಗಹುದು. (ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.