Mobile Internet:ಇಂದಿನ ಅತ್ಯಾಧುನಿಕ ಯುಗದಲ್ಲಿ ಮೊಬೈಲ್ ಫೋನ್ ಜೀವನದ ಅಂಗವಾಗಿಬಿಟ್ಟಿದೆ. ನಾವು ಅದರಲ್ಲಿ ಎಷ್ಟು ಮಗ್ನರಾಗಿದ್ದೇವೆ ಎಂದರೆ, ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ತನಕ ಅದರದ್ದೇ ಧ್ಯಾನ, ಜ್ಞಾನ ಎಂಬಾತಾಗಿದೆ. ಇನ್ನು ರಾತ್ರಿ ಮಲಗುವ ಮುನ್ನ ಹೆಚ್ಚಿನ ಮಂದಿ ಮೊಬೈಲ್ ಸ್ಕ್ರಾಲ್ ಮಾಡುತ್ತಾ, ಇಂಟರ್ನೆಟ್ ಆಫ್ ಮಾಡದೆ ತಮ್ಮ ದಿಂಬಿನ ಕೆಳಗೆ ಇಟ್ಟು ಮಲಗುವ ರೂಢಿ ಇರುತ್ತದೆ. ಆದರೆ, ಇದು ಕ್ರಮೇಣ ಅಭ್ಯಾಸವಾಗಿ ಬಿಟ್ಟರೆ ನಿಮ್ಮ ದಿನಚರಿ ಮತ್ತು ಆರೋಗ್ಯ ದುಷ್ಪರಿಣಾಮ ಬೀರಲು ಶುರುವಾಗುತ್ತದೆ.
ಇಂಟರ್ನೆಟ್ ಆನ್ ಆಗಿರುವ ಮೊಬೈಲ್ ಅನ್ನು ದಿಂಬಿನ ಕೆಳಗೆ ಇಟ್ಟುಕೊಳ್ಳುವುದರಿಂದ ಅನಾನುಕೂಲಗಳೇನು..?
1. ನಿದ್ರಾಹಿನತೆ
ಸ್ಮಾರ್ಟ್ಪೋನ್ನಿಂದ ಹೊರಸೂಸುವ ನೀಲಿ ಬೆಳಕು ಮೆಲಟೋನಿನ್ ಹಾರ್ಮೋನ್ ಬಿಡುಗಡೆಗೆ ಅಡ್ಡಿಯಾಗಬಹುದು. ಇದರಿಂದ ನಿದ್ರಾಹಿನತೆ ಕಾಡುತ್ತದೆ. ಅತಿಯಾದ ಇಂಟರ್ನೆಟ್ ಬಳಕೆಯಿಂದ ಕ್ರಮೇಣ ಸಮಸ್ಯೆಯಾಗಿ ಪರಿಣಮಿಸುತ್ತದೆ.
2.ಕ್ಯಾನ್ಸರ್ ಅಪಾಯ
ಕೆಲವು ಅಧ್ಯಯನಗಳು ಪ್ರಕಾರ, ಇಂಟರ್ನೆಟ್ ಆಫ್ ಮಾಡದೆ ಇರುವ ಮೊಬೈಲ್ ನಿಯಮಿತವಾಗಿ ನೋಡುವುದರಿಂದ ರೇಡಿಯೋ ಫ್ರೀಕ್ವೆನ್ಸಿ ವಿಕಿರಣಗಳನ್ನು ಹೊರಸುಸುತ್ತವೆ. ಇದರಿಂದ ಮೆದುಳು ಕ್ಯಾನ್ಸರ್ನಂತಹ ಹಲವು ರೀತಿಯ ಕ್ಯಾನ್ಸರ್ಗಳು ಅಪಾಯ ಅಧಿಕವಿರುತ್ತದೆ ಎಂದು ಹೇಳಲಾಗಿದೆ.
3.ವಿರ್ಯಗುಣಮಟ್ಟ ಕಡಿಮೆ
ಇನ್ನು ಕೆಲ ಅಧ್ಯನಗಳ ಪ್ರಕಾರ, ಇಂಟರ್ನೆಟ್ ಆಫ್ ಮಾಡದೆ ಇರುವ ಮೊಬೈಲ್ ನಿಯಮಿತವಾಗಿ ನೋಡುವುದರಿಂದ ಮತ್ತು ಸ್ಮಾರ್ಟ್‌ಫೋನ್ ಅಧಿಕ ಬಳಸುವುದರಿಂದ ರೇಡಿಯೋ ಫ್ರೀಕ್ವೆನ್ಸಿ ವಿಕಿರಣಗಳನ್ನು ಹೊರಸುಸುವಿಕೆ ಹೆಚ್ಚಗಾಗುತ್ತದೆ. ಇದರಿಂದ ವಿರ್ಯಗುಣಮಟ್ಟ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.
4.ತಲೆನೋವು
ಕೆಲವರು ಇಂಟರ್ನೆಟ್ ಆನ್ ಮಾಡಿಕೊಂಡು, ಮೊಬೈಲ್ ಫೋನ್‌ಗಳನ್ನು ದಿಂಬಿನ ಬಳಿ ಇಟ್ಟುಕೊಂಡು ಮಲಗುತ್ತಾರೆ. ಅವರಿಗೆ ತಲೆನೋವಿನ ಸಮಸ್ಯೆ ಇರಬಹುದು. ಇದು ಫೋನ್‌ನಿಂದ ಹೊರಸೂಸುವ ಶಾಖ ಅಥವಾ ರೇಡಿಯೋಫ್ರೀಕ್ವೆನ್ಸಿ ವಿಕಿರಣಕ್ಕೆ ಒಡ್ಡಿಕೊಳ್ಳುವುದರಿಂದ ಸಂಭವಿಸಬಹುದು ಎನ್ನಲಾಗಿದೆ.
5. ಒತ್ತಡ ಮತ್ತು ಖಿನ್ನತೆ ಹೆಚ್ಚಾಗುತ್ತದೆ
ರಾತ್ರಿಯಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನಿಮ್ಮ ದಿಂಬಿನ ಕೆಳಗೆ ಅಥವಾ ಹತ್ತಿರ ಇಟ್ಟುಕೊಂಡು ಮಲಗುವುದರಿಂದ ನಿಮ್ಮ ಒತ್ತಡ ಮತ್ತು ಖಿನ್ನತೆಯ ಮಟ್ಟ ಹೆಚ್ಚಾಗುತ್ತದೆ. ವಾಸ್ತವವಾಗಿ, ಮೊಬೈಲ್ ಬಳಕೆಯಿಂದಾಗಿ, ದೇಹದಲ್ಲಿ ಕಾರ್ಟಿಸೋನ್ ಎಂಬ ಒತ್ತಡದ ಹಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ, ಇದು ಮಾನಸಿಕ ಸ್ಥಿತಿಯನ್ನು ಹದಗೆಡಿಸುತ್ತದೆ.(ಏಜೆನ್ಸೀಸ್)