More

    ಕೆ.ಎಲ್​. ರಾಹುಲ್​ ಕೈಯಲ್ಲಿರುವ ಮಗು ಯಾರದ್ದು? ಆರ್​ಸಿಬಿ ಪರ ಆಡಿದ್ದ ಸ್ಟಾರ್​ ಕ್ರಿಕೆಟಿಗನ ಮಗಳು ಈಕೆ!

    ನವದೆಹಲಿ: ಲಖನೌ ಸೂಪರ್ ಜೈಂಟ್ಸ್ ತಂಡ ಪ್ರಸಕ್ತ ಐಪಿಎಲ್​ ಟೂರ್ನಿಯಲ್ಲಿ ಉತ್ತಮ ದಾಳಿ ನಡೆಸುತ್ತಿದೆ. ಮೊದಲ ಪಂದ್ಯದ ಸೋಲಿನಿಂದ ತಕ್ಷಣ ಚೇತರಿಸಿಕೊಂಡ ಎಲ್​ಎಸ್​ಜಿ, ನಂತರ ಹ್ಯಾಟ್ರಿಕ್ ಜಯ ಸಾಧಿಸಿತು. ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಆದ್ದರಿಂದಲೇ ಸತತ ಗೆಲುವುಗಳನ್ನು ಪಡೆಯುತ್ತಿದೆ. ಗಾಯದ ಬಳಿಕ ರೀ ಎಂಟ್ರಿ ಕೊಟ್ಟಿರುವ ಕೆ.ಎಲ್. ರಾಹುಲ್ ಬ್ಯಾಟಿಂಗ್ ಮಾತ್ರವಲ್ಲದೆ ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

    ಇದರ ನಡುವೆ ಇತ್ತೀಚಿಗೆ ರಾಹುಲ್​ ಫೋಟೋವೊಂದು ವೈರಲ್ ಆಗಿದೆ. ಮಗುವನ್ನು ಹೊತ್ತೊಯ್ಯುತ್ತಿರುವ ಚಿತ್ರ ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ರಾಹುಲ್-ಅಥಿಯಾ ದಂಪತಿಗೆ ಮಗಳು ಯಾವಾಗ ಜನಿಸಿದಳು ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆದರೆ, ರಾಹುಲ್ ಕೈಯಲ್ಲಿರುವ ಮಗು ಅವರ ಮಗಳಲ್ಲ. ಹಾಗಾದರೆ ಯಾರ ಮಗು? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಮುಂದೆ ಓದಿ.

    ರಾಹುಲ್ ಎತ್ತಿಕೊಂಡ ಮಗು ಬೇರೆ ಯಾರೂ ಅಲ್ಲ ದಕ್ಷಿಣ ಆಫ್ರಿಕಾದ ಲೆಜೆಂಡರಿ ಓಪನರ್ ಕ್ವಿಂಟನ್ ಡಿ ಕಾಕ್ ಅವರ ಮಗಳು. ಆಕೆಯ ಹೆಸರು ಕಿಯಾರಾ. ಡಿ ಕಾಕ್ ಅವರು ಐಪಿಎಲ್​ನಲ್ಲಿ ಹಲವು ತಂಡಗಳನ್ನು ಪ್ರತಿನಿಧಿಸಿದ್ದಾರೆ. ಮುಂಬೈ ಇಂಡಿಯನ್ಸ್‌ ಪರ ಆಡಿದ್ದ ಡಿ ಕಾಕ್​, ಎರಡು ಬಾರಿ ಟ್ರೋಫಿ ಜಯಿಸಿದಾಗ ತಂಡದ ಭಾಗವಾಗಿದ್ದರು. ಎರಡೂ ಬಾರಿ ತಂಡದ ಗೆಲುವಿನಲ್ಲಿ ಅವರ ಕೊಡುಗೆ ಅಪಾರ. ಡಿ ಕಾಕ್ 2013 ರಿಂದ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಇದುವರೆಗೆ 100 ಪಂದ್ಯಗಳನ್ನು ಆಡಿರುವ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ 32.47 ಸರಾಸರಿಯಲ್ಲಿ 3,052 ರನ್ ಗಳಿಸಿದ್ದಾರೆ. 2 ಶತಕ ಸೇರಿದಂತೆ 22 ಅರ್ಧ ಶತಕ ದಾಖಲಿಸಿದ್ದಾರೆ. ಮುಂಬೈ ಹೊರತಾಗಿ ಡಿ ಕಾಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕೂಡ ಆಡಿದ್ದರು.

    ಲಖನೌ ಸೂಪರ್‌ ಜೈಂಟ್ಸ್ ಪ್ರಸಕ್ತ ಆವೃತ್ತಿಯ ಮಿನಿ ಹರಾಜಿನಲ್ಲಿ ಡಿ ಕಾಕ್ ಅವರನ್ನು 6.75 ಕೋಟಿ ರೂ. ಕೊಟ್ಟು ಖರೀದಿಸಿತು. ಇಬ್ಬರೂ ಒಂದೇ ತಂಡದ ಪರ ಆಡುತ್ತಿದ್ದಾರೆ. ಹೀಗಾಗಿ ರಾಹುಲ್ ತಮಾಷೆಯಾಗಿ ಸ್ಟಾರ್ ಓಪನರ್ ಮಗಳನ್ನು ಎತ್ತಿಕೊಂಡು ಕ್ಯಾಮೆರಾಗೆ ಪೋಸ್ ನೀಡಿದರು. ಕಿಯಾರಾ ಜೊತೆಗೆ ರಾಹುಲ್​ ಚಿತ್ರಗಳನ್ನು ನೋಡಿದ ನೆಟ್ಟಿಗರು ಅವರ ಮಗಳಿರಬಹುದೆಂದು ಅಚ್ಚರಿಪಟ್ಟರು. ಆದರೆ ನಿಜವಾದ ವಿಷಯ ತಿಳಿದ ಬಳಿಕ ಡಿಕಾಕ್ ಅವರ ಮಗಳು ತುಂಬಾ ಮುದ್ದಾಗಿದ್ದಾಳೆ ಎಂದು ಕಾಮೆಂಟ್​ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಇನ್ನೂ ಡಿ ಕಾಕ್ ಅವರ ಪತ್ನಿಯ ಹೆಸರು ಸಾಶಾ ಹರ್ಲಿ. 16ನೇ ವಯಸ್ಸಿನಿಂದಲೂ ಸಾಶಾ ಹರ್ಲಿಯನ್ನು ಡಿ ಕಾಕ್​ ಪ್ರೀತಿಸುತ್ತಿದ್ದರು. ಐದು ವರ್ಷಗಳ ಡೇಟಿಂಗ್ ನಂತರ, 2016ರ ಸೆಪ್ಟೆಂಬರ್ ತಿಂಗಳಲ್ಲಿ ಮದುವೆಯಾದರು. 2022ರಲ್ಲಿ ದಂಪತಿಗೆ ಕಿಯಾರ ಜನಿಸಿದಳು. (ಏಜೆನ್ಸೀಸ್​)

    ನನಗೀಗ 17 ವರ್ಷ ಇಂಥಾ ಪ್ರಶ್ನೆಗಳನ್ನು ಯಾಕೆ ಕೇಳ್ತೀರಿ! ನಟಿ ಅನಿಕಾ ಸುರೇಂದ್ರನ್ ಓಪನ್​ ಟಾಕ್​​

    ಓವೈಸಿ ಭದ್ರಕೋಟೆಗೆ ನುಗ್ಗಿ ಸವಾಲು ಹಾಕಿದ ಲೇಡಿ ಟೈಗರ್​! ಮೋದಿ ಮೆಚ್ಚಿದ ಮಾಧವಿ ಲತಾ ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts