More

    ನನಗೀಗ 17 ವರ್ಷ ಇಂಥಾ ಪ್ರಶ್ನೆಗಳನ್ನು ಯಾಕೆ ಕೇಳ್ತೀರಿ! ನಟಿ ಅನಿಕಾ ಸುರೇಂದ್ರನ್ ಓಪನ್​ ಟಾಕ್​​

    ಚೆನ್ನೈ: ತಲಾ ಅಜಿತ್​ ಅಭಿನಯದ ಕಾಲಿವುಡ್​ ಸೂಪರ್​ ಡೂಪರ್​ “ಯೆನ್ನೈ ಅರಿಂದಾಲ್​” ಮತ್ತು “ವಿಶ್ವಾಸಂ” ಚಿತ್ರಗಳಲ್ಲಿ ಮಗಳ ಪಾತ್ರದಲ್ಲಿ ಬಾಲ ನಟಿಯಾಗಿ ನಟಿಸುವ ಮೂಲಕ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದ ಅನಿಕಾ ಸುರೇಂದ್ರನ್, ಇದೀಗ ನಾಯಕಿಯಾಗಿ ಅನೇಕ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಅನಿಕಾ ಅವರ ವಯಸ್ಸು 19. ದಕ್ಷಿಣ ಭಾರತದ ಭರವಸೆಯ ನಾಯಕಿಯಾಗುವ ಎಲ್ಲ ಲಕ್ಷಣಗಳು ಅನಿಕಾರಲ್ಲಿದೆ.

    ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಅನಿಕಾ, ಆಗಾಗ ತಮ್ಮ ಸ್ಟೈಲಿಶ್​ ಫೋಟೋಗಳನ್ನು ಹರಿಬಿಡುವ ಮೂಲಕ ಅಭಿಮಾನಿಗಳ ಮನತಣಿಸುತ್ತಿರುತ್ತಾರೆ. ಅಲ್ಲದೆ, ಜಾಲತಾಣದಲ್ಲಿ ಲೈವ್​ ಬರುವ ಮೂಲಕ ಅಭಿಮಾನಿಗಳೊಂದಿಗೆ ಮಾತುಕತೆ ನಡೆಸುತ್ತಿರುತ್ತಾರೆ. ಸದ್ಯ ಅನಿಕಾ ಅವರು ನಿಲುಕು ಎನ್​ ಮೇಲ್​ ಎನ್ನಾಡಿ ಗೋಪಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

    ಇದರ ನಡುವೆ ಅನಿಕಾ ಸುರೇಂದ್ರನ್​ ಅವರ ಹಳೆಯ ಸಂದರ್ಶನದ ವಿಡಿಯೋ ಜಾಲತಾಣದಲ್ಲಿ ಮತ್ತೆ ವೈರಲ್​ ಆಗುತ್ತದೆ. ಸಂದರ್ಶನದಲ್ಲಿ ಅನಿಕಾರನ್ನು ನೀವು ಬಿಯರ್​ ಕುಡಿಯುತ್ತೀರಾ? ಅಥವಾ ವೈನ್​ ಕುಡಿಯುತ್ತೀರಾ? ಎಂದು ಆ್ಯಂಕರ್​ ಪ್ರಶ್ನೆ ಮಾಡಿದರು. ಇದಕ್ಕೆ ಖಾರವಾಗಿ ಉತ್ತರ ನೀಡುವ ಅನಿಕಾ, ನನಗಿನ್ನೂ 17 ವರ್ಷ. ನೀವು ನನಗೆ ಈ ರೀತಿಯ ಪ್ರಶ್ನೆಯನ್ನು ಕೇಳುತ್ತಿದ್ದೀರಿ. ಅಂತಹ ಪ್ರಶ್ನೆಯನ್ನು ನನಗೆ ಎಂದಿಗೂ ಕೇಳಬೇಡಿ ಎಂದು ಅನಿಕಾ ಹೇಳಿದ್ದರು. ಆದರೆ, ಬಿಯರ್​ ಮತ್ತು ವೈನ್​ ಎರಡರಲ್ಲಿ ವೈನ್​ ಆಯ್ಕೆ ಮಾಡಿಕೊಂಡಿದ್ದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್​ ಆಗುತ್ತಿದೆ.

    ಇನ್ನೂ ಅನಿಕಾ ಅವರು ತುಂಬಾ ಬೋಲ್ಡ್​ ಆಗಿ ಮಾತನಾಡುವುದರಲ್ಲಿ ಹಿಂಜರಿಯುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕೇಳುವ ಅಶ್ಲೀಲ ಪ್ರಶ್ನೆಗಳಿಗೂ ತುಂಬಾ ನೇರವಾಗಿಯೇ ಉತ್ತರಿಸುತ್ತಾರೆ. ಈ ಹಿಂದೆ ನೆಟ್ಟಿಗರೊಬ್ಬರು ಇದು ಸ್ವಲ್ಪ ವಿಚಿತ್ರ ಅನಿಸಬಹುದು ಆದರೆ, ನನಗೆ ಬ್ರಾಗಳ ಬಗ್ಗೆ ಸಲಹೆ ಬೇಕಿದೆ. ನೀವು ಯಾವುದನ್ನು ಬಳಸುತ್ತೀರಿ ಹೇಳಿ ಎಂದು ಪ್ರಶ್ನಿಸಿದ್ದರು. ಇದಕ್ಕೆ ಸ್ವಲ್ಪವೂ ಸಂಕೋಚ ಪಟ್ಟುಕೊಳ್ಳದ ಅನಿಕಾ, ಹತ್ತಿಯಲ್ಲಿ ಮಾಡಿದ ಸರಿಯಾದ ಗಾತ್ರದ ಬ್ರಾಗಳನ್ನು ನಿಮಗೆ ಸಲಹೆ ನೀಡುತ್ತೇನೆ. ಜಿವಾಮೆಯಂತಹ ಸೈಟ್​ಗಳ ಮೂಲಕ ಆನ್​ಲೈನ್​ನಲ್ಲಿ ನಾನು ಖರೀದಿಸುತ್ತೇನೆ ಎಂದಿದ್ದರು. ಇದು ಕೂಡ ವೈರಲ್​ ಆಗಿತ್ತು. (ಏಜೆನ್ಸೀಸ್​)

    ಕ್ಷಮೆಯಾಚನೆ ತಿರಸ್ಕರಿಸಿ ಯೋಗ ಗುರು ಬಾಬಾ ರಾಮದೇವ್​ ವಿರುದ್ಧ ಮತ್ತೆ ಗುಡುಗಿದ ಸುಪ್ರೀಂಕೋರ್ಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts