ಒಂದು ಪ್ಯಾಕ್​ ಸಿಗರೇಟ್​​ನಿಂದ ನಮ್ಮ ಜೀವಿತಾವಧಿ ಎಷ್ಟು ಕಡಿಮೆ ಆಗುತ್ತೆ ಗೊತ್ತಾ?; ಅಧ್ಯಯನದ ವರದಿ ಬಹಿರಂಗ ಅಸಲಿ ಸಂಗತಿ | Cigarettes

dk - 2025-02-21T173535.553
Published on

Cigarettes:ಸಿಗರೇಟ್​ ಸೇದುವುದು ಆರೋಗ್ಯಕ್ಕೆ ಮಾತ್ರ ಅಪಾಯಕಾರಿ ಅಲ್ಲ, ನಿಮ್ಮ ಜೀವನವೂ ಅಂತ್ಯವಾಗಬಹುದು. ಹೌದು, ನಿಧಾನವಾಗಿ ನಿಮ್ಮ ಜೀವಿತಾವಧಿ ಕೂಡ ಕಡಿಮೆ ಮಾಡುತ್ತದೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.

ದಿನಕ್ಕೆ ಒಂದು ಸಿಗರೇಟ್ ಸೇದಿದರೆ, ಜಾಗರೂಕರಾಗಿರಿ. ಹೊಸ ಅಧ್ಯಯನದಲ್ಲಿ ಭಯಾನಕ ಸಂಗತಿ ಬಹಿರಂಗವಾಗಿದೆ. ಲಂಡನ್ ವಿಶ್ವವಿದ್ಯಾಲಯದ ಕಾಲೇಜು ನಡೆಸಿದ ಸಂಶೋಧನೆಯ ಪ್ರಕಾರ, ದಿನಕ್ಕೆ ಒಂದು ಸಿಗರೇಟ್ ಸೇದುವುದರಿಂದ ಜೀವಿತಾವಧಿ ಸರಾಸರಿ 20 ನಿಮಿಷಗಳಷ್ಟು ಕಡಿಮೆಯಾಗುತ್ತದೆ. ಹೀಗಾಗಿ, ಕೂಡಲೇ ಸಿಗರೇಟ್​ ಸೇದುವವರು ಬಿಡುವಂತೆ ಏಚ್ಚರಿಕೆ ಕೊಟ್ಟಿದ್ದಾರೆ.

ಒಂದು ಸಿಗರೇಟ್​ನಿಂದ ಪುರುಷರ ಸರಾಸರಿ ಜೀವಿತಾವಧಿ 17 ನಿಮಿಷಗಳು ಕಡಿಮೆ ಮಾಡುತ್ತದೆ ಮತ್ತು ಮಹಿಳೆಯರ ಜೀವಿತಾವಧಿ 22 ನಿಮಿಷಗಳ ಕಾಲ ಕಡಿಮೆಯಾಗುತ್ತದೆ. ಇಟ್ಟಿನಲ್ಲಿ ಒಂದು ಪ್ಯಾಕ್ ಸಿಗರೇಟ್​ನಿಂದ 7 ಗಂಟೆಗಳ ​ಜೀವಿತಾವಧಿ ಕಡಿಮೆಯಾಗಲಿದೆ ಎಂದು ಹೊಸ ಅಧ್ಯಯನವೊಂದು ಅಂತಕಕಾರಿ ಅಂಶವನ್ನು ಹೊರ ಹಾಕಿದೆ.

ಸಿಗರೇಟ್​ ಸೇವನೆಯೂ ನಿಮ್ಮ ಜೀವಿತಾವಧಿನ್ನು ನಿಧಾನವಾಗಿ ಕಸಿದಿಕೊಳ್ಳಲಿದೆ ಎಂದು ಸಂಶೋಧಕರು ಹೇಳುತ್ತಾರೆ. ಧೂಮಪಾನಿಗಳು ಎಷ್ಟು ಬೇಗ ಧೂಮಪಾನ ಬಿಡುತ್ತಾರೊ ಅಷ್ಟು ಬೇಗ ಅವರಿಗೆ ಲಾಭ. ಇದರಿಂದ ಆರೋಗ್ಯದ ಲಾಭ ಮತ್ತು ದೀರ್ಘ ಆರೋಗ್ಯಕರ ಜೀವನವನ್ನು ಪಡೆಯುತ್ತೀರ. ಅಲ್ಲದೆ, ಧೂಮಪಾನವನ್ನು ಸಂಪೂರ್ಣವಾಗಿ ತ್ಯಜಿಸಿದರೆ ಮಾತ್ರ ಅದರಿಂದ ಲಾಭವಾಗಲಿದೆ ಎಂದು ಸಂಶೋಧಕರು ಹೇಳುತ್ತಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net