

First Human:ಮಾನವ ಶಾಸ್ತ್ರವು ಮಾನವ ಅಭಿವೃದ್ಧಿ, ಸಂಸ್ಕೃತಿ, ಭಾಷೆ ಮತ್ತು ಸಾಮಾಜದ ನಡುವಳಿಕೆಯನ್ನು ಅಧ್ಯಯನ ಮಾಡುವ ವಿಜ್ನಾನವಾಗಿದೆ. ಅದರ ಮಹತ್ವವನ್ನು ವಿವವರಿಸಲು ಪ್ರತಿ ವರ್ಷ ಫೆ. 20ರಂದು ವಿಶ್ವ ಮಾನವಶಾಸ್ತ್ರ ದಿನವನ್ನು ಆಚರಿಸಲಾಗುತ್ತದೆ. ಆದೇ ರೀತಿ ಈ ವರ್ಷದ ಆಚರಣೆಯ ಸಂದರ್ಭದಲ್ಲಿ ವಿಜ್ನಾದ ಪ್ರಕಾರ ಜಗತ್ತಿನ ಮೊದಲ ಮಾನವನ್ಯಾರು ಎಂಬ ಚರ್ಚೆ ನಡೆದಿದ್ದು, ಮೊದಲ ಮನುಷ್ಯ ಯಾರು ಎಂಬುವುದನ್ನು ತಿಳಿಯೋಣ.
ವಿಜ್ನಾನದ ಪ್ರಕಾರ ಜಗತ್ತಿನ ಮೊದಲ ಮಾನವ ಹೋಮೋ ಹ್ಯಾಬಿಲಿಸ್(Homo habilis) ಎಂದು ಗುರುತಿಸಲಾಗಿದೆ. ಅಲ್ಲದೆ, ಇದಕ್ಕೆ ಪುರಾವೆ ಎಂಬಂತೆ, ಅವರ ಅವೇಶಷಗಳು ಇತ್ತೀಚಿಗೆ ಆಫ್ರಿಕಾದಲ್ಲಿ ಪತ್ತೆಯಾಗಿವೆ. ಅವುಗಳ ವಯಸ್ಸು ಸುಮಾರು 2.8 ರಿಂದ 1.4 ಮಿಲಿಯನ್ ವರ್ಷಗಳಷ್ಟು ಹಳೆಯದು. ಎರಡು ಕಾಲುಗಳ ಮೇಲೆ ನಡೆಯುವ ಸಾಮರ್ಥ್ಯವಿರುವ ಮೊದಲ ಜೀವಿ ಹೋಮೋ ಹ್ಯಾಬಿಲಿಸ್ ಆಗಿದ್ದರಿಂದ ಅವನನ್ನು ಜಗತ್ತಿನ ಮೊದಲ ಮಾನವ ಎಂದು ಪರಿಗಣಿಸಲಾಗಿದೆ ಎಂದು ತಜ್ಞರು ಹೇಳಿದ್ದಾರೆ. ಅಲ್ಲದೆ, ಈ ಬಗ್ಗೆ ಸಂಶೋಧನೆ ಮುಂದುವರೆದಿದೆ.
ಹೋಮೋ ಸೇಪಿಯನನ್ಸ್ ಅನ್ನು ಅಧುನಿಕ ಮಾನವರ ಪೂರ್ವಜರು ಎಂದು ಪರಿಗಣಿಸಲ್ಪಟ್ಟಿದೆ. ಇಂದು ನಾವರಲ್ಲರೂ ಹೋಮೋ ಸೇಪಿಯನನ್ಸ್ ಎಂದು ಪರಿಗಣಿಸಲ್ಪಟ್ಟಿದೆ. ಹೋಮೋ ಸೇಪಿಯನ್ ಅವಶೇಷಗಳು ಕೂಡ ಆಫ್ರಿಕಾದಲ್ಲಿ ಕಂಡಬಂದಿವೆ. ಅವು 3 ಲಕ್ಷ ವರ್ಷಗಳಷ್ಟು ಹಳೆಯವು ಎಂದು ಹೇಳಲಾಗಿದೆ.
ಹೋಮೋ ಸೇಪಿಯನ್ಸ್ ನಮ್ಮೆಲ್ಲರಂತೆಯೇ ಕಾಣುವ ಮೊದಲ ಜೀವಿಯಾಗಿರುವುದರಿಂದ ಅವರನ್ನು ನಮ್ಮ ಪೂರ್ವಜರೆಂದು ಪರಿಗಣಿಸಲಾಗುತ್ತದೆ. ಜನರು ಪರಸ್ಪರ ಭೇಟಿಯಾಗಿ ಮಾತನಾಡುವಾಗ, ನಮ್ಮ ಆಲೋಚನೆಗಳು ವರ್ಗಾವಣೆಯಾಗುತ್ತವೆ ಎಂದು ಹೇಳಲಾಗುತ್ತದೆ. ಅದೇ ರೀತಿ, ನಾವು ಸಹ ಅಭಿವೃದ್ಧಿ ಹೊಂದಿದ್ದೇವೆ ಎಂದು ಅಧ್ಯಯನ ಹೇಳುತ್ತದೆ.(ಏಜೆನ್ಸೀಸ್)