ಕೋಟಿ..ಕೋಟಿ ರೂ. ಆಸ್ತಿ ಒಡೆಯ ಅರ್ಜುನ್ ಸರ್ಜಾ ಮಗಳಿಗೆ ವರದಕ್ಷಿಣೆ ಕೊಟ್ಟಿದ್ದು ಇಷ್ಟು ಕೋಟಿನಾ?!

arjunsarja
Published on

ಬೆಂಗಳೂರು: ನಟ ಅರ್ಜುನ್ ಸರ್ಜಾ ಹಿರಿಯ ಮಗಳು ಐಶ್ವರ್ಯಾ ಅರ್ಜುನ್ ಮದುವೆ ಇತ್ತೀಚೆಗೆ ಅದ್ಧೂರಿಯಾಗಿ ನಡೆದಿದ್ದು ಗೊತ್ತೇ ಇದೆ. ಅರ್ಜುನ್ ಮಗಳು ಕಾಲಿವುಡ್ ಹಾಸ್ಯನಟ ತಂಬಿ ರಾಮಯ್ಯ ಅವರ ಮಗ ಉಮಾಪತಿ ರಾಮಯ್ಯ ಅವರನ್ನು ವಿವಾಹವಾದರು. ಅರ್ಜುನ್ ಪೇರೂರಿನಲ್ಲಿ ತಮ್ಮದೇ ಆದ ಆಂಜನೇಯ ದೇವಸ್ಥಾನವನ್ನು ನಿರ್ಮಿಸಿದರು. ಈ ದೇವಸ್ಥಾನದಲ್ಲಿ ಮಗಳ ಮದುವೆ ಮಾಡಿದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿವೆ.

ಮದುವೆಯ ನಂತರ ಚೆನ್ನೈನಲ್ಲಿ ಅದ್ಧೂರಿ ಆರತಕ್ಷತೆಯೂ ನಡೆಯಿತು. ರಜನಿಕಾಂತ್ ಜತೆಗೆ ಕಮಲ್ ಹಾಸನ್ ಮತ್ತು ಸ್ಟಾರ್ ನಟರು ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಮಧ್ಯೆ ಅರ್ಜುನ್ ಮಗಳಿಗೆ ಎಷ್ಟು ವರದಕ್ಷಿಣೆ ಕೊಟ್ಟಿದ್ದಾರೆ ಎಂಬ ಚರ್ಚೆ ಕಾಲಿವುಡ್ ಮಾಧ್ಯಮಗಳಲ್ಲಿ ನಡೆಯುತ್ತಿದೆ.

ತಮಿಳು, ತೆಲುಗು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿರುವ ಅರ್ಜುನ್ ಪ್ರತಿ ಚಿತ್ರಕ್ಕೂ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಾರೆ.

2023 ರ ಅಂದಾಜಿನ ಪ್ರಕಾರ, ಅರ್ಜುನ್ ಸರ್ಜಾ ನಿವ್ವಳ ಮೌಲ್ಯ 80 ಕೋಟಿ. ಆದರೆ ಅರ್ಜುನ್ ತನ್ನ ಪೂರ್ವಜರು ನೀಡಿದ ಆಸ್ತಿಯನ್ನೆಲ್ಲ ಮಗಳ ಹೆಸರಿಗೆ ವರ್ಗಾಯಿಸಿದ್ದಾರೆ. ಅವರು ತಮ್ಮ ಮಗಳಿಗೆ ಚಿನ್ನಾಭರಣಗಳು ಮತ್ತು ಒಂದು ಕೋಟಿ ರೂಪಾಯಿಗೂ ಹೆಚ್ಚು ಬೆಲೆಬಾಳುವ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ. ಆದರೆ ಅರ್ಜುನ್ ಮಗಳಿಗೆ ವರದಕ್ಷಿಣೆ ಕೊಟ್ಟಿರುವ ಬಗ್ಗೆ ಅಧಿಕೃತ ಸ್ಪಷ್ಟನೆ ಇಲ್ಲ. ಕೆಲವು ಮೂಲಗಳ ಪ್ರಕಾರ ಇಷ್ಟು ದುಬಾರಿ ಬೆಲೆ ಬಾಳುವ ಮನೆಯನ್ನು ಮಗಳಿಗೆ ಗಿಫ್ಟ್​​ ಮಾಡಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net